ಮುರುಘೇಂದ್ರ ಶಿವಯೋಗಿಗಳ ಕೊಡುಗೆ ಅಪಾರವಾದದ್ದು - ಶಾಂತಲಿಂಗ ಶ್ರೀಗಳು
ಮುರುಘೇಂದ್ರ ಶಿವಯೋಗಿಗಳ ಕೊಡುಗೆ ಅಪಾರವಾದದ್ದು - ಶಾಂತಲಿಂಗ ಶ್ರೀಗಳು
ಶಹಪುರ : ಮುರುಘೇಂದ್ರ ಶಿವಯೋಗಿಗಳು ಧ್ಯಾನ ಮತ್ತು ಅನುಸಂಧಾನದ ಮೂಲಕ ಅದ್ಭುತ ಶಕ್ತಿ ಪಡೆದಿದ್ದರು,ಇವರು ಕೇವಲ ವ್ಯೆಕ್ತಿಗತ ಮುಕ್ತಿಗಾಗಿ ಯೋಗ ಮಾಡದೆ ಸಮಾಜಕ್ಕಾಗಿ ಹಗಲಿರುಳ ಶ್ರಮಿಸಿದವರು ಎಂದು ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಶ್ರೀಗಳು ಹೇಳಿದರು.
ತಾಲ್ಲೂಕಿನ ರಸ್ತಾಪುರ ಗ್ರಾಮದ ಬಸವಶ್ರೀ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ವಿರಕ್ತ ಮಠ ಹಾಗೂ ಶಾಂತಿ ಪೀಠ ಸಹಯೋಗದಲ್ಲಿ ಮಹಾ ತಪಶ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವದಲ್ಲಿ ವಿಷೇಶ ಪೂಜೆ ಸಲ್ಲಿಸಿ ಮಾತಾನಾಡಿದರು.
ಲೋಕ ಕಲ್ಯಾಣಕ್ಕಾಗಿ ಇಡಿ ತಮ್ಮ ಜೀವನವನ್ನೇ ಮೂಡುಪಾಗಿಟ್ಟ ಮಹಾ ಶರಣರ ತತ್ವ,ಚಿಂತನೆಗಳು ಇಂದಿನ ಯುವಕರು ಅರ್ಥೈಸಿಕೊಳ್ಳಬೇಕಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಶಂಕರಪ್ಪ ಹೆರುಂಡಿ,ಚೆನ್ನಪ್ಪ ಹೆರುಂಡಿ,ರೇವತಾ ಹೆರುಂಡಿ, ಜಯದೇವ್, ಶಿಕ್ಷಕಿಯರಾದ,ರೇಣುಕಾ, ವೀಣಾ,ಪ್ರಿಯಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
