ಹೊಲದಲ್ಲಿ ಜಿಂಕೆ ಸಾವು ಅರಣ್ಯ ಅಧಿಕಾರಗಳಿಗೆ ಹಸ್ತಾಂತರ

ಹೊಲದಲ್ಲಿ ಜಿಂಕೆ ಸಾವು ಅರಣ್ಯ ಅಧಿಕಾರಗಳಿಗೆ ಹಸ್ತಾಂತರ

ಹೊಲದಲ್ಲಿ ಜಿಂಕೆ ಸಾವು ಅರಣ್ಯ ಅಧಿಕಾರಗಳಿಗೆ ಹಸ್ತಾಂತರ

ಕಮಲನಗರ: ತಾಲೂಕಿನ ರಾಂಪುರ ಶಿವಾರಿನಲ್ಲಿ ಇರುವ ಶಿವರಾಜ ರಾಂಪುರೆ ಅವರ ಹೊಲದಲ್ಲಿ ಶನಿವಾರ ಮುಂಜಾನೆ ಜಿಂಕೆ ಒಂದು ಸತ್ತು ಬಿದ್ದಿರುವುದನ್ನು ಕಂಡು ಕಮಲನಗರ ವಲಯ ಅರಣ್ಯ ಅಧಿಕಾರಿಗೆಗಳಿಗೆ ಮಾಹಿತಿ ನೀಡಿ ಜಿಂಕೆ ಶವ ಹಸ್ತಾಂತರ ಮಾಡಿದರು.

ಮಾಹಿತಿ ತಿಳಿದ ಕೂಡಲ ಸ್ಥಳಕ್ಕೆ ಧಾವಿಸಿದ ಉಪ ವಲಯ ಅರಣ್ಯ ಅಧಿಕಾರ ಸುಧಾಕರ ಬಿರಾದಾರ ಮತ್ತು ಸಿಬ್ಬಂದಿ ಮೆಹಬೂಬ್ ಬೆಳಕೋಣಿ ಜಿಂಕೆಯ ಪಾರ್ಥಿವ ಶರಿವನ್ನು ತೆಗೆದುಕೊಂಡು ಹೋಗಿ, ಕಮಲನಗರ ಪಶು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ತಾಲೂಕಿನ ಯಾವದೇ ಪ್ರದೇಶದಲ್ಲಿ ವನ್ಯ ಜೀವಿಗಳ ರಕ್ಷಣೆಗೆ ನಾವು ಸದಾ ಸಿದ್ದರಾಗಿರುತ್ತೇವೆ, ಸಾರ್ವಜನಿಕ ಪ್ರಾಣಿ ರಕ್ಷಣೆ ಯಲ್ಲಿ ನಮ್ಮನ್ನು ಸಹಕರಿಸಿ ಮಾಹಿತಿ ನೀಡಲು ತಿಳಿಸಿದ್ದರು.