ವಾಡಿ ,ಉತ್ತಮ ಆಡಳಿತ ದಿನಾಚರಣೆ
ವಾಡಿ ,ಉತ್ತಮ ಆಡಳಿತ ದಿನಾಚರಣೆ
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್‌ಜೀ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಯಿತು.
ಈ ವೇಳೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ
ಭಾರತದ ಸಂಸ್ಕೃತಿ ಹಾಗೂ ಪರಂಪರೆ ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮವನ್ನು ಅತ್ಯಂತ ಭಕ್ತಿ - ಭಾವದಿಂದ ಅನುಸರಿಸಿದ ಭೂಮಿ ಯಾವುದಾದರೂ ಇದ್ದರೆ ಅದು ಭರತ ಭೂಮಿ ಎಂದು ಸದಾ ಅವರ ಭಾಷಣದಲ್ಲಿ ವಾಜಪೇಯಿ ಅವರು ಹೇಳುತ್ತಿದ್ದರು ಎಂದರು.
ವಾಜಪೇಯಿ ಅವರ ದೇಶ ಭಕ್ತಿ, ಧರ್ಮಾಭಿಮಾನದ ಮಾತು, ಅವರು ನೆನಪಿಗೆ ಬಂದ ತಕ್ಷಣ ನಮ್ಮಂತ ಕೋಟ್ಯಾಂತರ ಕಾರ್ಯಕರ್ತರ ಮನದಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಇಮ್ಮಡಿಸುತ್ತದೆ.
ಇಂದು ಭಾರತ ಬಲಿಷ್ಠವಾಗಿ ನಿಂತು, ಜಾಗತಿಕ ಮುಂಚೂಣಿಯಲ್ಲಿ ಅಗ್ರಸ್ಥಾನ ಪಡೆದು,ನರೇಂದ್ರ ಮೋದಿಜಿ ಅವರು ಶ್ರಮ ಸಾರ್ಥಕತೆಯ ಕ್ಷಣ ಅನುಭವಿಸುತ್ತಿದ್ದರೆ ಅದು ಅಟಲ್‌ಜೀ ಅವರು ದೇಶಕಟ್ಟಲು ಹಾಕಿದ ಭದ್ರ ಬುನಾದಿಯ ತಳಹದಿಯ ಪ್ರತಿಫಲ ಎನ್ನುವುದನ್ನು ಸ್ವತಃ ಮೋದಿಜಿ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ನೋಡಿದರೆ ಅಟಲ್ ಜಿ ಅವರ ದೂರದೃಷ್ಟಿ,ಅವರ ಕನಸಿನ ಭಾರತ ನಮ್ಮಗೆ ಗೊಚರಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಂಚಾಳ ಅವರು ಮಾತನಾಡಿ
ಭಾರತರತ್ನ ವಾಜಪೇಯಿ ಪೋಖ್ರಾನ್ ಅಣುಪರೀಕ್ಷೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಸಮರ್ಥ ನೇತೃತ್ವ ವಹಿಸುವ ಜೊತೆಗೆ ಗ್ರಾಮ ಸಡಕ್ ಯೋಜನೆಯಂತಹ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಭಾರತವನ್ನು 21ನೇ ಶತಮಾನದ ಮುನ್ನಲೆಗೆ ತಂದು ನಿಲ್ಲಿಸಿದ್ದರು. ಅವರ ಜೀವನ, ಸಾಧನೆಗಳನ್ನು ಜೊತೆಗೆ ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದರು.
ಅವರು ಪ್ರಧಾನಿಯಾಗಿ ನಡೆಸಿದ ಉತ್ತಮ ಆಡಳಿತ ಇಡೀ ದೇಶ ಇಂದಿಗೂ ಹೆಮ್ಮೆ ಪಡುತ್ತಿದೆ ಎಂದು ಹೇಳಿದರು.
ಯುವ ಮುಖಂಡ ವಿಠಲ ನಾಯಕ ಅವರು ಅಟಲ್ ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಶರಣಗೌಡ ಚಾಮನೂರ,ಭೀಮರಾವ ದೊರೆ,ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ವಿಶಾಲ ನಿಂಬರ್ಗಾ,ರತ್ನಪ್ಪ ಬಾಳಗಿ ಸೇರಿದಂತೆ ಇತರರು ಇದ್ದರು.
