ಮೈಸೂರು ದಸರಾದಲ್ಲಿ ಹುಟ್ಟು ಸಾವು ಎರಡರ ನಡುವೆ" ಕಾದಂಬರಿ ಬಿಡುಗಡೆ

ಮೈಸೂರು ದಸರಾದಲ್ಲಿ ಹುಟ್ಟು ಸಾವು ಎರಡರ ನಡುವೆ" ಕಾದಂಬರಿ ಬಿಡುಗಡೆ
ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ಕಲ್ಬುರ್ಗಿ ಬರಹಗಾರನ "ಹುಟ್ಟು ಸಾವು ಎರಡರ ನಡುವೆ" ಕಾದಂಬರಿ ಸರ್ಕಾರದಿಂದ ಬಿಡುಗಡೆ
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಹಬ್ಬದ ಪ್ರಯುಕ್ತ, ಕಲ್ಬುರ್ಗಿಯ ಪ್ರಸಿದ್ಧ ಬರಹಗಾರ ಶ್ರೀ ಪ್ರಮೋದ್ ಕರ್ಣಂ ಅವರ ಮೂರನೇ ಕಾದಂಬರಿ "ಹುಟ್ಟು ಸಾವು ಎರಡರ ನಡುವೆ" ಸರಕಾರದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಕಾದಂಬರಿ ಮಾನವ ಜೀವನದ ಮೂಲಭೂತ ಅಂಶಗಳನ್ನು ವಿಶ್ಲೇಷಿಸುವ ಮೂಲಕ ಓದುಗರನ್ನು ಆಲೋಚನೆಗೆ ಪ್ರೇರೇಪಿಸುತ್ತದೆ. ಕಥಾ ಶೈಲಿ, ಪಾತ್ರಗಳ ಗಾಢತೆ ಮತ್ತು ಸಾಮಾಜಿಕ ಸಂದೇಶಗಳ ಮೂಲಕ ಈ ಕಾದಂಬರಿ ಓದುಗರ ಹೃದಯವನ್ನು ಗೆಲ್ಲುವ ನಿರೀಕ್ಷೆಯಿದೆ.
ಬುಕ್ ಲಾಂಚ್ ಸಮಾರಂಭವು ಸೆಪ್ಟೆಂಬರ್ 28ರಂದು ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಪ್ರಿಯರು, ಲೇಖಕರು ಮತ್ತು ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
"ಹುಟ್ಟು ಸಾವು ಎರಡರ ನಡುವೆ" ಕಾದಂಬರಿ ಪುಸ್ತಕ ಪ್ರಿಯರಿಗೆ ಹೊಸ ಅನುಭವವನ್ನು ನೀಡುವ ಕಾದಂಬರಿ ಆಗಿದ್ದು ಆಸಕ್ತರು 9743224892 ಗೆ ಕಾದಂಬರಿಕಾರರನ್ನು ಸಂಪರ್ಕಿಸಿ ಕಾದಂಬರಿ ಕೊಂಡು ಓದಲು ಕೋರಿದೆ