ಹೆಣ್ಣು ಮಕ್ಕಳಿಗೆ ಕರಾಟೆ ಸ್ವಯಂ ರಕ್ಷಣಾ ಕಲೆ ಅತ್ಯಂತ ಅವಶ್ಯಕವಾಗಿದೆ

ಹೆಣ್ಣು ಮಕ್ಕಳಿಗೆ ಕರಾಟೆ ಸ್ವಯಂ ರಕ್ಷಣಾ ಕಲೆ ಅತ್ಯಂತ ಅವಶ್ಯಕವಾಗಿದೆ

ಹೆಣ್ಣು ಮಕ್ಕಳಿಗೆ ಕರಾಟೆ ಸ್ವಯಂ ರಕ್ಷಣಾ ಕಲೆ ಅತ್ಯಂತ ಅವಶ್ಯಕವಾಗಿದೆ

ಜೇವರ್ಗಿ : ಪ್ರಸ್ತುತ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆ ಸ್ವಯಂ ರಕ್ಷಣಾ ಕಲೆ ಅತ್ಯಂತ ಅವಶ್ಯಕವಾಗಿದೆ ಎಂದು ಜೆವರ್ಗಿ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮುಖ್ಯ ಪ್ರಾಂಶುಪಾಲರಾದ ಶ್ರೀದೇವಿ ಸಜ್ಜನ್ ಮೇಡಂ ಅವರು ಅಭಿಪ್ರಾಯಪಟ್ಟರು.

ಜೆವರ್ಗಿ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಓಬವ್ವ ಸ್ವಯಂ ರಕ್ಷಣಾ ಯೋಜನೆಯಡಿ 6ನೇ , 9ನೇ ತರಗತಿಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರಾಟೆ ಶಿಕ್ಷಕರಾದ ಶಾಂತಪ್ಪ ಮಾಸ್ಟರ್ ದೇವರಮನಿ ಅವರು ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕರಾಟೆ ತರಬೇತಿಯನ್ನು ನೀಡಿದರು.

  ಶಾಲೆಯ ಮುಖ್ಯ ಪ್ರಾಂಶುಪಾಲರಾದ ಶ್ರೀಮತಿ ಶ್ರೀದೇವಿ ಸಜ್ಜನ್ ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಪ್ರತಿಯೊಬ್ಬ ವಿದ್ಯಾರ್ಥಿನಿಯರು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಕರಾಟೆಯಂತಹ ಸ್ವಯಂ ರಕ್ಷಣಾ ಕಲೆಗಳನ್ನು ಕಲಿತು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದು, ಕರಾಟೆ ತರಬೇತಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ವರದಿ: ಜೇಟ್ಟೆಪ್ಪ ಎಸ್. ಪೂಜಾರಿ