ಭಾರತದ ಏಕತೆಗಾಗಿ ಬದುಕಿದ ಸರ್ದಾರ್: ಯಾರಿ

ಭಾರತದ ಏಕತೆಗಾಗಿ ಬದುಕಿದ ಸರ್ದಾರ್: ಯಾರಿ

ಭಾರತದ ಏಕತೆಗಾಗಿ ಬದುಕಿದ ಸರ್ದಾರ್: ಯಾರಿ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಗೌರವ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ,ಭಾರತದ ಏಕತೆಗಾಗಿ ಬದುಕಿದ ಮಹಾನ್ ದೇಶಭಕ್ತರು ಎಂದರು.

ಅವರ ಜನ್ಮದಿನದಂದು ನಾವು ರಾಷ್ಟ್ರೀಯ ಏಕತೆಯ ಮಹತ್ವವನ್ನು ನೆನಪಿಸುವ ಹಾಗೂ ವೈವಿಧ್ಯತೆಯ ನಡುವೆ ಏಕತೆಯನ್ನು ಉತ್ತೇಜಿಸುವ ಏಕತಾ ದಿನವನ್ನಾಗಿ ಆಚರಿಸುತ್ತಿದ್ದೇವೆ.

ಭಾರತದ ಉಕ್ಕಿನ ಮನುಷ್ಯ ಎಂದು ಪ್ರೀತಿಯಿಂದ ಕರೆಯಲ್ಪಡುವ ಸರ್ದಾರ್ ವಲ್ಲಭಭಾಯಿ ಪಟೇಲ್, ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ದಾರ್ಶನಿಕ ನಾಯಕ. ಅಕ್ಟೋಬರ್ 31, 1875 ರಂದು ಗುಜರಾತ್‌ನಲ್ಲಿ ಜನಿಸಿದ ಪಟೇಲ್ ವೃತ್ತಿಪರ ವಕೀಲರು ಮತ್ತು ಕಟ್ಟಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ನ್ಯಾಯ,ಸಮಾನತೆ ಮತ್ತು ಏಕತೆಗೆ ಆಳವಾಗಿ ಬದ್ಧರಾಗಿದ್ದರು,ಅವರ ಆದರ್ಶ ಜೀವನ ಸಂದೇಶ ದೊಂದಿಗೆ ನಾವು ಕೂಡಾ ಭವ್ಯ ಭಾರತದ ಭವಿಷ್ಯಕ್ಕಾಗಿ ಬದುಕಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಬದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮಲ್ಲಿಕಾರ್ಜುನ ಸಾತಖೇಡ,ಅಯ್ಯಣ್ಣ ದಂಡೋತಿ, ಪುಣ್ಯ ರಾಠೋಡ,

ಗುಂಡುಗೌಡ ಪಾಟೀಲ,ಸುನಿಲ ಪಂಚಾಳ,ಬಸವರಾಜ ಸೂಲ್ಹಳ್ಳಿ, ನಿಲೇಶ ಚವ್ಹಾಣ ಸೇರಿದಂತೆ ಇತರರು ಇದ್ದರು.