ಉದ್ಯಾನವನ ಉಳಿಸಿ – ಕಲಬುರಗಿ ನಗರ ಬೆಳೆಸಿ

ಉದ್ಯಾನವನ ಉಳಿಸಿ – ಕಲಬುರಗಿ ನಗರ ಬೆಳೆಸಿ

ಉದ್ಯಾನವನ ಉಳಿಸಿ – ಕಲಬುರಗಿ ನಗರ ಬೆಳೆಸಿ

ಕಲಬುರಗಿ: ನಗರದ ಬ್ರಹ್ಮಪೂರ್ ಸರ್ವೆ ನಂ. 86, ವಾರ್ಡ್ ನಂ. 52 ರಲ್ಲಿರುವ ಶ್ರೀ ವೀರಭದ್ರೇಶ್ವರ ಕಾಲೋನಿ ಹಾಗೂ ಮಾಣಿಕ್ ಪ್ರಭು ಕಾಲೋನಿಯಲ್ಲಿ ಸುಮಾರು 3000 ಜನಸಂಖ್ಯೆ ವಾಸವಾಗಿದ್ದು, 1995ರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ N.A. ಆದೇಶದ ಮೇರೆಗೆ ಲೇಔಟ್ ಮ್ಯಾಪ್‌ನಲ್ಲಿ ವಿಶಾಲವಾದ ಉದ್ಯಾನವನ ಜಾಗವನ್ನು ಮೀಸಲಿರಿಸಲಾಗಿತ್ತು. ಈ ಆಧಾರದಲ್ಲಿ ಹಲವಾರು ನಾಗರಿಕರು ಪ್ಲಾಟ್‌ಗಳನ್ನು ಖರೀದಿಸಿದ್ದರು.

ಆದರೆ ಇತ್ತೀಚೆಗೆ ಕೆಲವರು ಅಕ್ರಮವಾಗಿ ಲೇಔಟ್ ತಿದ್ದುಪಡಿ ಮಾಡಿಕೊಂಡು ಉದ್ಯಾನವನ ಜಾಗವನ್ನು ಖರೀದಿಸುವುದು ಹಾಗೂ ಮನೆಗಳನ್ನು ಕಟ್ಟುವ ಪ್ರಕ್ರಿಯೆಯನ್ನು ಆರಂಭಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉದ್ಯಾನವನ ಜಾಗವನ್ನು ಅಕ್ರಮವಾಗಿ ಕಬಳಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಉದ್ಯಾನವನವನ್ನು ಸಾರ್ವಜನಿಕರ ಉಪಯೋಗಕ್ಕೆ, ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸುವಂತೆ ಮನವಿ ಮಾಡಲಾಯಿತು.

ಇಂದು ಎರಡೂ ಕಾಲೋನಿಗಳ ಪ್ರಮುಖ ಮುಖಂಡರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಆಯುಕ್ತರು ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಾಗೂ ಉದ್ಯಾನವನವನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಲೋನಿಯ ಪ್ರಮುಖರಾದ ಮಹಾಂತೇಶ ಕೌಲಗಿ, ದಶರಥ ಸಿಂಗ್ ಠಾಕೂರ್, ಕೃಷ್ಣ ಸಿಂಧೆ, ಚಂದ್ರಕಾಂತ್ ಆಲಗೂಡ್, ಧರ್ಮರಾಜ್ ಹೇರೂರು, ಸೈಬಣ್ಣ ಕಾಳೆ, ಪ್ರಕಾಶ್ ಬಳಗಾರ್, ನರಸಣ್ಣ ಕಾಡದಿ, ಶೇಖರ್ ಹಿರೇಮಠ್, ಸೂರ್ಯಕಾಂತ್ ಗಿಣ್ಣಿ, ಸೂರ್ಯಕಾಂತ್ ಸೊನ್ನದ್, ಮಹಾಂತಪ್ಪ ಕಲ್‌ಶೆಟ್ಟಿ, ವಿ. ಜಾದವ್, ಶ್ರೀರಂಗ ಕುಲಕರ್ಣಿ, ಅಭಿಷೇಕ್ ಕಾದುನ್, ದಿಲೀಪ್ ರಾಥೋಡ್, ಚಂದ್ರಶೇಖರ ದಂಡೋತಿ, ಶ್ರೀಕೃಷ್ಣ ಹೊಸಮನಿ, ಮಲ್ಲಿಕಾರ್ಜುನ ಎರವಾಳ್, ಡಿ. ದೊಡ್ಡಮನಿ, ವಿಜಯಕುಮಾರ್, ಚಿಲ್ಲಾಳ ವಿಶ್ವನಾಥ್ ಚೆನ್ನುರ್, ಗಂಗಾರಾಮ್ ರಾಥೋಡ್, ಮಲ್ಕಣ್ಣ, ತನುಜ್ ಬಾಯ್ ಮುಂತಾದವರು ಹಾಜರಿದ್ದರು.