ಹೋಳಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ|

ಹೋಳಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ|

ಹೋಳಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆ|

ಶಹಾಬಾದ : - ನಗರದಲ್ಲಿ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದ್ದು ಸಂತಸದ ವಿಷಯವಾಗಿದೆ‌ ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.

ಅವರು ನಗರ ಪೋಲಿಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಹೋಳಿ ಮತ್ತು ರಂಜಾನ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದರು. 

ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ, ಬಣ್ಣ ಆಡುವಾಗ ರಾಸಾಯನಿಕ ಬಣ್ಣ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ, ನೈಸರ್ಗಿಕ ಬಣ್ಣದ ಉಪಯೋಗ ಮಾಡಿ‌, ವಾರ್ನಿಷ್, ತತ್ತಿ ಒಡೆಯುವದು ಮತ್ತು ಬಟ್ಟೆ ಹರಿಯುವದು ನಿಲ್ಲಿಸಿ, ಕಣ್ಣುಗಳ ಬಗ್ಗೆ ಎಚ್ಚರಿಕೆ ವಹಿಸಿರಿ ಎಂದರು.

ಸಿಪಿಐ ನಟರಾಜ ಲಾಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು, ಕೆಮಿಕಲ್‌ಯುಕ್ತ ಬಣ್ಣಗಳನ್ನು ಬಳಸಬಾರದು ಮತ್ತು ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು, ಒತ್ತಾಯ ಪೂರ್ವಕ ಬಣ್ಣ ಹಚ್ಚೋದರಿಂದ ಜಗಳಕ್ಕೆ ಕಾರಣವಾಗುತ್ತವೆ, ಒಟ್ಟಾರೆಯಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್‌ರೊಂದಿಗೆ ಸಹಕರಿಸಿ ಎಂದರು.

ತಹಶೀಲ್ದಾರ್ ಜಗದೀಶ್ ಚೌರ, ಕಾಡಾ ಅಧ್ಯಕ್ಷ ಡಾ. ಎಂಎ ರಶೀದ, ನಗರ ಸಭೆಯ ಪೌರಾಯುಕ್ತ ಡಾ. ಕೆ. ಗುರುಲಿಂಗಪ್ಪ, ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಕನಕಪ್ಪ ದಂಡಗುಳಕರ, ಮಹ್ಮದ ಮತೀನ ಪಟೇಲ ಮಾತನಾಡಿದರು. 

ಎಚಸಿ ಮಲ್ಲಿಕಾರ್ಜುನ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 

ಪಿಎಸ್ಐ ಚಂದ್ರಕಾಂತ ಮಕಾಲೆ ಮತ್ತು ದೊಡ್ಡಪ್ಪ ಪೂಜಾರಿ, ಹುಸೇನ ಪಾಶಾ, ಬಸವರಾಜ ಮಳ್ಳಿ, ಹುಸೇನ್ ಪಟೇಲ ಇದ್ದರು. 

ಶಾಂತಿ ಸಭೆಯಲ್ಲಿ ರಾಜು ಮೇಸ್ತ್ರಿ, ಮಹ್ಮದ ಬಾಕ್ರೋದ್ದಿನ, ಡಿ.ಡಿ ಓಣಿ, ಚಂದ್ರಕಾಂತ ಗೊಬ್ಬೂರ, ವಿಎಚಪಿ ಅಧ್ಯಕ್ಷ ರಾಮು ಕುಸಾಳೆ, ಅ. ಗನಿ ಸಾಬೀರ, ರವಿ ರಾಠೋಡ, ರಫೀಕ ಭಾಗವಾನ, ಶರಣು ಪಗಲಾಪುರ, ರಾಜೇಶ ಯನಗುಂಟಿ, ಜಗದೇವ ಸುಬೇದಾರ, ಶಿವಶಾಲ ಪಟ್ಟಣ, ಸುಭಾಷ್ ಸಾಕ್ರೆ, ಸತೀಶ ಕೋಬಾಳ, ನಿಂಗಣ್ಣ ಪೂಜಾರಿ, ನಾಗಣ್ಣಗೌಡ ಪಾಟೀಲ, ದಿನೇಶ ಗೌಳಿ, ಮಹಾದೇವ ತರನಳ್ಳಿ, ಹಣಮಂತ ಸಾಲಿ, ಶ್ರೀನಿವಾಸ ನೇದಲಗಿ, ಗೋವಿಂದ ಕುಸಾಳೆ, ಮಲ್ಲಿಕಾರ್ಜುನ ಕಟ್ಟಿಮನಿ, ಡಿಸಿ ಹೊಸಮನಿ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಶಹಾಬಾದ್ ವರದಿ:- ನಾಗರಾಜ್ ದಂಡಾವತಿ