ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಸನ್ಮಾನ

ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಸನ್ಮಾನ
ಶರಣಬಸವ ಸಂಸ್ಥೆಯ ಅಧ್ಯಕ್ಷೆ ಪೂಜ್ಯ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರಿಂದ ಗೌರವ ಡಾಕ್ಟರೇಟ್ (Doctor of Letters) ಪದವಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಸನ್ಮಾನ ಸಮಾರಂಭವು ಏಪ್ರಿಲ್ 24, 2025ರಂದು ಕಲಬುರ್ಗಿಯಲ್ಲಿ ಜರುಗಿತು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯದ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ. ಜಿ. ಆರ್. ಸಿಂಧ್ಯಾ ಸಾಹೇಬರು ಹಾಗೂ ಕಲಬುರ್ಗಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಸನ್ಮಾನ ಸಲ್ಲಿಸಿದರು.
ಈ ಸಂದರ್ಭದಲ್ಲಿ “ಆಡಕಿ ಗ್ರಾಮದ ಬಾವಿಗಳು” ಎಂಬ ಕೃತಿಯ ಪರಿಚಯ ನಡೆಯಿತು. ಬಾವಿಗಳ ಕುರಿತ ಅಧ್ಯಯನ ಮತ್ತು ದಾಖಲಾತಿಯನ್ನು ಅತ್ಯುತ್ತಮ ಸಾಮಾಜಿಕ ಕಾರ್ಯವೆಂದು ಶ್ಲಾಘಿಸಿದ ಡಾ. ದಾಕ್ಷಾಯಿಣಿ ಎಸ್. ಅಪ್ಪಾ ಅವರು, ಈ ಕೃತಿಯ ಮೂಲಕ ಪ್ರಾಚೀನ ಜಲಸಂಪತ್ತಿ ಸ್ಮಾರಕಗಳ ಪೋಷಣೆಗಾಗಿ ಉತ್ತಮ ಕಾರ್ಯವಾಗಿದೆಯೆಂದು ಅಭಿಪ್ರಾಯಪಟ್ಟರು. ಇದೇ ಕೆಲಸದ ಬೆನ್ನಲ್ಲೇ ಲೇಖಕಿ, ಶಿಕ್ಷಕಿ ಶ್ರೀಮತಿ ಚಂದ್ರಕಲಾ ಎಂ. ಪಾಟೀಲರಿಗೆ ಸಹ ಸನ್ಮಾನ ಲಭಿಸಿತು.
ಮಾನ್ಯ ಪಿ. ಜಿ. ಆರ್. ಸಿಂಧ್ಯಾ ಸಾಹೇಬರು ಮಾತನಾಡುತ್ತಾ, ಈ ಕೃತಿ ಹಾಗೂ ಸಂಶೋಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಭವಿಷ್ಯದಲ್ಲಿಯೂ ಈ ರೀತಿಯ ಅಧ್ಯಯನ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಸುಳ್ಳದ ಸರ್, ಚೆನ್ನವೀರಯ್ಯಸ್ವಾಮಿ, ರಾಜು ಟೇಲರ್, ಮಹಾದೇವಪ್ಪ, ರವಿ ಮತ್ತು ಚಂದ್ರಕಲಾ ಎಂ. ಪಾಟೀಲ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.