ಕಲಬುರಗಿ ವಲಯ ಕ್ರೀಡಾಕೂಟದಲ್ಲಿ ಸಿದ್ದಾರ್ಥ ಕಾಲೇಜಿನ ಮೆರುಗು – 10 ವಿದ್ಯಾರ್ಥಿಗಳಿಂದ 12 ಪ್ರಶಸ್ತಿ!
ಕಲಬುರಗಿ ವಲಯ ಅಂತರ್ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ದಿಂದ ಒಟ್ಟು 10 ವಿದ್ಯಾರ್ಥಿಗಳು ಭಾಗವಹಿಸಿ 12 ಪ್ರಶಸ್ತಿಗಳನ್ನು ಜಯ
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಬೀದರ್‌ನ ಆರ್.ವ್ಹಿ ಬಿಡಪ್ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ದಿನಾಂಕ 08-12-2025 ಸೋಮವಾರದಂದು ಜರುಗಿದ ಕಲಬುರಗಿ ವಲಯ ಅಂತರ್ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ದಿಂದ ಒಟ್ಟು 10 ವಿದ್ಯಾರ್ಥಿಗಳು ಭಾಗವಹಿಸಿ 12 ಪ್ರಶಸ್ತಿಗಳನ್ನು ಜಯಗಳಿಸಿರುತ್ತಾರೆ. ಅದರಲ್ಲಿ ಪ್ರಥಮ ಸ್ಧಾನದಲ್ಲಿಕುಮಾರಿ ಅಕ್ಷತಾ 2 ಪ್ರಶಸ್ತಿಗಳನ್ನು ಪಡೆದಿರುತ್ತಾರೆ. (200 ಒಣಡಿ ಹಾಗೂ 400 ಒಣಡಿಓಟ). ದ್ವಿತ್ತೀಯ ಸ್ಧಾನದಲ್ಲಿ ಮಾಳಿಂಗರಾಯ (5000 ಒಣಡಿಓಟ) ಅಮೋಘ (800 ಒಣಡಿಓಟ ), ಮಹೆಬೂಬ್ ಸಾಬ್ ( 200 ಒಣಡಿಓಟ ), ಸುಧಾಕರ್ ( 100 ಒಣಡಿಓಟ ಮತ್ತು ಶಾಟ್ ಪೂಟ್ ) ಹಾಗೂರತ್ನಪ್ಪಾ ( 400 ಒಣಡಿಓಟ 4 ನೇಸ್ಧಾನ. ಹಾಗೂ ಉದ್ದ ಜಿಗಿತದಲ್ಲಿ 2 ನೇಸ್ಥಾನ. ಮಹಾಂತಪ್ಪಾ ಜಾವಲಿನ್ಥ್ರೂದಲ್ಲಿ 2 ನೇಸ್ಧಾನ,. ಸಮ್ಮೆದ್ ಎತ್ತರ ಜಿಗಿತದಲ್ಲಿ 3 ಸ್ಧಾನದಲ್ಲಿ. ಹಾಗೂ ಮಾಳಿಂಗರಾಯ ಸಮ್ಮೆದ್, ಮಹಾಂತಪ್ಪಾ, ಮಹೆಬೂಬ್ ಸಾಬ್ 4ಘಿ400ಒಣಡಿರಿಲೆಯಲ್ಲಿ 2 ಸ್ಧಾನಪಡೆದಿರುತ್ತಾರೆ.
ಈ ತಂಡದ ಮ್ಯಾನೇಜರಾಗಿ ಉಪನ್ಯಾಸಕರಾದ ಶ್ರೀ ಕೆ.ಜಿ.ಜವಳಿರವರು ಭಾಗವಹಿಸಿರುತ್ತಾರೆ. ಈ ಕ್ರೀಡಾಕೂಟದ ಉದ್ಘಾಟನೆಯನ್ನು ನಮ್ಮ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಸ್. ಚಂದ್ರಶೇಖರ್ ರವರು ನೆರವೇರಿಸಿರುತ್ತಾರೆ.
ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಕರ್ನಾಟಕ ಪೀಪಲ್ಸ್ ಏಜ್ಯುಕೇಷನ್ ಸೋಸೈಟಿಯ ಅಧ್ಯಕ್ಷರಾದ ರಾಧಕೃಷ್ಣ ದೋಡಮನಿ, ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪಾ ಸೂರನ್, ಆಡಳಿತ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಶೀಲವಂತ, ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಚಂದ್ರಶೇಖರ್ ರವರು ಮತ್ತು ಭೋಧಕ ಹಾಗೂ ಭೋಧಕೇತರ ಸಿಬ್ಬಂದಿರವರು ವಿದ್ಯಾರ್ಥಿಗಳ ಸಾಧನೆಗಳಿಗೆ ಶುಭಹಾರೈಸಿ ಹರ್ಷವ್ಯಕ್ತ ಪಡಿಸಿದ್ದಾರೆ.
