ಬೀದರ್|| ಡಿಗ್ಗಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ
ಬೀದರ್|| ಡಿಗ್ಗಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ
ಕಮಲನಗರ:ತಾಲೂಕಿನ ಡಿಗ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ದಿನಾಚರಣೆ ನಿಮಿತ್ತ ರಾಷ್ಟ ಧ್ವಜಾರೋಹಣ ಮಾಡಿ, ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ನಿಕಟ ಪೂರ್ವ ಮುಖ್ಯಗುರು ದೇವೇಂದ್ರ ಪಾಟೀಲ ಮತ್ತು ಹಿರಿಯ ಅನುಭವಿ ನಿವೃತ್ತ ಶಿಕ್ಷಕ ಮಡಿವಾಳಪ್ಪ ಮುರ್ಕೆ ಆಗಮಿಸಿ ಮಾತನಾಡಿದರು, ಹೈದ್ರಾಬಾದ ಪ್ರಾಂತ್ಯ ನಿಜಾಮ ಆಳ್ವಿಕೆಯಿಂದ ಸ್ವತಂತ್ರಯಾದ ಬಗ್ಗೆ ತಿಳಿಸಿದರು. ಮತ್ತು ಮುಂಬರುವ ದಿನಗಳಲ್ಲಿ ಈ ಭಾಗ ಹೆಚ್ಚಿನ ಅಭಿವೃದ್ಧಿ ಸಾದಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಯುವ ಪತ್ರಕರ್ತ ಪರಮೇಶ ರಾಂಪುರೆ ಮಾತನಾಡಿ, ಇಡಿ ದೇಶ ಸ್ವತಂತ್ರದ ಅನುಭವ ಅನುಭವಿಸುವಾಗ ಈ ಭಾಗದ ನಮ್ಮ ಪೂರ್ವಜನರ ಮೇಲೆ ಅನ್ಯಾಯ ಅಂತ್ಯಚಾರ ನಡಿಯಿತ್ತಿತು.ಗೋರ್ಟಾ ಗ್ರಾಮದಲ್ಲಿ ಸುಮಾರು 200 ಜನಕ್ಕೆ ಸಜೀವ ದಹನ ಮಾಡಿದರು.ನಂತರ ಅಂದಿನ ಗ್ರಹಮಂತ್ರಿ ಸರ್ದಾರ ವಲ್ಲ ಭಾಯಿ ಪಟೇಲ ಅವರ ಮಿಂಚಿನ ಪೋಲೊ ದಾಳಿಯಿಂದ ಸೆಪ್ಟೆಂಬರ 17,1948 ರಂದು ಸ್ವತಂತ್ರ ಸಿಕ್ಕಿತು ಎಂದು ಹೇಳಿದರು.
ಅಧ್ಯಕ್ಷ ಭಾಷಣ ಶಾಲೆಯ ಎಸ. ಡಿ. ಏಮ್. ಸಿ. ಅಧ್ಯಕ್ಷ ಸಂತೋಷ ಬನವಾಸೆ ವಹಿಸಿ ಮಾತನಾಡಿದರು, ಪುಟಾಣಿ ಮಕ್ಕಳು ಕೂಡು ಬಹಳ ಒಳ್ಳೆಯ ರೀತಿಯಲ್ಲಿ ಭಾಷಣ ಮಾಡಿದರು. ನಂತರ ದೇಶ ಭಕ್ತಿ ಗೀತೆಮೇಲೆ ನೃತ್ಯ ಮಾಡಿ ಸಭಿಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೈಜೀನಾಥ ಕುಂಬಾರಗಿರೆ, ಸಂಗಮನಾಥ ಬಿರಾದಾರ, ವಿಜಯಕುಮಾರ ಪಾಟೀಲ,
ಸಿಬ್ಬಂದಿ ವರ್ಗದವರಾದ ಸತೀಶ ಕುಲಾಲ, ವಿಜಯಲಕ್ಷ್ಮಿ ಪಾಟೀಲ, ಮಂಗಲಾ ಮೇಡಂ, ಸಪ್ನಾ ನಿಟ್ಟೂರೆ, ನೀಲಾಂಬಿಕಾ ಚಾಂಡೇಶ್ವರೆ, ಅಂಗವಾಡಿ ಕಾರ್ಯಕರ್ತೆ ಸವಿತಾ ರಾಂಪುರೆ, ಸುವರ್ಣ ಮೇಡಂ ಸೇರಿದಂತೆ ಡಿಗ್ಗಿ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಸೇರಿದರು.
ಮುಖ್ಯ ಶಿಕ್ಷಕರಾದ ಸಂತೋಷ ಬಿರಾದಾರ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.