ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಶ್ರೀ ಶಶೀಲ್ ಜಿ ನಮೋಶಿ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಶ್ರೀ ಶಶೀಲ್ ಜಿ ನಮೋಶಿ
ದೇಶಕ್ಕೆ 1947 ಅಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತರೆ. ನಮ್ಮ ಭಾಗಕ್ಕೆ 1948 ಸೆಪ್ಟೆಂಬರ್ 17 ರಂದು ದೊರೆಯಿತು. ಹೈದರಾಬಾದ್ ನಿಜಾಮ ರಿಂದ ನಾವು ವಿಮೋಚನೆಗೊಂಡ ಇದು ಐತಿಹಾಸಿಕ ದಿನ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆದ ಶ್ರೀ ಶಶೀಲ್ ಜಿ ನಮೋಶಿ ಹೇಳಿದರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡುತ್ತಿದ್ದರು
1995 ರಲ್ಲಿ ಪ್ರಪ್ರಥಮ ಬಾರಿಗೆ ನಮ್ಮ ಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ರೀತಿಯಲ್ಲಿಯೇ ಕಲ್ಯಾಣ ಕರ್ನಾಟಕದ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಬೀದರಿನ ಮಾಜಿ ಸಂಸದರಾದ ದಿವಂಗತ ರಾಮಚಂದ್ರ ವೀರಪ್ಪ ಅವರ ನೇತೃತ್ವದಲ್ಲಿ ಧ್ವಜಾರೋಹಣ ಪ್ರಾರಂಭವಾಯಿತು. ಕಲ್ಯಾಣ ಕರ್ನಾಟಕ ವಿಮೋಚನೆಯ 50 ನೇ ವರ್ಷ ಆಚರಣೆಯ ಸಂದರ್ಭದಲ್ಲಿ ಈ ಭಾಗವನ್ನು ಭಾರತದ ದೇಶದಲ್ಲಿ ವಿಲೀನ ಗೊಳಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಥಳಿ ಸ್ಥಾಪಿಸಿ ಭಾರಿ ವಿಜ್ರಂಭಣೆಯಿಂದ 1998 ರಲ್ಲಿ ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ವಿಜ್ರಂಭಣೆಯಿಂದ ಆಚರಿಸುತ್ತಿದ್ದೇವೆ. 2005 ರಲ್ಲಿ ಪ್ರಪ್ರಥಮ ಬಾರಿಗೆ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಎಸ್ ಎಂ ಕೃಷ್ಣ ಧ್ವಜಾರೋಹಣ ಭಾಗವಹಿಸಲು ಪ್ರಾರಂಭಿಸಿದರು. ಈಗ ಈ ದಿನವನ್ನು ಆಂದ್ರ,ತೆಲಂಗಾಣ,ಮರಾಠವಾಡ, ವಿದರ್ಭ ಈ ಭಾಗದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಹೈದರಾಬಾದ್ ಕರ್ನಾಟಕ ಎಂಬ ಹೆಸರು ಗುಲಾಮಗಿರಿ ಸಂಕೇತ ಎಂಬುದನ್ನು ಅಳಿಸಿ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಎಂದು ಹೇಳಿದರು
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಾ ಭಿ ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಡಾ ಮಹಾದೇವಪ್ಪ ರಾಂಪೂರೆ,ಡಾ ಕಿರಣ್ ದೇಶಮುಖ್, ಶ್ರೀ ಅರುಣಕುಮಾರ ಪಾಟೀಲ್,ಡಾ ಅನಿಲಕುಮಾರ ಪಟ್ಟಣ,ಡಾ ಶಿವಾನಂದ ಮೇಳಕುಂದಿ, ಶ್ರೀ ನಾಗಣ್ಣ ಘಂಟಿ,ಆಡಳಿತ ಅಧಿಕಾರಿಗಳಾದ ಪ್ರೋ ಸಿ ಸಿ ಪಾಟೀಲ್, ಇಂಜಿನಿಯರಿಂಗ್ ವಿಭಾಗದ ಡಾ ಅಮರೇಶ ಪಾಟೀಲ್,ಐ ಕೆ ಪಾಟೀಲ್ ಉಪಸ್ಥಿತರಿದ್ದರು.