ಯಡ್ರಾಮಿಯಲ್ಲಿ ರೈತ ಜಾಗೃತಿ ಸಮಾವೇಶ || ತಾಲೂಕ ಅಧ್ಯಕ್ಷ ಮಾಳಿಂಗರಾಯ ಕಾರಗೊಂಡ ನೇತೃತ್ವ
ಯಡ್ರಾಮಿಯಲ್ಲಿ ರೈತ ಜಾಗೃತಿ ಸಮಾವೇಶ ತಾಲೂಕ ಅಧ್ಯಕ್ಷ ಮಾಳಿಂಗರಾಯ ಕಾರಗೊಂಡ ನೇತೃತ್ವ
ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ದಿನಾಂಕ 13/9/2024 ರಂದು ಶುಕ್ರವಾರ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ರೈತ ಜಾಗೃತಿ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಡ್ರಾಮಿ ತಾಲೂಕ ಅಧ್ಯಕ್ಷ ಮಾಳಿಂಗರಾಯ ಕಾರಗೊಂಡ್ ತಿಳಿಸಿದರು .
ಕಾರಗೊಂಡ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ,ಸಂಘಟನೆಯ ರಾಜ್ಯಾಧ್ಯಕ್ಷರಾದ ಶಾಂತಗೌಡ ಚನ್ನಪಟ್ಟಣ, ಹಾಗು ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಎ ಪಾಟೀಲ್ ಮದ್ದರಕಿ ಮತ್ತು ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಅಣವೀರ್ ಹೆಬ್ಬಾಳ್ ಹಾಗು ಜೇವರ್ಗಿ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಪೂಜಾರಿ ಮತ್ತು ರೈತಪರ ಹೋರಾಟಗಾರರು ಗಣ್ಯ ಮಾನ್ಯರಾದ ಸೋಪಿ ಸಂತರು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಲು ದಿಚ್ಚೆಯನ್ನು ನೀಡಲಿದ್ದಾರೆ . ಕಾರ್ಯಕ್ರಮದಲ್ಲಿ ತಾಲೂಕಿನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಲಿದ್ದಾರೆ.
ತಾಲೂಕಿನ ಎಲ್ಲಾ ಪದಾಧಿಕಾರಿಗಳು , ವಿವಿಧ ಸಂಘಟನೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು , ತಾಲೂಕಿನ ಎಲ್ಲ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮಾಳಿಂಗರಾಯ ಕಾರಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕಾರ್ಯಕ್ರಮಕ್ಕೆ ಪತ್ರಿಕಾ ವರದಿಗಾರರು ಆಗಮಿಸಬೇಕೆಂದು ವಿನಂತಿಸಿದ್ದಾರೆ.
ವರದಿ ಜೆಟ್ಟಪ್ಪ ಎಸ್ ಪೂಜಾರಿ