"ಮಿಸ್ಸಳ ಭಾಜಿ" ಪುಸ್ತಕದ ಅವಲೋಕನ.

"ಮಿಸ್ಸಳ ಭಾಜಿ"  ಪುಸ್ತಕದ ಅವಲೋಕನ.

"ಮಿಸ್ಸಳ ಭಾಜಿ" ಪುಸ್ತಕದ ಅವಲೋಕನ.

ಕಲಬುರಗಿ: ದಿನಾಂಕ. 24.01.2026 ರಂದು ನಗರದ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಕಾರ್ಯಕ್ರಮದ ಸಭಾಂಗಣದಲ್ಲಿ  ಪುಸ್ತಕ ವಿಮರ್ಶೆ ನಡೆಯಿತು.

 ಲೇಖಕರಾದ ಶ್ರೀ ಶ್ರೀನಿವಾಸ ಜಾಲವಾದಿಯವರ ಕೃತಿ "ಮಿಸ್ಸಳ ಭಾಜಿ" ಮತ್ತು ಇತರ ಪ್ರಬಂಧಗಳ ಕೃತಿಯ ಕುರಿತು ಹೈದರಾಬಾದ ಉಷ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಪ್ರೋ. ಲಿಂಗಪ್ಪ ಗೋನಾಲ ಮಾತನಾಡುತ್ತ, ಈ ಕೃತಿಯು ಆಯಾ ಕಾಲಗಟ್ಟದ ತಲ್ಲಣಗಳ ಪ್ರತಿಬಿಂಬವಾಗಿದೆ,ಇಲ್ಲಿಯ ಅನೇಕ ಪ್ರಬಂಧಗಳು ವ್ಯಂಗ್ಯದಿಂದ ಕೂಡಿವೆ,ಇಲ್ಲಿಯ ಪ್ರಬಂಧಗಳು ಜೀವನದಲ್ಲಿ ಹಾಯ್ದು ಹೋಗುವ ಸಂಗತಿಗಳಿಂದ ಕೂಡಿವೆ.ಈ ಪ್ರಬಂಧಗಳಲ್ಲಿ ಲೇಖಕರೇ ನಿರೂಪಕರಾಗಿದ್ದರು ,ಗ್ರಾಮ್ಯಭಾಷಯ ಬಳಕೆ ಮಾಡಿದ್ದಾರೆ.

ಒಟ್ಟಿನಲ್ಲಿ ಈ ಕೃತಿಯು ಓದುಗರಿಗೆ ಮನೋರಂಜನೆಯ ಜೊತೆಗೆ ಪ್ರಸ್ತುತ ಸಮಾಜದ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.

 ಸಂಸ್ಥೆಯ ಅಧ್ಯಕ್ಷ ಶ್ರೀ ಅಪ್ಪಾರಾವ ಅಕ್ಕೋಣೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಲೇಖಕ ಶ್ರೀ ಶ್ರೀನಿವಾಸ ಜಾಲವಾದಿ ಉಪಸ್ಥಿತರಿದ್ದರು,ಡಾ.ಚಿ.ಸಿ.ನಿಂಗಣ್ಣ ಮತ್ತು ಡಾ.ಜಯದೇವಿ ಗಾಯಕವಾಡ್ವರು ಕೃತಿಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದರು.ಸುಬ್ಬರಾವ ಕುಲಕರ್ಣಿ,ರೇವಣಸಿದ್ಧಪ್ಪ ದುಕಾನ,ಕೆ.ವಿಶ್ವನಾಥ,ಬಸವರಾಜ ಜಮದ್ರಖಾನಿ, ವಿಶ್ವನಾಥ ಭಕರೆ, ಬಿ. ಎಸ್. ಮಾಲಿಪಾಟೀಲ್, ಪ್ರೋ.ಶೋಭಾದೇವಿ ಚಕ್ಕಿ, ಡಾ. ಗವಿಸಿದ್ಧಪ್ಪ ಪಾಟೀಲ್, ಡಾ. ಸಿದ್ಧರಾಮಯ್ಯ ಮಠ ಮತ್ತು ಡಾ.ರಾಜಕುಮಾರ ಮಾಳಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ.ವಿಜಯಕುಮಾರ ಪರುತೆಯವರು ನಿರುಪಿಸಿದರು