ಆಧ್ಯಾತ್ಮಿಕ ಜೀವನ ಸಾಧನೆಗೆ ಮುನ್ನುಡಿ

ಆಧ್ಯಾತ್ಮಿಕ ಜೀವನ ಸಾಧನೆಗೆ ಮುನ್ನುಡಿ

ಆಧ್ಯಾತ್ಮಿಕ ಜೀವನ ಸಾಧನೆಗೆ ಮುನ್ನುಡಿ

ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಅತ್ಮದ ಅನುಸಂಧಾನ ಹೊಂದಬೇಕು. ಹೊರಗಿನ ಸಂಪತ್ತಿನ ಬದಲಾಗಿ, ಅಂತರಿಕ ಶಾಂತಿ ಮತ್ತು ಸಂತೃಪ್ತಿಯನ್ನು ಸಾಧಿಸುವುದೇ ಮುಖ್ಯವಾಗಿದೆ. ಅಧ್ಯಾತ್ಮದಿಂದ ಅಂತರಿಕ ಸಶಕ್ತಿಕರಣ ಸಾಧ್ಯವಾಗುತ್ತದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸವಿತಕ್ಕೆ ಹೇಳಿದರು.

ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಹ್ಮ ಭೋಜನ ಹಾಗೂ ಈಶ್ವರೀಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು. ಜಿಲ್ಲಾ ಕಾನಿಪ ಸದಸ್ಯ ಆದರ್ಶ ಕುಲಕರ್ಣಿ ಮಾತನಾಡಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವರ್ತಮಾನ ಸಮಯದಲ್ಲಿ ಜಾತಿ ಭೇದಗಳಿಂದ ಮುಕ್ತರಾಗಿ ಉನ್ನತ ಜೀವನ ನಡೆಸುವ ಆಧ್ಯಾತ್ಮಿಕ * ಮಾರ್ಗವಾಗಿದೆ. ಆಸ್ತಿ ಎಷ್ಟಿದ್ದರೇನು. ಮನುಷ್ಯನಿಗೆ ದ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ. ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಗತ್ತಿನಯಾವುದೇ ಶಾಖೆಗೆ ಭೇಟಿ ನೀಡಿದರೂ ನೆಮ್ಮದಿ ದೊರೆಯುತ್ತದೆ ಎಂದರು.

ಪತ್ರಕರ್ತ ಈಶ್ವರ ಬೆಟಗೇರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಾಂತಿ ಸ್ಥಾಪಿಸಲು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಬ್ರಹ್ಮಕುಮಾರಿಯರು ವಿಶ್ವದಾದ್ಯಂತ ಅಧ್ಯಾತ್ಮಿಕ ಜಾಗೃತಿ ಮಾಡುತ್ತಿದ್ದು ಇಂತಹ ಸೇವೆ ಅನುಕರಣೀಯ ಎಂದರು.

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಯವರು ಮಾತನಾಡಿ, ಮನುಷ್ಯ ಅನೇಕ ಜಂಜಾಟಗಳನ್ನು ಬದಿಗಿಟ್ಟು ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು, ಹೆಚ್ಚು ಆಧ್ಯಾತ್ಮಿಕ ಜೀವನ ಶೈಲಿ ರೂಢಿಸಿಕೊಂಡರೆ ಸಾಧನೆ ದಾರಿಗೆ ಮುನ್ನುಡಿ ಬರೆದಂತೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸ್ವಾಗತ ನೃತ್ಯ ಮಾಡಿದರು.

 ಕಾನಿಪ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ ಸೇರಿದಂತೆ ಕಾನಿಪ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾನಿಪತಾಲೂಕ ಉಪಾಧ್ಯಕ್ಷ. ಮಲ್ಲಯ್ಯ ಗುಂಡಗೋಪುರಮಠ, ಸಂಗಮೇಶ ಮೇಣಸಿಗಿ,ಗವಿಸಿದ್ದಪ್ಪಗೊಡಚಪ್ಪನವರ,ಹುಚ್ಚೀರಪ್ಪ ವೀರಪ್ಪ ಈಟಿ, ಎಂ.ಎಸ್. ಪೂಜಾರ, ಬಿ.ವಿ. ದೇಸಾಯಿಪಟ್ಟಿ, ಎಸ್. ಕೆ. ಪ್ರಭುಸ್ವಾಮಿಮಠ, ಮಲ್ಲಣ್ಣ ಕಾತರಕಿ, ವೀರಣ್ಣ ಹತ್ತಿಕಟಗಿ, ಹನಮಂತ ರಾಚನಗೌಡ್ರ, ರಾಮಣ್ಣ ಕುಲಕರ್ಣಿ ಇತರರಿದ್ದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ