ಭಾರತದ ಸಹೋದರಿಯ ಸಿಂಧೂರಿನ ಜೊತೆ ಆಟ ಆಡಿದ್ದ ಪಾಕಿಗಳಿಗೆ ಆಪರೇಷನ್ ಸಿಂಧೂರದಿಂದಲೆ ತಕ್ಕ ಉತ್ತರ ಶಶೀಲ್ ಜಿ ನಮೋಶಿ

ಭಾರತದ ಸಹೋದರಿಯ ಸಿಂಧೂರಿನ ಜೊತೆ ಆಟ ಆಡಿದ್ದ  ಪಾಕಿಗಳಿಗೆ ಆಪರೇಷನ್ ಸಿಂಧೂರದಿಂದಲೆ ತಕ್ಕ ಉತ್ತರ ಶಶೀಲ್ ಜಿ ನಮೋಶಿ

ಭಾರತದ ಸಹೋದರಿಯ ಸಿಂಧೂರಿನ ಜೊತೆ ಆಟ ಆಡಿದ್ದ ಪಾಕಿಗಳಿಗೆ ಆಪರೇಷನ್ ಸಿಂಧೂರದಿಂದಲೆ ತಕ್ಕ ಉತ್ತರ ಶಶೀಲ್ ಜಿ ನಮೋಶಿ 

ಕಲಬುರ್ಗಿ:ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ, ಭೂಲೋಕದ ಸ್ವರ್ಗ ಕಾಶ್ಮೀರದ ಪೆಹಲ್ಗಾಮನಲ್ಲಿ ಭಾರತದ 26 ಸಹೋದರಿಯರ ಸಿಂಧೂರಿನ ಜೋತೆ ಆಟ ಆಡಿ

 ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿರಿ ಎಂದು ಹಾಸ್ಯಭರಿತವಾಗಿ ಹೇಳಿದ್ದ ಪಾಕಿಸ್ತಾನಿ ಕೃಪಾಪೋಷಿತ ಭಯೋತ್ಪಾದಕರಿಗೆ ಭಾರತ ಸರ್ಕಾರ‌ ಸಹೋದರಿಯರ ಸಿಂಧನೂರಿನ ನೆನಪಿಗಾಗಿಯೆ ಆಪರೇಷನ್ ಸಿಂಧೂರ ಎಂಬ ನಾಮಕರಣದ ಕಾರ್ಯಾಚರಣೆಯ ಮುಖಾಂತರ ತಕ್ಕ ಉತ್ತರ ನೀಡುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯ ಕಲಬುರಗಿ ಹಾಗೂ ಭಾರತ ಸೇವಾದಳ ತಾಲೂಕು ಸಮಿತಿ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸೇವಾದಳದ ಸಂಸ್ಥಾಪಕರಾದ ಪದ್ಮಭೂಷಣ ಡಾ ನಾ ಸು ಹರ್ಡಿಕರ್ ಅವರ 136 ನೇಯ ಜನ್ಮದಿನಾಚರಣೆ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಭಯೋತ್ಪಾದಕರಿಗೆ ತಕ್ಕ ಪಾಠ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಈಗಾಗಲೇ ದೇಶದ ಜನತೆ, ರಾಜಕೀಯ ಪಕ್ಷಗಳು ಪಕ್ಷಬೇಧ ಬೆಂಬಲಿಸುತ್ತಿವೆ ಇಂತಹ ದೇಶಭಕ್ತಿ ನಿರಂತರವಾಗಿರಬೇಕು.ರಾಷ್ಟ್ರಪ್ರೇಮ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕೆಲಸವನ್ನು ಭಾರತ ಸೇವಾ ದಳ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.

ಸೇವೆಗಾಗಿ ಬಾಳು ಎಂಬ ಘೋಷವಾಕ್ಯದೊಂದಿಗೆ ಭಾರತ ಸೇವಾದಳ ಸರ್ವಧರ್ಮ ಸಮನ್ವಯತೆ, ರಾಷ್ಟ್ರಾಭಿಮಾನದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಅಮೇರಿಕಾದಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ನಾ ಸು ಹರ್ಡಿಕರ್ ಅವರು 1923 ಡಿಸೆಂಬರ್ 28 ರೈ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಪಂಜಾಬಿನ ವೀರ ಕೇಸರಿ ಲಾಲಾ ಲಜಪತ್ ರಾಯರ ಪ್ರೇರಣೆಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ವಿದೇಶದಲ್ಲಿದ್ದ ವೈದ್ಯ ವೃತ್ತಿ ತ್ಯಜಿಸಿ ದೇಶ ಸೇವೆಯ ಸಂಕಲ್ಪದೊಂದಿಗೆ ಹಿಂದೂಸ್ತಾನಿ ಸೇವಾ ದಳ ಸ್ಥಾಪನೆ ಮಾಡಿ ದೇಶದ ಜನತೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು.ಮುಂದೆ 1950 ರಲ್ಲಿ ಈ ಸೇವಾದಳ ಮರುನಾಮಕರಣಗೊಂಡು ಭಾರತ ಸೇವಾದಳವಾಯಿತು ಈಗ ಕರ್ನಾಟಕ ಸರ್ಕಾರದ ಸಹಕಾರಿ ಇಲಾಖೆಯ ಸಂಘ ಸಂಸ್ಥೆಗಳ ನಿಯಮದೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು 

ಭಾರತ ಸೇವಾದಳದ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಡಿಗೇರ, ಜಿಲ್ಲಾ ಸಮಿತಿ ಸದಸ್ಯರಾದ ಮಂಜುನಾಥ ನಾಲಾವಾರಕರ, ರಾಜು ದೊಡಮನಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಯೋಗ ತರಬೇತಿದಾರರಾದ ಡಾ ಚಂದ್ರಕಾಂತ ಬಿರಾದಾರ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ ಅನಿಲಕುಮಾರ ಪಟ್ಟಣ, ಸಂಪನ್ಮೂಲ ಶಿಕ್ಷಕರಾದ ಲಕ್ಷ್ಮಿ ಪುತ್ರ ಪೂಜಾರಿ, ಎಂ ಎಸ್ ಇರಾಣಿ ಕಾಲೇಜಿನ ಪ್ರಾಚಾರ್ಯರಾದ ಮಲ್ಲಪ್ಪ ಭೋತಗಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಸಿಬ್ಬಂದಿ ಉಪಸ್ಥಿತರಿದ್ದರು. ಸೇವಾದಳದ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.