ಅಭಿಷೇಕ್ ನ ಬಾಳಿಗೆ ಬೆಳಕಾದ ಬಸವೇಶ್ವರ ಆಸ್ಪತ್ರೆ

ಅಭಿಷೇಕ್ ನ ಬಾಳಿಗೆ ಬೆಳಕಾದ ಬಸವೇಶ್ವರ ಆಸ್ಪತ್ರೆ

ಅಭಿಷೇಕ್ ನ ಬಾಳಿಗೆ ಬೆಳಕಾದ ಬಸವೇಶ್ವರ ಆಸ್ಪತ್ರೆ

ಕಲಬುರ್ಗಿ: 23ವರ್ಷದ ಅಭಿಷೇಕ್ ಎಂಬ ಕಲಬುರಗಿಯ ಆದರ್ಶ ನಗರದ ಯುವಕ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯ ಹಾಗೂ ಇತರ ಅಂಗಾಂಗಗಳಿಗೆ ಗಾಯಗಳಾಗಿ,ನಗರದ ಪ್ರತಾಷ್ಠಿತ ಆಸ್ಪತ್ರೇಗೆ ದಾಖಲಾಗಿದ್ದ ಆದರೆ ಅವನು ಅಲ್ಲಿ ಗುಣಮುಖನಾಗದೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಗೆ ಇಂಟ್ಯೂಬೇಟೆಡ್ ಸ್ಥಿತಿಯಲ್ಲಿಯೆ ಅವನನ್ನು ಅವನ ಸಂಬಂಧಿಕರು ದಾಖಲಿಸಿದರು.

ಆತ ಬಸವೇಶ್ವರ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಖಾಸಗಿ ಆಸ್ಪತ್ರೆಯಿಂದ ವೆಂಟಿಲೇಟರ್ ಸಹಾಯದಿಂದಲೆ ತರಲಾಯಿತು ಇಲ್ಲಿ ಇವರನ್ನು ಪರೀಕ್ಷೆ ಮಾಡಿದಾಗ ಕೋಮಾ ಸ್ಕೇಲ್ (GCS) 5 ಆಗಿರುವದು ದೃಢವಾಯಿತು ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಸೇರಿ ವೆಂಟಿಲೇಟರ್ ಸಹಾಯದಿಂದಲೆ ಚಿಕಿತ್ಸೆ ಮುಂದುವರೆಸಿದರು. ನಂತರ ಮೆದುಳಿನ MRI ಮಾಡಲಾಯಿತು ಅದರಲ್ಲಿ ಗ್ರೇಡ್ 2 ಡಿಫ್ಯೂಸ್ ಆಕ್ಸೋನಲ್ ಇಂಜುರಿ, ಎರಡೂ ಮುಂಭಾಗದ (ಫ್ರಂಟಲ್) ಮತ್ತು ಬಲ ಟೆಂಪೋರಲ್ ಭಾಗದಲ್ಲಿ ವಾಸೋಜೆನಿಕ್ ಈಡಿಮಾ ಜೊತೆಯಾದ ತೀವ್ರ ಇಂಟ್ರಾಪಾರೆಂಕೈಮಲ್ ಕಂಟ್ಯೂಷನ್, ಜೊತೆಗೆ ಸಬ್‌ಡ್ಯುರಲ್ ಹೆಮರೇಜ್ ಕಂಡುಬಂದಿತು. ಇಂತಹ ಸ್ಥಿತಿಗಳಲ್ಲಿ ಮರಣದ ಪ್ರಮಾಣವು 5–17% ವರೆಗೆ ಇರುತ್ತದೆ.ಇಂತಹ ಸಂದರ್ಭದಲ್ಲಿ ವಿಳಂಬವಿಲ್ಲದೆ ಚಿಕಿತ್ಸೆ ನೀಡಿದಲ್ಲಿ ರೋಗಿಯ ಜೀವ ಉಳಿಯುವ ಪ್ರಮಾಣವು 90% ಕ್ಕಿಂತ ಹೆಚ್ಚು ಇರುತ್ತದೆ.ಆಸ್ಪತ್ರೆಯ ವೈದ್ಯರ ತಂಡ ರೋಗಿಯನ್ನು ಐಸಿಯು ನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು. ಡಿಫ್ಯೂಸ್ ಆಕ್ಸೋನಲ್ ಇಂಜುರಿ ಮತ್ತು ಸಬ್‌ಡ್ಯುರಲ್ ಹೆಮರೇಜ್ ನಿರ್ವಹಣೆಗೆ ಮೆದುಳು ರಕ್ಷಣಾತ್ಮಕ ಕ್ರಮಗಳು, ಆಕ್ರಮಣಕಾರಿ ಮಾನಿಟರಿಂಗ್ ಹಾಗೂ ಹೀಮೋಡೈನಾಮಿಕ್ ಸ್ಥಿರೀಕರಣ ಮಾಡಲಾಯಿತು. ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ಕ್ರಮಬದ್ಧ ಲ್ಯಾಬೊರೇಟರಿ ಪರೀಕ್ಷೆಗಳು ಮತ್ತು ಮೆದುಳಿನ CT ಸ್ಕ್ಯಾನ್‌ಗಳನ್ನು ಬಳಸಲಾಯಿತು.ಈ ಎಲ್ಲ ಚಿಕಿತ್ಸೆಗಳಿಗೆ ಸರಿಯಾಗಿ ಸ್ಪಂದಿಸಿದ ರೋಗಿಯ ಸ್ಥಿತಿ ಕ್ರಮೇಣ ಸುಧಾರಿಸಿಕೊಂಡು, ಡಿಫ್ಯೂಸ್ ಆಕ್ಸೋನಲ್ ಇಂಜುರಿ ಮತ್ತು ರಕ್ತಸ್ರಾವದ ಅಂಶಗಳಲ್ಲಿ ಹಾಗೂ ಮೆದುಳಿನ ಕಾರ್ಯಕ್ಷಮತೆಯಲ್ಲಿ ಸಾಮಾನ್ಯೀಕರಣ ಕಂಡುಬಂದಿತು. ನಂತರ ರೋಗಿಯನ್ನು ವೆಂಟಿಲೇಟರ್ ಸಹಾಯದಿಂದ ಹೊರತರಲಾಯಿತು.

ಈ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಲು ಕಾರಣವಾಗಿದ್ದು ಆಸ್ಪತ್ರೆಯ ನ್ಯೋರೋಸರ್ಜಿಕಲ್ ವಿಭಾಗ, ಕ್ರೀಟಿಕಲ್ ಕೇರ್ ವಿಭಾಗ ಹಾಗೂ ತೀವ್ರ ನಿಗಾ ಘಟಕದ ಸಮಯಕ್ಕೆ ಸರಿಯಾದ ಸಮನ್ವಯತೆ ಕಾರಣವಾಯಿತು ಈಗ ರೋಗಿಯು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ

ಈ ಯಶಸ್ವಿ ಚಿಕಿತ್ಸೆ ತಂಡದಲ್ಲಿ ನ್ಯೂರೋಸರ್ಜರಿ ತಂಡ:

ಡಾ. ಆದಿಲ್ ಅಹ್ಮದ್ ಕರ್ಣೂಲ್ (ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು), ಡಾ. ಚಾಣಕ್ಯ, ಡಾ. ರತ್ನದೀಪ್.

ತೀವ್ರ ನಿಗಾ ಘಟಕ (ICU) ತಂಡ:

ಡಾ. ಸೋಹೈಲ್ ಶಾಲಿ, ಡಾ. ಸತೀಶ್, ಡಾ. ಪ್ರತೀಕ್, ಡಾ. ನಿತಿನ್, ಡಾ. ಅಮಿತ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ತಂಡ ಭಾಗವಹಿಸಿತ್ತು ಇವರ ಯಶಸ್ವಿ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯಾದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ ದೇಶಮುಖ್ ಹಾಗೂ ಆಡಳಿತ ಮಂಡಳಿ ಸದಸ್ಯರು ಡೀನ್ ಡಾ ಶರಣಗೌಡ ಪಾಟೀಲ್, ವೈಸ್ ಡೀನ್ ಡಾ ವಿಜಯಕುಮಾರ್ ಕಪ್ಪಿಕೇರಿ, ಡಾ ಗುರುಲಿಂಗಪ್ಪ ಪಾಟೀಲ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಅಭಿನಂದಿಸಿದ್ದಾರೆ