ಒಳಮೀಸಲಾತಿ ಹೋರಾಟಕ್ಕೆ ಸ್ಪಂದಿಸಿದ ಮಾದಿಗ ಸಮಾಜದ ಮುಖಂಡರಿಗೆ ಧನ್ಯವಾದಗಳು : ಮಲ್ಲಿಕಾರ್ಜುನ ಜೀನಕೇರಿ
ಒಳಮೀಸಲಾತಿ ಹೋರಾಟಕ್ಕೆ ಸ್ಪಂದಿಸಿದ ಮಾದಿಗ ಸಮಾಜದ ಮುಖಂಡರಿಗೆ ಧನ್ಯವಾದಗಳು : ಮಲ್ಲಿಕಾರ್ಜುನ ಜೀನಕೇರಿ
ಕಲಬುರಗಿ: ಸುಧಿರ್ಘ ೩೦ ವರ್ಷಗಳ ಕಾಲದಿಂದ ನಿರಂತವಾಗಿ ಒಳಮೀಸಲಾತಿಗಾಗಿ ಮಾಡಿದ ಸಕ್ರೀಯ ಹೋರಾಟವು ನಮ್ಮ ಸಮಾಜಕ್ಕೆ ಸಂತೋಷದ ವಿಷಯವಾಗಿದೆ. ಇದಕ್ಕೆ ಸ್ಫೂರ್ತಿಯಾದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ನೀಡಿದ ಸಾರ್ವತ್ರಿಕ ಸಾಮಾಜಿಕ ನ್ಯಾಯದ ಫಲವಾಗಿ ಒಳಮೀಸಲಾತಿಯು ಇಂದು ಕಾರ್ಯರೂಪಕ್ಕೆ ಬರಲು ಕೊನೆ ಹಂತ ತಲುಪಿದ್ದು, ಈ ಸಾಮಾಜೀಕ ನ್ಯಾಯದ ಪ್ರತಿಫಲವಾಗಿ ಈ ಹೋರಾಟವನ್ನು ನಾವೆಲ್ಲರೂ ಮಾಡಿಕೊಂಡು ಬರುತ್ತಿದ್ದೇವೆ. ಎಂದು ಜಿಲ್ಲಾ ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಜೀನಕೇರಿ ಅವರು ಹೇಳಿದರು.
ಆದರೆ ಅಭಿವೃದ್ಧಿ, ಶಿಕ್ಷಣ, ಉದ್ಯೋಗದಲ್ಲಿ ಹೀನಾಯ ಸ್ಥಿತಿಯಲ್ಲಿ ಇದ್ದುಕೊಂಡು ಈ ಹೋರಾಟವನ್ನು ಪ್ರತಿಯೊಬ್ಬರು ಹೆಗಲಿಗೆ ಹೆಗಲು ಕೊಟ್ಟು ಸಹಾನುಭೂತಿಯೊಂದಿಗೆ ಇಲ್ಲಿಯವರೆಗೆ ಬಂದಿದ್ದೇವೆ. ತಾವು ಎಲ್ಲಾ ತಾಲೂಕಿನ ಸಮಾಜದ ಮುಖಂಡರು, ಯುವಕರು, ಬುದ್ದಿಜೀವಿಗಳು, ಪ್ರಗತಿಪರ ಚಿಂತಕರು, ತಾವೆಲ್ಲರೂ ಅ. ೧೬ ರಂದು ಒಳಮಿಸಲಾತಿಯನ್ನು ಹೋರಾಟಕ್ಕೆ ಸ್ಪಂಧಿಸಿ ಭಾಗವಹಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ನಮ್ಮ ಹೋರಾಟಕ್ಕೆ ತಮ್ಮಲ್ಲರಿಗೂ ಹಾಗೂ ಸಹಕಾರ ನೀಡಿದ ಪೋಲಿಸ್ ಇಲಾಖೆ ಅಧಿಕಾರಿಗಳಿಗೂ, ಎಲ್ಲಾ ದೃಷ್ಯ ಮತ್ತು ಪತ್ರಿಕಾ ಮಾದ್ಯಮ ಸಿಬ್ಬಂದಿಯವರಿಗೂ ಹಾಗೂ ಇನ್ನಿತರರಿಗೆ ವರದಿಗಾರರಿಗೂ, ತಮ್ಮೆಲ್ಲರಿಗೂ ಜಿಲ್ಲಾ ಮಾದಿಗ ಸಮಾಜದ ಮುಖಂಡರ ವತಿಯಿಂದ ಜೀನಕೇರಿ ಅವರು ಪ್ರಕಟಣೆ ಮೂಲಕ ಕೃತಜ್ಞೆಗಳು ಸಲ್ಲಿಸಿದ್ದಾರೆ.