"ಮುಂಗನಸು ಕೃತಿ" ವರ್ತಮಾನದ ತಲ್ಲಣಗಳ ಪ್ರತಿಬಿಂಬ-ಡಾ. ಚಿದಾನಂದ ಚಿಕ್ಕಮಠ.
"ಮುಂಗನಸು ಕೃತಿ" ವರ್ತಮಾನದ ತಲ್ಲಣಗಳ ಪ್ರತಿಬಿಂಬ-ಡಾ. ಚಿದಾನಂದ ಚಿಕ್ಕಮಠ.
ದಿನಾಂಕ:15.03.2026ರಂದು ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ, ಕಲಬುರ್ಗಿ ವತಿಯಿಂದ ಕಲಬುರ್ಗಿಯ ಕಲಾಮಂಡಳದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ "ಮುಂಗನಸು" ಎಂಬ ಕವನ ಸಂಕಲನವನ್ನು ರಾಜ್ಯದ ಅಖಿಲ್ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆ ಅವರು ಜನಾರ್ಪಣೆಗೊಳಿಸಿದರು. ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಚಿದಾನಂದ ಚಿಕ್ಕಮಠ ಅವರು ಕೃತಿಯನ್ನು ಪರಿಚಯಿಸುತ್ತ "ಮುಂಗನಸು" ಕವನ ಸಂಕಲನವು ವರ್ತಮಾನದ ಹಲವು ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ ಎಂದರು,ಅವರು ಮುಂದುವರಿದು ಈ ಕೃತಿಯ ಹಲವು ಕವನಗಳು ಇಂದಿನ ಕಲುಷಿತ ಪರಿಸರದ ಕುರಿತು ಕಳಕಳಿ,ಸಾಮರಸ್ಯ, ಹಸಿವು, ಪ್ರೀತಿ ತಂದೆ ತಾಯಿ ಮತ್ತು ಗುರುವಿನ ಆಶೀರ್ವಾದಗಳ ಕುರಿತು ಲೇಖಕರು ಕವಿತೆಗಳ ಮುಖಾಂತರ ತಮ್ಮ ಭಾವನೆಗಳು ಹಂಚಿಕೊಂಡಿದ್ದಾರೆ ಎಂದು ಹೇಳಿದರು. ಡಾ.ವಿಜಯಕುಮಾರ ಪರುತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಮಡಿವಾಳಪ್ಪ ಹಣಮಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರು ಶ್ರೀ ಬಸವರಾಜ ಗೌನಳ್ಳಿಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು,ಕಲಬುರ್ಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಾಹಿತಿ ಮತ್ತು ಸಂಘಟಕರಾದ .ಬಿ.ಎಚ್.ನಿರಗುಡಿ ಅವರು ಪ್ರಾಸ್ತಾವಿಕ ಮಾತನಾಡಿದರು, ಶ್ರೀ ಗುರುಪ್ರಸಾದ ದುಕಾನ ಅವರು ಎಲ್ಲರನ್ನು ಸಭೆಗೆ ಸ್ವಾಗತಿಸಿದರು,ಕೊನೆಯಲ್ಲಿ ಶ್ರೀ ರೇವಣಸಿದ್ಧಯ್ಯಾ ನರನಾಳ ಅವರು ವಂದಿಸಿದರು,ಡಾ.ಶ್ವೇತಾ ಗುರುಪ್ರಸಾದ ದುಕಾನ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಹಿರಿಯ ಸಾಹಿತಿಗಳಾದ ಡಾ. ಹಣಮಂತರಾವ ದೊಡ್ಡಮನಿ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಟಿ. ಗುರುಬಸ್ಸಪ್ಪ ಡಾ.ಕಾಶಿನಾಥ ಬಿರಾದಾರ,ಡಾ. ಎಸ್. ಎಸ್. ಗುಬ್ಬಿ , ಎಚ್ ಎಸ್ ಕೌಂಟೆ, ವಿಜಯಕುಮಾರ್ ಹಂಚಿನಾಳ, ಶ್ರೀಶೈಲ ಬೋನಾಳ, ಬಸವರಾಜ ಗಾಣೂರೆ ,ರವಿಂದ್ರರೆಡ್ಡಿ, ಶ್ರೀಶೈಲ ಮದಾನೆ,ಡಾ ನಾಗಪ್ಪ ಗೋಗಿ, ಸಿದ್ದರಾಮಯ್ಯಮಠ, ಮುಂತಾದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
