ಲಿಂಗರಾಜ್ ತಾರಫೈಲ್ ಅವರ ಜನ್ಮದಿನದ ನಿಮಿತ್ತ ನಿರ್ಗತಿಕರಿಗೆ ವಸ್ತ್ರಗಳು ವಿತರಣೆ

ಲಿಂಗರಾಜ್ ತಾರಫೈಲ್ ಅವರ ಜನ್ಮದಿನದ ನಿಮಿತ್ತ ನಿರ್ಗತಿಕರಿಗೆ ವಸ್ತ್ರಗಳು ವಿತರಣೆ
ಕಲಬುರಗಿ: ಡಿ ಎಂ ಎಸ್ ಎಸ್ ಸಂಘಟನೆಯ ರಾಜ್ಯಾಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ದಕ್ಷಿಣ ನಗರ ಅಧ್ಯಕ್ಷರಾದ ಲಿಂಗರಾಜ ತಾರಫೈಲ್ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ ಸೇನೆಯ ವತಿಯಿಂದ ನಗರದ ಪ್ರಸಿದ್ದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವುದರ ಜೊತಗೆ ನಿರ್ಗತಿಕರಿಗೆ ಬೆಡ್ ಶೀಟ್‌ಗಳನ್ನು ವಿತರಿಸಲಾಯಿತು.
ಜೈ ಕನ್ನಡಿಗರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ಅವರು ಮಾತನಾಡಿ ಲಿಂಗರಾಜ್ ತಾರಫೈಲ್ ಅವರು, ದಲಿತ ಮಾದಿಗ ಸಮುದಾಯದ ಕ್ರಿಯಾಶೀಲ ನಾಯಕರಾಗಿದ್ದು ಕಾಂಗ್ರೆಸನಲ್ಲಿ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಅವರ ಜನ್ಮದಿನದಂದು ನಿರ್ಗತಿಕರಿಗೆ ಬೆಡ್ ಶೀಟ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಹೇಳಿದರು.
ಬೀದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಮಾತನಾಡುತ್ತಾ ಲಿಂಗರಾಜ್ ತಾರಫೈಲ್ ಅವರು ರಾಜಕೀಯಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮಲ್ಲು ಅಲ್ಲಗೂಡ, ನವೀನ್, ಶರಣು, ಪ್ರಕಾಶ್, ಅರ್ಜುನ, ವಿಜಯ ಕುಮಾರ್, ಅರ್ಜುನ ಮೇತ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.