ಕ.ಸಾ.ಪ. ಪದಾಧಿಕಾರಿಗಳ ಸಮ್ಮೇಳನದಲ್ಲಿ ತೇಗಲತಿಪ್ಪಿ ಹೇಳಿಕೆಗೆ ಭಕರೆ ಖಂಡನೆ

ಕ.ಸಾ.ಪ. ಪದಾಧಿಕಾರಿಗಳ ಸಮ್ಮೇಳನದಲ್ಲಿ    ತೇಗಲತಿಪ್ಪಿ ಹೇಳಿಕೆಗೆ ಭಕರೆ  ಖಂಡನೆ

ಕ.ಸಾ.ಪ. ಪದಾಧಿಕಾರಿಗಳ ಸಮ್ಮೇಳನದಲ್ಲಿ   ತೇಗಲತಿಪ್ಪಿ ಹೇಳಿಕೆಗೆ ಭಕರೆ ಖಂಡನೆ

ಆಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಸೋಮವಾರದಂದು ಜರುಗಿದ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವಾಗಿರದೆ ಅದು ಪಕ್ಕಾ ರಾಜಕೀಯ ಪ್ರೇರಿತ ಕ. ಸಾ.ಪ ಪದಾಧಿಕಾರಿಗಳ ಸಮ್ಮೇಳನ ವಾಗಿದೆ ಎಂದು ಸಾಬೀತಾಗಿದೆ ಎಂದು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಸಾಹಿತಿ ವಿಶ್ವನಾಥ್ ಭಕರೆ ಪುನರುಚ್ಚರಿಸಿದ್ದಾರೆ.

 ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಆಶೆಯ ನುಡಿಯಲ್ಲಿ ಆಳಂದದಲ್ಲಿ ಒಂದು ಗುಂಪು ಕೊಂಡಿಮಂಚಣ್ಣರಿದ್ದು ಮನೆ ಒಡೆಯುವಲ್ಲಿ ಮುಂದಾಗಿ ಕನ್ನಡ ಕಟ್ಟಲು ಮುಂದಾಗದೆ ಕನ್ನಡ ತಾಯಿಗೆ ದ್ರೋಹವೆಸಗಿ ಹೆತ್ತ ತಾಯಿಗೆ ಅವಮಾನಿಸಿದ್ದಾರೆಂಬ ಜಿಲ್ಲಾಧ್ಯಕ್ಷರ ಮಾತಿನಲ್ಲಿ ಲವಲೇಶ ಹುರುಳಿಲ್ಲವೆಂದು ಪ್ರತಿಕ್ರಿಯೆ ನೀಡಿದ್ದಾರೆ.

   ನಾನು ಮೂರು ಅವಧಿಗೆ ಆಳಂದ ತಾಲೂಕ ಕ.ಸಾ.ಪ ಅಧ್ಯಕ್ಷನಾಗಿ ಸುಮಾರು 9 ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ಏರ್ಪಡಿಸಿ ಕನ್ನಡ ಕೈಂಕರ್ಯಕ್ಕೆ ಕಟುಬದ್ಧವಾಗಿ ಕನ್ನಡ ತಾಯಿ ಸೇವೆ ಗೈದಿರುವೆ. ಕೋರಳ್ಳಿಯ ಶಾಲೆಯೊಂದರಲ್ಲಿ ಕವಿಗೋಷ್ಠಿ ಏರ್ಪಡಿಸಿದಾಗ ಆ ಗೋಷ್ಠಿ ರದ್ದು ಮಾಡಲು ಶಿಕ್ಷಕರಿಗೆ ಸೂಚಿಸಿದರು. ನಾನು ಶಾಸಕ ಬಿ. ಆರ್. ಪಾಟೀಲರ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದರಿಂದ ಅವರ ಕೊಂಡಿ ಮಂಚಣ್ಣರು ಹೇಳಿದಂತೆ ಕೇಳಿದರು. ಆಗ ಸಾಹಿತಿಕವಾಗಿ ಕನ್ನಡಕ್ಕೆ ದ್ರೋಹ ಬಗೆದವರಾರು? ಮನೆ ಒಡೆಯುವ ಗುಂಪು ಯಾರದು? ಹೆತ್ತ ತಾಯಿಗೆ ದ್ರೋಹ ಮಾಡಿದವರು ಯಾರು? ಎಂದು ಪ್ರಶ್ನಿಸಿದ ವಿಶ್ವನಾಥ್ ಭಕರೆ ಅವರು ಜಿಲ್ಲಾಧ್ಯಕ್ಷರಿಗೆ ನೈತಿಕತೆ ಇಲ್ಲ ಇವರು ಆ ಗುಂಪಿನವರಲ್ಲಿ ಒಬ್ಬರಾಗಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆಂದು ಆರೋಪಿಸಿದ್ದಾರೆ.

 ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಸ್ವಾಗತ ಸಮಿತಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ವಾಡಿಕೆ. ಅದನ್ನು ಅನುಸರಿಸದ ಕಾರಣ ಹಾಲಿ ಶಾಸಕರ ಅನುಪಸ್ಥಿತಿಗೆ ಅವರೆ ಕಾರಣರು. ಮೇಲಾಗಿ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿಯನ್ನು ಸರ್ವಾಧ್ಯಕ್ಷರಾಗಿ ನೇಮಿಸಿರುವುದು ಪದಾಧಿಕಾರಿಗಳ ಸಮ್ಮೇಳನದಲ್ಲಿ ನಮ್ಮದೇನು ಪಾತ್ರವೆಂದು ಅನೇಕ ಸಾಹಿತಿಗಳು ಹಾಜರಾಗಲಿಲ್ಲ ಇದನ್ನು ಮನಗಾಣದೆ ಇಲ್ಲ ಸಲ್ಲದ ಮಾತನಾಡಿ ಆಳಂದ್ ತಾಲೂಕಿನ ಸಾಹಿತಿಗಳನ್ನು. ಸಾಹಿತ್ಯಾಸಕ್ತರನ್ನು ಕರಳಿಸಿದ್ದಕ್ಕೆ ತೀವ್ರವಾಗಿ ಖಂಡಿಸಲಾಗಿದೆ ಎಂದು ಭಕರೆ ಹೇಳಿದ್ದಾರೆ.

 ಸಮ್ಮೇಳನದ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ರಮೇಶ್ ಮಾಡ್ಯಾಳಕರ್ ಅವರು ಜಿಲ್ಲಾಧ್ಯಕ್ಷರ ಮಾತಿಗೆ ವೇದಿಕೆಯಲ್ಲಿ ಖಂಡಿಸಿದ್ದಾರೆ. ಅಧ್ಯಕ್ಷತೆ ವಹಿಸಿದ್ದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲರು ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ತರಬೇಡಿ ಎಂದು ಕಿವಿಮಾತು ಹೇಳಿದ್ದಾರೆ. ಇಷ್ಟಾದರೂ ಇಂಥ ಕುಹಕ ಜಿಲ್ಲಾಧ್ಯಕ್ಷರಿಗೆ ಮನವರಿಕೆಯಾಗದಿರುವುದು ವಿಷಾದನಿಯ ಸಂಗತಿ ಎಂದಿದ್ದಾರ.

ಈ ಸಮ್ಮೇಳನಕ್ಕೆ ನಾವು ವಿರೋಧಿಸಿಲ್ಲ. ಕ.ಸಾ.ಪ ಕಾರ್ಯ ಸೂಚಿಯಂತೆ ಮಾಡಿರೆಂದು ಹೇಳಲಾಗಿದೆ. ನಾನು ಕೂಡ ನಮ್ಮ ಸಮತಾಲೋಕ ಶಿಕ್ಷಣ ಸಂಸ್ಥೆಯ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಕಪ್ಪುಪಟ್ಟಿ ಧರಿಸಿ ವಿರೋಧಿಸಬಹುದಾಗಿತ್ತು. ಆದರೆ ಸಮ್ಮೇಳನ ಮಾಡುವುದೇ ದುಸ್ತರ. ಅಂಥದರಲ್ಲಿ ವಿರೋಧಿಸುವದು ಸರಿಯಲ್ಲವೆಂದು ಸಾಹಿತಿಗಳು ಸಾಹಿತ್ಯಾಸತ್ತರು ಸುಮ್ಮನಾಗಿದ್ದರೂ ಬೇಕಂತಲೇ ಗೂಬೆ ಕೂರಿಸುವ ಜಿಲ್ಲಾಧ್ಯಕ್ಷರ ಹೇಳಿಕೆಗೆ ಟೀಕಿಸಿದ ಭಕರೆಯವರು ಕ.ಸಾ.ಪ ಶುದ್ದಿಕರಿಸಿ ಕಲ್ಬುರ್ಗಿ ಜಿಲ್ಲೆಯ ಸರ್ವ ಸಾಹಿತಿಗಳ ಮನೆಗೆಲ್ಲುವ ಪ್ರಯತ್ನ ಮಾಡುವಂತೆ ಕಿವಿಮಾತು ಹೇಳಿದ್ದಾರೆ.

 ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಕಳೆದ ಚುನಾವಣೆಯಲ್ಲಿ ರಾಜಕೀಯ ನಾಯಕರ ಬೆಂಬಲದಿಂದ ಆರಿಸಿ ಬಂದ ತೇಗಲ್ ತಿಪ್ಪಿ ಮುಂದಿನ ದಿನಗಳಲ್ಲಿ ತಿಪ್ಪರಲಾಗ ಹೊಡೆಯುವ ಪ್ರಸಂಗಕ್ಕೆ ಗುರಿಯಾಗುವಲ್ಲಿ ಸಂದೆಹವಿಲ್ಲ. ರಾಜಕಾರಣಿಗಳು ತಮಗೆ ಯಾವಾಗ ಹೇಗೆ ಬಳಸಿಕೊಳ್ಳಬೇಕು ಹಾಗೆ ಬಳಸಿಕೊಳ್ಳುತ್ತಾರೆ. ಅವರ ಬೆನ್ನ ಹಿಂದಿನ ನೆರಳಾದರೆ ಕನ್ನಡ ಕಟ್ಟಲು ಸಾಧ್ಯವೇ ಎಂದು ಭಕರೆ ಪ್ರತಿಕ್ರಿಯಿಸಿದ್ದಾರೆ.

ಸುರೇಶ್ ಬಡಿಗೇರ್ ಮತ್ತು ಯಶವಂತರಾಯ ಅಷ್ಟಗಿ ಇವರನ್ನು ಗೌರವ ಕಾರ್ಯದರ್ಶಿ ಸ್ಥಾನದಿಂದ ಕಿತ್ತೊಗೆದು ಹಿಟ್ಲರ್ ಆಡಳಿತ ಬಿಟ್ಟು. ಕಾರ್ಯಕ್ರಮಗಳ ಸರದಾರನಾಗದೆ. ಕಾರ್ಯಪ್ರವೃತ್ತಿಯ ಕನ್ನಡಿಗನಾಗಲು ಸಲಹೆ ನೀಡಿದ್ದಾರೆ. ಕ.ಸಾ.ಪ ಕ್ಕೆ ಹಿರಿಕಿರಿಯ ಸಾಹಿತಿಗಳು ಭೇಟಿ ಕೊಡುತ್ತಿರಬೇಕು. ಕೆಲವರು ಅತ್ತ ಸುಳಿಯುತ್ತಿಲ್ಲ. ಕನ್ನಡಿಗರ ಸ್ವಾಯತ್ಯತೆ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಶಿಷ್ಟಾಚಾರ ಉಲ್ಲಂಘಿಸಬಾರದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಲ್ಬುರ್ಗಿ ಸಾಹಿತಿಗಳು ಮತ್ತು ಸಾಹಿತ್ಯಾ ಸಕ್ತರು ಕ.ಸಾ.ಪ ಸದಸ್ಯರು ಬಂಡೆದ್ದು ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ವಿಶ್ವನಾಥ್ ಭಕರೆ ಎಚ್ಚರಿಸಿದ್ದಾರೆ