ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ವಿತರಣೆ ಸಮಾರಂಭ

ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ವಿತರಣೆ ಸಮಾರಂಭ

ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ವಿತರಣೆ ಸಮಾರಂಭ

ಕಲಬುರಗಿ: ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಬಿಎಸ್‌ಎಸ್‌ಮೈಕ್ರೋ ಫೈನಾನ್ಸ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಫ್ ವಿತರಣೆ ಸಮಾರಂಭ ಜರುಗಿತು. ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಒಒ ಎಸ್.ಪಂಚಾಕ್ಷರಿ ಅವರು ಮಾತನಾಡಿ ಬಿ ಎಸ್ ಎಸ್ ಮೈಕ್ರೋಫೈನಾನ್ಸ್ ಲಿ. ಬಿ ಎಸ್ ಎಸ್ ಸಂಸ್ಥೆಯು ತನ್ನ "ಸಿ.ಎಸ್.ಆರ್ ಇನಿಷಿಎಟಿವ್" ಅಡಿಯಲ್ಲಿ ಅರೋಗ್ಯ, ಶಿಕ್ಷಣ ಮತ್ತು ಹೈನುಗಾರಿಕೆ ಎಂಬ ಮೂರು ಅಂಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅರೋಗ್ಯ : ಅಪೋಲೋ ಟೆಲಿ ಮೆಢಿಷನ್ ನೆಟ್ವರ್ಕ್ ಪೌಂಡೆಷನ್ ಮುಖಾಂತರ ಬಿಹಾರ, ಮಹರಾಷ್ಟ್ರ ಮತ್ತು ಕರ್ನಾಟಕದಲ್ಲಿ ಐದು ಸಂಚಾರಿ ಅರೋಗ್ಯ ಸೇವೆ ಮಾಡುತ್ತಿದೆ.

ಶಿಕ್ಷಣ : ಸುಮಾರು ವರ್ಷಗಳಿಂದ ಕರ್ನಾಟಕ, ಬಿಹಾರ, ಮಹರಾಷ್ಟ್ರ, ತಮಿಳುನಾಡು ಮತ್ತು ಮದ್ಯಪ್ರದೇಶ ಈ ರಾಜ್ಯಗಳಲ್ಲಿ ಸರ್ಕಾರಿ ಕಟ್ಟಡ ಅಭಿವೃದ್ಧಿ ಹಾಗೂ 5000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಪಿಠೋಪಕರಣಗಳನ್ನು ನೀಡುವುದು ಮತ್ತು ಸರ್ಕಾರಿ ಶಾಲೆಗಳನ್ನು ನವೀಕರಿಸುವುದು, ವೈಜ್ಞಾನಿಕ ತಂತ್ರಜ್ಞಾನ ವನ್ನು ಅಳವಡಿಸುವುದು, ರಾಜ್ಯದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಅಹಾರ ಕಿಟ್ ವಿತರಣೆ ಹಾಗೂ ವಿದ್ಯಾರ್ಥಿ ವೇತನ ನೀಡುತ್ತಾ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿದೆ.

ಜೀವನೋಪಾಯ; ಸಮಗ್ರ ಜಾನುವಾರು ಅಭಿವೃದ್ಧಿ ಕೇಂದ್ರಗಳನ್ನು ಕರ್ನಾಟಕದಲ್ಲಿ ಮಂಡ್ಯ, ಗದಗ, ಹಾವೇರಿ, ಧಾರವಾಡ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಕಲ್ಪಿಸುತ್ತಿದೆ. ಅದರಂತೆ ಬೇರೆ ರಾಜ್ಯಗಳಾದ ಬಿಹಾರ, ಮಹರಾಷ್ಟ್ರ ಮತ್ತು ಮದ್ಯಪ್ರದೇಶದಲ್ಲಿ ಹೈನುಗಾರಿಕೆಯ ಮುಖಾಂತರ ರೈತರ ಏಳಿಗೆಗೆ ಶ್ರಮಿಸುತ್ತಿದೆ.

ಪ್ರವಾಹ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಣೆ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಠೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು, ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು ಮತ್ತು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ಅತ್ಯುನ್ನತ ಹುದ್ದೆಗಳಾದ ಐಎಎಸ್/ ಐಪಿಎಸ್ ಗುರಿಯನ್ನು ಹೊಂದಲು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಬಸವೇಶ್ವರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷಕುಮಾರ ಪಾಟೀಲ, ಪಂಡಿತ್ ಗಂಗಾಧರ ಪಾಟಿಲ್, ಎಮ್ ಮೆಗಳಮನಿ, ಗುಳ್ಳಪ್ಪ ಖೋತ್, ವಿರೋಪಕ್ಷ ಗೌಡ ವಿ, ಮಲ್ಲಿಕಾರ್ಜುನ್ ಎನ್, ಸಿದ್ಧಾರ್ಥ ಎನ್, ದೇವರಾಜ್ ಸಿ ಅವರು ಸೇರಿದಂತೆ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.