ಕೆಎಎಸ್’ ಮರು ಪರೀಕ್ಷೆ ನಡೆಸಲು ಕರವೇ ಒತ್ತಾಯ

ಕೆಎಎಸ್’ ಮರು ಪರೀಕ್ಷೆ ನಡೆಸಲು ಕರವೇ ಒತ್ತಾಯ

ಕೆಎಎಸ್’ ಮರು ಪರೀಕ್ಷೆ ನಡೆಸಲು ಕರವೇ ಒತ್ತಾಯ

ಕಲಬುರಗಿ: ವಿರೋಧದ ನಡುವೆಯೂ ಕರ್ನಾಟಕ ಲೋಕಸೇವಾ ಆಯೋಗವು ಆ.27ರಂದು ಕೆಎಎಸ್ ಪರೀಕ್ಷೆ ನಡೆಸಿದ್ದು, ಕನ್ನಡ ಅನುವಾದ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಮರು ಪರೀಕ್ಷೆಯನ್ನು ನಡೆಸುವಂತೆ ಕರವೇ(ಕನ್ನಡಿಗರ ಬಣ) ಜಿಲ್ಲಾಧ್ಯಕ್ಷರಾದ ಅಶ್ವಿನಕುಮಾರ ರಂಗದಾಳ ಆಗ್ರಹಿಸಿದ್ದಾರೆ.

                 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಇಂಗ್ಲಿಷ್ ನಿಂದ ಕನ್ನಡ ಅನುವಾದದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಕೆಪಿಎಸ್ಸಿ ಹಾಗೂ ಸರಕಾರದ ವಿರುದ್ಧ ಪರೀಕ್ಷಾರ್ಥಿಗಳು ಅಸಮಾಧನ ವ್ಯಕ್ತಪಡಸಿದ್ದಾರೆ. ಪ್ರಶ್ನೆಪತ್ರಿಕೆಯ ಕನ್ನಡ ಅನುವಾದದಲ್ಲಿ ತಪ್ಪುಗಳು, ಒಟ್ಟು 58 ಪ್ರಶ್ನೆಗಳಲ್ಲಿ ತಪ್ಪಾಗಿರುವುದು ತಿಳಿದು ಬಂದಿರುತ್ತದೆ.

ಎಪ್ರಿಲ್ ತಿಂಗಳಲ್ಲೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗುತ್ತಿದೆ. ಸರಕಾರಿ ನಿಯಮಗಳ ಪ್ರಕಾರ ಪರೀಕ್ಷೆಯ ಒಂದು ವಾರ ಮುಂಚೆ ಸಿದ್ಧಪಡಿಸಬೇಕು ವಾರದ ಮಧ್ಯ ಕೆಲಸದ ದಿನ ಪರೀಕ್ಷೆ ನಿಗದಿ, ಸಾಮಾನ್ಯವಾಗಿ ರವಿವಾರ ನಡೆಯುತ್ತಿತ್ತು. ಆದರೆ ರಜೆಯಲ್ಲದೆ ದಿನ ಪರೀಕ್ಷೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

    ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ತಮ್ಮ ಅಳಲನ್ನು ಹಲವು ಮಾಧ್ಯಮಗಳ ಮುಂದೆ ತೋಡಿಕೊಂಡಿರುವುದನ್ನು ನೋಡಿ ಸಂಕಟವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ತಾವು ಮಾಡಿರುವ ಅನ್ಯಾಯವನ್ನು ಒಪ್ಪಿಕೊಳ್ಳದೇ ಬೇರೆ ಬೇರೆ ರೀತಿಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಅಧಿಕಾರಿಗಳ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ತೀವ್ರವಾಗಿ ಖಂಡಿಸುತ್ತದೆ ಎಂದರು.