ವಾಡಿ ಬಿಜೆಪಿ ಕಛೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ

ವಾಡಿ ಬಿಜೆಪಿ ಕಛೇರಿಯಲ್ಲಿ ಅಂಬಿಗರ  ಚೌಡಯ್ಯ ಜಯಂತಿ

ವಾಡಿ ಬಿಜೆಪಿ ಕಛೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭ್ರಾತೃತ್ವ ಭಾರತದ ಹಿರಿಮೆ ಮೆರಿಯಬೇಕಾಗಿದೆ ಎಂದರು.

12ನೇ ಶತಮಾನದ ಅಂಬಿಗರ ಚೌಡಯ್ಯನವರು ತಮ್ಮ ಕುಲ ಕಸುಬನ್ನೇ ಮಾಡುತ್ತಾ ಸಮಾಜ ಸುಧಾರಕರಾದರು. ಸಮಾಜದ ಕೆಟ್ಟ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಾಮಾಜಿ ಹರಿಕಾರರಾಗಿ ಕ್ರಾಂತಿಯನ್ನುಂಟು ಮಾಡಿದರು. ಅವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಆದರ್ಶ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಅವರು ಮಾತನಾಡಿ ಅಂಬಿಗರ ಚೌಡಯ್ಯ ಅವರು ಯಾವುದೇ ಜಾತಿಪರ ನಿಲ್ಲಲಿಲ್ಲ. ವಚನಗಳ ಮೂಲಕ ಜಾತಿ ವ್ಯವಸ್ಥೆ, ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಲು ಯತ್ನಿಸಿದ್ದರು. ಬಡವರ ಪರವಾದ ವಚನಗಳನ್ನು ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ತನ್ನ ಕಾಯಕದ ಮಹಾನ್‌ ಮಾನವತವಾದಿಯಾಗಿ ಮೆರೆದಿದ್ದರು.ಅಂತಹ ಮಹಾನ್ ಶರಣರ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿ ಕೊಂಡಲ್ಲಿ ಸಮಾಜದ ಎಲ್ಲಾ ಸಮುದಾಯದವರ ನೆಮ್ಮದಿಯ ಜೀವನ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ,ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ,ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಮುಖಂಡರಾದ ಶರಣಗೌಡ ಚಾಮನೂರ,ಗಿರಿಮಲ್ಲಪ್ಪ ಕಟ್ಟಿಮನಿ,ಭೀಮರಾವ ದೊರೆ,ಅರ್ಜುನ ಕಾಳೆಕರ,ಹರಿ ಗಲಾಂಡೆ,ಬಸವರಾಜ ಕೊಲಿ,

ಕಿಶನ ಜಾಧವ,ಅಂಬದಾಸ ಜಾಧವ,ಪ್ರಕಾಶ ಪುಜಾರಿ,ರಿಚರ್ಡ್‌ ಮಾರೆಡ್ಡಿ,ಯಂಕಮ್ಮ ಗೌಡಗಾಂವ,ಉಮಾಭಾಯಿ ಗೌಳಿ,ವಿಶಾಲ ನಿಂಬರ್ಗಾ,

ರಾಜು ಕೊಲಿ,ವಿಶ್ವರಾಧ್ಯ ತಳವಾರ,ವಿಶ್ವನಾಥ ಬಳವಡಗಿ,ವಿಕ್ರಮ ಜಾಧವ,ರಾಜು ಗುತ್ತೇದಾರ,ನಿಂಗಪ್ಪ ತಳವಾರ ಸೇರಿದಂತೆ ಇತರರು ಇದ್ದರು.