ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡಿದು ಜಾನಪದ : ಶರಣಬಸವಪ್ಪ ಢಗೆ IPS
ಕಲಬುರಗಿ : ನಗರದ ಸುವರ್ಣ ಭವನದಲ್ಲಿ 31_8_24 ರಂದು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಜರಗಿತು,
ಸಮಾರಂಭವನ್ನು ಉದ್ಘಾಟಿಸಿದ ನಗರ ಪೊಲೀಸ್ ಆಯುಕ್ತರು ಡಾ.ಶರಣಬಸಪ್ಪಾ ಢಗೆ ಮಾತನಾಡಿ, ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಾಗುತ್ತಿದೆ. ಮಾನವನ ನಾಗರಿಕತೆ ಜೀವನಕ್ಕಿಂತಲೂ ಮುಂಚಿತವಾಗಿ ಶ್ರಮ ಶಕ್ತಿ ಮುಖ್ಯವಾಗಿದ್ದು, ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ , ವಾದ್ಯ ಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ ಎಂದು ತಿಳಿಸಿದರು.
ಮಕ್ಕಳ ಸಾಹಿತಿ,ಎ.ಕೆ.ರಾಮೇಶ್ವರ ಅವರು ಜನಪದ ಕಲೆ ಯಾವ ಕಾಲಘಟ್ಟದಲ್ಲಿಯೂ ನಾಶವಾಗದೆ ಮುಂದುವರೆಯುತ್ತಿದ್ದು, ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ದೇಶದಲ್ಲಿ ಶಿಷ್ಟ ಕಲಾವಿದರಿಗೆ ಸಿಕ್ಕಿರುವ ಗೌರವ , ಮನ್ನಣೆಗಳು ಜನಪದ ಕಲಾವಿದರಿಗೆ ದೊರಕುತ್ತಿಲ್ಲ. ಇದಕ್ಕೆ ಹಲವು ಲೋಪಗಳಿದ್ದರೂ, ಅದೆಲ್ಲವನ್ನು ಬದಿಗೊತ್ತಿ ಕಲೆಯನ್ನು ಜೀವನವನ್ನಾಗಿ ಮುಂದುವರೆಸುತ್ತಿರುವ ಕಲಾವಿದರಿಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ ಎಂದು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ದಾಖಲೆಯಾಗದ ಸಾವಿರಾರು ಕಲೆಗಳು ನಮ್ಮಿಂದ ದೂರವಿದ್ದು, ಕೆಲವೊಬ್ಬರಿಂದ ಪೋಷಿಸಲ್ಪಟ್ಟು ಮೂಲ ರೂಪವನ್ನು ಹಾಗೆಯೇ ಉಳಿಸಿಕೊಂಡಿವೆ. ಜನಪದ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು. ಕಲಾವಿದರ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ,ಸಿ.ಎಸ್ ಮಾಲಿ ಪಾಟೀಲ ಹೇಳಿದರು.
ಜಾನಪದ ಕಲಾವಿದರಾದ ಡಾ. ಸಿದ್ರಾಮಪ್ಪ ಪೋಲಿಸ ಪಾಟೀಲ ,ಶ್ರೀಮತಿ ಶರಣಮ್ಮ ಪಿ. ಸಜ್ಜನ ,ಶ್ರೀ ಗುಂಡಪ್ಪ ಗುಡ್ಲಾ ಕೊಲ್ಲೂರು , ಶ್ರೀ ರಾಮಲಿಂಗಪ್ಪ ಪ್ಯಾಟಿ ಕೊಲ್ಲೂರು, ಶ್ರೀ ಹಣಮಂತರಾಯ ಮಂಗಾಣೆ ಜಾನಪದ ಹಾಡಿದ ಕಲಾವಿದರಿಗೆ ಜಾನಪದ ಪರಿಷತ್ತಿನಿಂದ ಗೌರವಿಸಿ ಸನ್ಮಾನಿಸಿದರು.
ವೇದಿಕೆಯಲ್ಲಿ ಶರಣಗೌಡ ಅಲ್ಲಮಪ್ರಭು ಪಾಟೀಲ, ಡಾ ವಿಶಾಲಾಕ್ಷಿ ಕರೆಡ್ಡಿ,ಕಸಾಪ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ, ಭಾನುಕುಮಾರ ಗಿರೇಗೋಳ ,ಡಾ.ಕೆ.ಎಸ್.ಬಂಧು,ಶಿವರಾಜ ಅಂಡಿಗಿ ಡಿ.ಪಿ ಸಜ್ಜನ, ಉಪಸ್ಥಿತರಿದ್ದರು,
ರೇಣುಕಾ.ಎಸ್ ಕಾರ್ಯಕ್ರಮದ, ನಿರೂಪಿಸಿದರು, ಧರ್ಮಣ್ಣ ಧನ್ನಿ ,ಸ್ವಾಗತಿಸಿದರು, ಡಾ.ಹಣಮಂತ್ರಾಯ ರಾಂಪೂರೆ ವಂದಿಸಿದರು