ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟ ವತಿಯಿಂದ ಸಚಿವ ಪ್ರೀಯಾಂಕ ಖರ್ಗೆ ಅವರ ಮನೆ ಮುಂದೆ ತಮಟೆ ಚಳುವಳಿ

ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟ ವತಿಯಿಂದ ಸಚಿವ ಪ್ರೀಯಾಂಕ ಖರ್ಗೆ ಅವರ ಮನೆ ಮುಂದೆ ತಮಟೆ ಚಳುವಳಿ

ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟ ವತಿಯಿಂದ ಸಚಿವ ಪ್ರೀಯಾಂಕ ಖರ್ಗೆ ಅವರ ಮನೆ ಮುಂದೆ ತಮಟೆ ಚಳುವಳಿ

ಕಲಬುರಗಿ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಒಳಮೀಸಲಾತಿ ಬಗ್ಗೆ ಅಧೀವೇಶನದಲ್ಲಿ ಮಾತನಾಡಿ ಜಾರಿ ಮಾಡುವಂತೆ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟ ವತಿಯಿಂದ ಸಚಿವ ಪ್ರೀಯಾಂಕ ಖರ್ಗೆ ಅವರ ಮನೆ ಮುಂದೆ ತಮಟೆ ಚಳುವಳಿ ನಡೆಸಲಾಯಿತು. 

ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಚರ್ಚಿಸಿ ಹಲವಾರು ವರ್ಷಗಳ 'ಬೇಡಿಕೆಯಾದ ಒಳಮೀಸಲಾತಿಗೆ ಬೆಂಬಲಿಸಿ ಮಾತನಾಡಿ ಮಾದಿಗ ಸಮಾಜದ ಜನರಿಗೆ ನ್ಯಾಯ ಒದಗಿಸಿಕೊಡಬೇಕು.

ಈಗಾಗಲೇ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು 03 ತಿಂಗಳ ಕಾಲವಕಾಶ ತೆಗೆದುಕೊಂಡು ವಿನಾಕಾರಣ ಏಕಸದಸ್ಯ ಪೀಠ ರಚಿಸಿ ದಸ್ತಾವನುಗಳನ್ನು ಕಲೆಹಾಕಲು ತೀರ್ಮಿಸಲಾಗಿದೆ. ಆದರೆ ಏಕ ಸದಸ್ಯ ಪೀಠ ರಚಿಸುವ ಅವಶ್ಯಕತೆ ಇರಲಿಲ್ಲ. ಇದು ಮಾದಿಗರ ಹೋರಾಟವನ್ನು ಹತ್ತಿಡುವ ಉದ್ದೇಶ ಅಥವಾ ಮಾದಿಗ ಸಮಾಜದ ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದ್ದು, ಮೇಲ್ನೋಟಕ್ಕೆ ಕಂಡು ಬರುತ್ತದೆ. ತಮಗೆ ನಿಜವಾಗಲು ಮಾದಿಗ ಸಮಾಜದ ಬಗ್ಗೆ ಕಾಳಜಿ ಇದ್ದರೆ, ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಒಳಮೀಸಲಾತಿಯ ಬಗ್ಗೆ ಮಾತನಾಡಿ ಒಳಮೀಸಲಾತಿಯನ್ನು ಜಾರಿ ಮಾಡಲಿಕ್ಕೆ ಒತ್ತಾಯಿಸಿ ಒಳಮೀಸಲಾತಿಯ ಬಗ್ಗೆ ಮಾತನಾಡದೆ ಮೌನವಾಗಿದ್ದರೆ ಅದು ಮಾದಿಗ ಸಮಾಜದ ಜನರು ನಮ್ಮ ವಿರೋಧಿಗಳೆಂದು ಭಾವಿಸಿ ಮುಂದಿನ ದಿನಗಳಲ್ಲಿ ತಮ್ಮ ವಿರೋದವೆ ಹೋರಾಟ ಮಾಡಬೇಕಾಗುತ್ತದೆ.

ಆದ್ದರಿಂದ ತಾವುಗಳು ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಬಗ್ಗೆ ಚರ್ಚಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಮಾಜದ ಮುಖಂಡರಾದ ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜೀನಕೇರಿ, ರಾಜು ಕಟ್ಟಿಮನಿ, ರವಿ ಕ್ರಾಂತಿಕಾರಿ, ಲಿಂಗರಾಜ ತಾರಫೈಲ್, ಪ್ರದೀಪ ಬಾಚನಳ್ಳಿಕರ್, ರಮೇಶ ವಾಡೇಕಾರ, ಅಂಬಾರಾಯ ಬೇಳಕೋಟಾ ಸೇರಿದಂತೆ ಮಾದಿಗ ಸಮಾಜದ ಮುಖಂಡರು, ಯುವಕರು ಇದ್ದರು.