ಶಹಾಬಾದ : ತಾಲ್ಲೂಕ ಮಟ್ಟದ ಹೆಚ.ಪಿ.ವಿ ಲಸಿಕೆ ಅಭಿಯಾನಕ್ಕೆ ಚಾಲನೆ

ಶಹಾಬಾದ : ತಾಲ್ಲೂಕ ಮಟ್ಟದ ಹೆಚ.ಪಿ.ವಿ ಲಸಿಕೆ ಅಭಿಯಾನಕ್ಕೆ ಚಾಲನೆ

ಶಹಾಬಾದ : ತಾಲ್ಲೂಕ ಮಟ್ಟದ ಹೆಚ.ಪಿ.ವಿ ಲಸಿಕೆ ಅಭಿಯಾನಕ್ಕೆ ಚಾಲನೆ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ತಾಲ್ಲೂಕ ಮಟ್ಟದ ಹೆಚ್.ಪಿ.ವಿ ಲಸಿಕೆ ನೀಡುವ ಅಭಿಯಾನಕ್ಕೆ ಗ್ರೇಡ್ 2 ತಹಶೀಲ್ದಾರ ಗುರುರಾಜ ಸಂಗಾವಿ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ ನಿರೋಧಕ ಲಸಿಕೆಯಾದ ಹೆಚ್.ಪಿ.ವಿ ಲಸಿಕೆಯನ್ನು ತಾಲ್ಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ತಾಲೂಕಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತಿ ಬುಧವಾರ ಮತ್ತು ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದರು.

ಆರೋಗ್ಯ ಕೇಂದ್ರದ ವೈಧ್ಯಾದಿಕಾರಿ ಡಾ.ವೀರನಾಥ ಕನಕ ಮತ್ತು ಶಂಕರ ರಾಠೋಡ ಅವರು ಮಾತನಾಡಿ,

ಭಾರತೀಯ ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ 2ನೇ ಸ್ಥಾನದಲ್ಲಿದೆ, ಇದನ್ನು ತಡೆಗಟ್ಟಲು ಭಾರತ ಸರ್ಕಾರ ಹಾಗೂ ನಮ್ಮ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿರುವ ಪ್ರಯುಕ್ತ ಎಲ್ಲಾ 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ವೀರನಾಥ ಕನಕ, ಡಾ.ಶಂಕರ ರಾಠೋಡ, ಯೂಸುಫ ನಾಕೇದಾರ, ಸಂಜಯ ರಾಠೋಡ ಹಾಗೂ ಆರೋಗ್ಯ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು 15 ವರ್ಷದೊಳಗಿನ ಹೆಣ್ಣು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೋಟ ಮಾಡಿ :..ಹೆಚ್. ವಿ.ಪಿ ಇದು ಹೆಣ್ಣು ಮಕ್ಕಳ ಜನನಾಂಗದ ಸೋಂಕುಗಳಿಗೆ ಕಾರಣವಾಗುವ ಒಂದು ಸಾಮಾನ್ಯ ವೈರಸ್, ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ ಇದೇ ವೈರಸ್ ಕಾರಣವಾಗುತ್ತದೆ :..ಡಾ.ವೀರನಾಥ ಕನಕ ತಾಲ್ಲೂಕ ಆರೋಗ್ಯ ಅಧಿಕಾರಿಗಳು ಚಿತ್ತಾಪೂರ.