ಕಲ್ಪತರು ಸೇವಾ ಸಂಘದಿಂದ ಐದು ದಿನಗಳ ಶರಣ ಚರಿತಾಮೃತ ಪ್ರವಚನ
ಕಲ್ಪತರು ಸೇವಾ ಸಂಘದಿಂದ ಐದು ದಿನಗಳ ಶರಣ ಚರಿತಾಮೃತ ಪ್ರವಚನ
ನಗರದ ವಿಜಯನಗರ ಕಾಲನಿಯ ಶ್ರೀ ಕಲ್ಪತರು ಸೇವಾ ಸಂಘದಿಂದ ಗಣೇಶ ಚತುರ್ಥಿಯ ಅಂಗವಾಗಿ ಐದು ದಿನಗಳ ಶರಣ ಚರಿತಾಮೃತ ಪ್ರವಚನ
ಕಲಬುರಗಿ : ನಾಡಿನ ಖ್ಯಾತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಬಂಡಯ್ಯ ಶಾಸ್ತ್ರಿಗಳು ಪ್ರವಚನವನ್ನು ಉಣಬಡಿಸುತ್ತಾ ಇಂದಿನ ದಿನಮಾನಗಳಲ್ಲಿ ಪುರಾಣ.ಪ್ರವಚನ , ಆದ್ಯಾತ್ಮ ವಿಷಯಗಳನ್ನು ಆಲಿಸುವುದು ಮತ್ತು ಶರಣರ ದಾರ್ಶನಿಕರ ಜೀವನದ ಸಾರವನ್ನು ಆಲಿಸುವುದು ಬಹು ಮುಖ್ಯ ಇದರಿಂದ ನಾವು ಸಂಸ್ಕಾರವಂತರಾಗುತ್ತೇವೆ ಎಂದರು. ಜ್ಯೋತಿಷ್ಯ ರತ್ನ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹೇಳಿದ್ದಾರೆ.
ಕಲ್ಪತರು ಸೇವಾ ಸಂಘದ ಅಧ್ಯಕ್ಷರಾದ ಸಂತೋಷ್ ಪಾಟೀಲ್ ದಣ್ಣೂರ. ಉಪಾಧ್ಯಕ್ಷರು ಡಾ|| ಸಂತೋಷ್ ಕೊಟ್ನೂರ. ಕಾರ್ಯದರ್ಶಿ ಮುನಿಕುಮಾರ ಹಿರೇಮಠ ಜೋಗುರ . ಶ್ರೀನಾಥ ಟೋಪಿ .ಸೋಮದತ್ತ ಪಾಟೀಲ್. ಅಜಯ್ ಮಿಶ್ರಾ ಹಾಗೂ ಕಲ್ಪತರು ಸೇವಾ ಸಂಘದ ಸಮಸ್ತ ಎಲ್ಲಾ ಪದಾಧಿಕಾರಿಗಳು ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ ತಬಲಾ ವಾದಕರಾದ ಜಗದೀಶ ದೇಸಾಯಿ ಕಲ್ಲೂರ ಹಾಗೂ ವಿಜಯನಗರ ಕಾಲೋನಿಯ ಅನೇಕ ಭಕ್ತರು ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ