ಸಮಾಜ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು- ಸಂಗಮೇಶ ಸರಡಗಿ

ಸಮುದಾಯದ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿ- ಸಂಗಮೇಶ ಸರಡಗಿ
ಸಮಾಜ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು- ಸಂಗಮೇಶ ಸರಡಗಿ
ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಸಪ್ತಗಿರಿ ಹೋಟೆಲನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾದ ಸಂತೋಷ ಪಾಟೀಲ್, ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಕುಮಾರ ಮೋದಿ ಹಾಗೂ ಕಲಬುರಗಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಪಾಟೀಲ್ ಅವರಿಗೆ ಗೆಳೆಯರ ಬಳಗದ ವತಿಯಿಂದ ಹೃದಯ ಸ್ಪರ್ಶಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಗಮೇಶ ಸರಡಗಿ ಸಮಾನತೆಗಾಗಿ ಕ್ರಾಂತಿ ನಡೆಸಿದ ಬಸವಣ್ಣನವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ಸಾಹಿ ಯುವ ನಾಯಕರು ವಿರಶ್ವೆವ ಲಿಂಗಾಯತ ಸಮಾಜವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಎಲ್ಲರೂ ಒಗ್ಗಟ್ಟಾಗಿ, ಸಮುದಾಯದ ಅಭಿವೃದ್ಧಿಗಾಗಿ ಕೈಜೋಡಿಸಬೇಕು. ಸಮುದಾಯದ ಮಕ್ಕಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಬೇಕು ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ವಿರೇಶ ಬೋಳಶೆಟ್ಟಿ ನಿರೂಪಿಸಿದರು, ಶಿವರಾಜ ಬಿರಬಿಟ್ಟೆ ಪ್ರಾರ್ಥಿಸಿದರು, ಮಂಜುನಾಥ ಶೆಟ್ಟಿ ಸ್ವಾಗತಿಸಿದರು, ಬಸವರಾಜ ಹೆಳವರ ಯಾಳಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಶರಣಗೌಡ ಡಿ. ಪಾಟೀಲ, ಬಸವರಾಜ ಬಿರಬಿಟ್ಟೆ, ಸಂಜೀವಕುಮಾರ ಶೆಟ್ಟಿ, ಜೈಭೀಮ ಹುಡಗಿ, ಶರಣಬಸಪ್ಪ ಹಾಗರಗಿ, ಶಿವರಾಜ ಮಹಾಗಾಂವ, ತಿಮ್ಮನಾಯಕ, ಹೆಚ್.ಬಿ ಪಾಟೀಲ, ನ್ಯಾಯವಾದಿ ಹಣಮಂತ್ರಾಯ ಅಟ್ಟೂರ್, ನರಸಪ್ಪ ಬಿರಾದಾರ, ಸೂರ್ಯಕಾಂತ ಸಾವಳಗಿ, ಬಾಲಕೃಷ್ಣ ಕುಲಕರ್ಣಿ, ದೀಲಿಪ ಬಕರೆ, ಶ್ರೀನಿವಾಸ ಬುಜ್ಜಿ, ಶರಣು ಸರಡಗಿ, ಚಂದ್ರು ಮಲ್ಕಾಪುರೆ, ಶಿವಪುತ್ರ ಹಾಗೂ ಇನ್ನಿತರ ಗೆಳೆಯರು ಭಾಗವಹಿಸಿದ್ದರು.