ಜ.17ರಿಂದ ಮೂರುದಿನ : ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರೆ : ಮಹಾರಾಜ್ ದಿಗ್ಗಿ ಮಾಹಿತಿ ನಟ ಡಾಲಿ ಧನಂಜಯ ಆಗಮನ

ಜ.17ರಿಂದ ಮೂರುದಿನ : ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರೆ : ಮಹಾರಾಜ್ ದಿಗ್ಗಿ ಮಾಹಿತಿ  ನಟ ಡಾಲಿ ಧನಂಜಯ ಆಗಮನ

ಜ.17ರಿಂದ ಮೂರುದಿನ : ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರೆ : ಮಹಾರಾಜ್ ದಿಗ್ಗಿ ಮಾಹಿತಿ ,ನಟ ಡಾಲಿ ಧನಂಜಯ ಆಗಮನ

ಯಾದಗಿರಿ: ಶಹಾಪುರ ತಾಲೂಕಿನ ಇಬ್ರಾಂಪುರಲ್ಲಿ ಜ.17 ರಿಂದ 19 ರವರೆಗೆ ಶ್ರೀ ಸಾಯಿಬಾಬಾ ಅವರ 4ನೇ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಮಂದಿರ ಶ್ರೀ ಸಾಯಿ ಸಿದ್ದರಾಮ ಆಶ್ರಮದ ಮಹಾರಾಜ್ ದಿಗ್ಗಿ ತಿಳಿಸಿದ್ದಾರೆ. 

ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಜ.17 ರಂದು ಮಧ್ಯಾಹ್ನ 12 ಕ್ಕೆ ಉಚಿತ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಗುರುಮಠಕಲ್ ಖಾಸಾಮಠ, ಕಡಕೊಳ ಮಡಿವಾಳ್ವೇರ ಮಠ, ಸರೂರು, ಅಗತೀರ್ಥದ ಗುರುರೇವಣಸಿದ್ದೆಶ್ವರ ಗುರುಪೀಠ, ಚಿಗರಹಳ್ಳಿ ಮರಳುಶಂಕರ ದೇವರಪೀಠ, ಹೋತಪೇಠ, ದೊರನಹಳ್ಳಿ, ಸೂಗುರು, ಮಹಲ್ ರೋಜಾ, ಏಕದಂಡಗಿಮಠ ಶಹಾಪುರ, ಜುಬೇರ್ ಸೈಯದ್ ಷಾ ಚಾಂದ ಹುಸೈನಿ, ಗೊಬ್ಬರವಾಡಿ ಸೇರಿದಂತೆಯೇ ವಿವಿಧ ಮಠಗಳ ಶ್ರೀಗಳ ಸಾನಿಧ್ಯದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್, ಮಾಜಿ ಶಾಸಕ ರಾಜೂಗೌಡ , ಮಾಜಿ ಶಾಸಕ ಗುರು ಪಾಟೀಲ್, ಮುಖಂಡ ಅಮೀನ್ ರೆಡ್ಡಿ ಅವರು ಉದ್ಘಾಟಿಸಲಿದ್ದಾರೆ. ಶರಣಪ್ಪ ಸಲಾದಪುರ, ವಿಶ್ವಾರಾಧ್ಯ ಸತ್ಯಂಪೇಟ್ ಅವರನ್ನು ಸನ್ಮಾನಿಸಲಾಗುವುದೆಂದು ಮಹಾರಾಜ್ ದಿಗ್ಗಿ ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಶರಣು ಗದ್ದುಗೆ, ಅಮಾತೆಪ್ಪ ಕಂದಕೂರ ಅವರು ಇತರರು ಸಾಯಿಬಾಬಾ ಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆಂದು ಅವರು ಹೇಳಿದರು.

ಜ.18 ರಂದು ಸಂಜೆ 6 ಕ್ಕೆ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು, ತಿಂಥಣಿ ಬ್ರಿಜ್ ಕನಕಗುರುಪೀಠ, ಅರಕೇರಾ ಸೇರಿದಂತೆಯೇ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಜಿ.ಕುಮಾರ ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ, ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ ಅವರು ಉದ್ಘಾಟನೆ ಮಾಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಕನ್ನಡದ ನಟ ಡಾಲಿ ಧನಂಜಯ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಹಾಗೂ ನಿಕೇತ್ ರಾಜ್ ಮೌರ್ಯ ಅವರು ಭಾಗವಹಿಸಲಿದ್ದಾರೆಂದರು.

ಪ್ರೋ.ಜೆ.ಎಂ.ತಿಪ್ಪೇಸ್ವಾಮಿ, ಡಿಸಿ ಹರ್ಷಲ್ ಬೋಯರ್, ಎಸ್ ಪಿ ಪೃಥ್ವಿಕ್ ಶಂಕರ್ ಸೇರಿದಂತೆಯೇ ಇತರೇ ಗಣ್ಯರು ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆಂದು ಮಹಾರಾಜ್ ದಿಗ್ಗಿ ವಿವರಿಸಿದರು.

ಜ.19 ರಂದು ಮಧ್ಯಾಹ್ನ 2 ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಸಂಭ್ರಮೋತ್ಸವ ನಡೆಸುತ್ತಾ ಬರಲಾಗುತ್ತಿದೆ. ದೇವಸ್ಥಾನದಲ್ಲಿ‌ ನಿತ್ಯವೂ‌ ವಿಶೇಷ, ಅನ್ನದಾಸೋಹ ನಡೆಯುತ್ತಿದೆ. ಮುಂದೆ ಕಲ್ಯಾಣ ಮಂಟಪ, ಅನ್ನದಾಸೋಹ ಮನೆ, ವನಸಿರಿ ಬೆಳೆಸುವಿಕೆ ಹೀಗೆ ವಿವಿಧ ಯೋಜನೆಗಳು ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಎಲ್ಲ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಕಾರ್ಯದರ್ಶಿ ಸಿದ್ದಪ್ಪಾಜಿ ಭಾಗವಹಿಸುವರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಣ್ಣ ಐಕೂರ್, ಶ್ರೀಧರ ಸಾಹುಕಾರ, ಖಾಜಾ ಮೈನೋದ್ದಿನ್, ಮಾಳಪ್ಪ ಯಾದವ್, ಶಿವು ಬೆಳಗುಂದಿ, ಭೀಮಾಶಂಕರ ದೊರನಹಳ್ಳಿ, ನರೇಶ ಗಿರೆಪ್ಪನೊರ, ಅಲಿಸಾಬ್, ಶಿವು ಪಾಟೀಲ್, ಭೀಮರೆಡ್ಡಿ ಯಾದವ್,ಮಾಳಿಂಗರಾಯ ಕಂದಳ್ಳಿ, ಹೊನ್ನಪ್ಪ ಯಡ್ಡಳ್ಳಿ, ಬೀರೇಶ ಚಿರತೆನೂರ ಸೇರಿದಂತೆಯೇ ಇತರರಿದ್ದರು.