ಪ್ರದೀಪ ಅಣಬಿಗೆ ಪೊಲೀಸ್ ಬಂದೋಬಸ್ತ ಒದಗಿಸಿ : ಭೀಮರಾಯ ಎಂ.ಕಂದಳ್ಳಿ

ಪ್ರದೀಪ ಅಣಬಿಗೆ ಪೊಲೀಸ್ ಬಂದೋಬಸ್ತ ಒದಗಿಸಿ :  ಭೀಮರಾಯ ಎಂ.ಕಂದಳ್ಳಿ

ಪ್ರದೀಪ ಅಣಬಿಗೆ ಪೊಲೀಸ್ ಬಂದೋಬಸ್ತ ಒದಗಿಸಿ : ಭೀಮರಾಯ ಎಂ.ಕಂದಳ್ಳಿ

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕ ಸರ್.ಎಂ.ವಿಶ್ವೇಶರಯ್ಯ ಕಟ್ಟಡ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷರಾದ ಪ್ರದೀಪ ಅಣಬಿ ಅವರಿಗೆ ನಾನಾ ಕಡೆಯಿಂದ ಜೀವ ಭಯವಿದ್ದು, ಕೂಡಲೇ ಇವರಿಗೆ ಪೊಲೀಸ್ ಬಂದೋಬಸ್ತ ಒದಗಿಸಬೇಕೆಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಭೀಮರಾಯ ಎಂ.ಕಂದಳ್ಳಿ ಅವರ ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸರ್.ಎಂ.ವಿಶ್ವೇಶರಯ್ಯ ಕಟ್ಟಡ ಕಾರ್ಮಿಕ ಸಂಘದ ತಾಲೂಕ ಅಧ್ಯಕ್ಷರಾದ ಪ್ರದೀಪ ಅಣಬಿ ಸುಮಾರು ೭ ವರ್ಷಗಳಿಂದ ಸಾಮಾಜಿಕ ಸೇವಾಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದು, ಇವರ ಯಾದಗಿರಿ ಜಿಲ್ಲೆಯ್ಯಾದ್ಯಂತಹ ಅನೇಕ ಜನಪರ ಕಾರ್ಯಗಳ ಮಾಡುತ್ತಾ ಬಂದಿರುತ್ತಾರೆ. ಕೆಲ ಸರಕಾರಿ ಕಛೇರಿಗಳಲ್ಲಿ ಅವ್ಯಹಾರಗಳನ್ನು ಕಲೆಹಾಕಿದ ಅದರ ವಿರುದ್ಧ ಹೋರಾಟ ಮಾಡಿ ಹಲವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸದ ಕೆಲ ಪಟ್ಟಭದ್ರಹಿತಾಸಕ್ತಿಗಳು ಇವರ ಏಳೆಯನ್ನು ಸಹಿಸದೇ ಇವರನ್ನು ಕೆಲಸ ಸರಕಾರಿ ಅಧಿಕಾರಿಗಳಿಂದ ಹಾಗೂ ಸಂಘ ಸಂಸ್ಥೆಯ ಮುಖ್ಯಸ್ಥರಿಂದ ಜೀವ ಭಯ ಕೇಳಿಬರುತ್ತಿದ್ದು, ಇದರಿಂದ ಅವರು ಸಾರ್ವಜನಿಕ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ.

ಪ್ರಯುಕ್ತ ಇವರಿಗೆ ಪೊಲೀಸ್ ಅಧಿಕಾರಿಗಳಿಂದ ಬಂದೋಬಸ್ತ ನೀಡಿ ಇವರಿಗೆ ಯಾವುದೇ ರೀತಿಯಿಂದ ಪ್ರಾಣಕ್ಕೆ ಅಪಾಯ ಆಗದಂತೆ ನೋಡಿಕೊಳ್ಳಬೇಕೆಂದು ಮನವಿ ಮನವಿಯಲ್ಲಿ ತಿಳಿಸಿದ್ದದಾರೆ. ಉಪಾಧ್ಯಕ್ಷ ಶಿವಕುಮಾರ್ ಬಳ್ಳಿಗೇರಿ, ಮಾಂತೇಶ್ ದೊಡ್ಮನಿ, ಸತೀಶ್ ಬಬಲಾದ್, ಪ್ರಕಾಶ್ ಗುತ್ತೇದಾರ್, ವಿಜಯಕುಮಾರ್ ಬಬಲಾದ್ ಇದ್ದರು.