ಡಾ ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ,ಬಿಲ್ಲವರಿಂದ ಗೌರವ ಸನ್ಮಾನ

ಡಾ ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ,ಬಿಲ್ಲವರಿಂದ ಗೌರವ ಸನ್ಮಾನ

ಡಾ ಪ್ರಣವಾನಂದ ಶ್ರೀಗಳಿಗೆ ಕಲಬುರಗಿ ಈಡಿಗ,ಬಿಲ್ಲವರಿಂದ ಗೌರವ ಸನ್ಮಾನ

ಕಲಬುರಗಿ : ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಐತಿಹಾಸಿಕ ಪಾದಯಾತ್ರೆ ಕೈಗೊಂಡಿರುವ ಡಾ. ಪ್ರಣವಾನಂದ ಶ್ರೀಗಳು ಗಂಗಾವತಿ ಪಟ್ಟಣಕ್ಕೆ ಆಗಮಿಸಿದಾಗ ಕಲಬುರಗಿಯ ಈಡಿಗ ನಾಯಕರು ಭವ್ಯವಾಗಿ ಸ್ವಾಗತಿಸಿ ಗೌರವದ ಸನ್ಮಾನ ನಡೆಸಿದರು.

    ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಜ 6ರಂದು ಆರಂಭಗೊಂಡ ಫ್ರೀಡಂ ಪಾರ್ಕ್ ವರೆಗಿನ 700 ಕಿ.ಮೀ ಪಾದಯಾತ್ರೆ ಜನವರಿ 21ರಂದು 16 ದಿನದಲ್ಲಿ ಗಂಗಾವತಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ.ಗುತ್ತೇದಾರ್ ನೇತೃತ್ವದಲ್ಲಿ ಕಲಬುರಗಿಯ ಈಡಿಗ, ಬಿಲ್ಲವ ನಾಯಕರು ಪಟ್ಟಣದಲ್ಲಿ ಪಾದಯಾತ್ರೆ ಕೈಗೊಂಡು ನಂತರ ನಡೆದ ಸಮುದಾಯ ಜಾಗೃತಿ ಸಭೆಯಲ್ಲಿ ಡಾ. ಪ್ರಣವಾನಂದ ಶ್ರೀಗಳಿಗೆ ವಿಶೇಷ ಸನ್ಮಾನ ನೆರವೇರಿಸಿದರು. 

  ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಟ್ರಸ್ಟಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ಪ್ರವೀಣ ಜತ್ತನ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂ ಪುರ್, ಈ ತಿಮ್ಮಪ್ಪ ಗಂಗಾವತಿ, ಡಾ ಸದಾನಂದ ಪೆರ್ಲ, ಸುರೇಶ್ ಗುತ್ತೇದಾರ್ ಮಟ್ಟೂರ್, ನಾರಾಯಣ ಗುತ್ತೇದಾರ್ ಬೆಳಗಾವಿ, ಸಂತೋಷ್ ಚೌಧರಿ ಜೊತೆಗಿದ್ದರು. ಸಮಾಜದ ಹಿರಿಯ ಮುಖಂಡರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್ ಅವರನ್ನು ಗೌರವಿಸಲಾಯಿತು.