ಒಂದು ದಿನದ ರಾಷ್ಟ್ರೀಯ ಮಟ್ಟದ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ

ಒಂದು ದಿನದ ರಾಷ್ಟ್ರೀಯ ಮಟ್ಟದ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ

ಒಂದು ದಿನದ ರಾಷ್ಟ್ರೀಯ ಮಟ್ಟದ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ

ಕಲಬುರಗಿ ನಗರದ ಕನ್ನಡ ಭವನದಲ್ಲಿ ಜಿಲ್ಲಾಧ್ಯಕ್ಷ ಆನಂದ ವಾರಿಕ ಅವರ ನೇತೃತ್ವದಲ್ಲಿ ಒಂದು ದಿನದ ರಾಷ್ಟ್ರೀಯ ಮಟ್ಟದ ಕೇಶವಿನ್ಯಾಸ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ನಗರ ಗ್ರಾಮೀಣ ಪ್ರದೇಶಗಳ ಕುಲ ವೃತ್ತಿಯನ್ನೆ ಅವಲಂಬಿತರಾದ ಸವಿತಾ ಸಮಾಜದ ಕೇಶವಿನ್ಯಾಸಕರಿಗೆ ಅತ್ಯಾಧುನಿಕ ಸ್ಪರ್ಷ ಕಲ್ಪಿಸಲು ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಭರತ,ನಿಹಾರ ಮಂಜುನಾಥ ಬಾಣಸವಾಡಿ ಗಗನ ಮಂಜುನಾಥ ಅವರಿಂದ ಮೆನ್ ಹೇರ್ ಕಟ್ ಡ್ಯಾಂಡ್ರಫ ಟ್ರೀಟ್ಮೆಂಟ್ ಹೇರ್ ಸ್ಟೇಟನಿಂಗ್ ಅತ್ಯಾಧುನಿಕ ತಂತ್ರಜ್ಞಾನಗಳ ಉಪಕರಣಗಳಿಂದ ಸುಮಾರು ನೂರಕ್ಕೂ ಹೆಚ್ಚಿನ ತರಬೇತಿದಾರರಿಗೆ ತರಬೇತಿ ನೀಡಲಾಯಿತು. ಮಹಿಳಾ ತರಬೇತುದಾರರಾದ ಶ್ರೀಮತಿ ಸಂಧ್ಯಾ ಸುರೇಶ ಅವರಿಂದ ಹೈಡ್ರಾ ಫೇಸಿಯಲ್ ಮೇಕಪ್ ತರಬೇತಿ ಮಂಜುನಾಥ ಹುಬ್ಬಳ್ಳಿ ಅವರಿಂದ ಹೇರ್ ಪ್ಯಾಚ್ ತರಬೇತಿ ನೀಡಲಾಯಿತು. ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಸುಭಾಷ್ ಬಾದಾಮಿ, ಪ್ರತಾಪ ಮಂಡ್ಯ, ವಿಶ್ವರಾಜ ಶಹಾಪುರ, ನರಸಿಂಹ ಮೋತಕಪಲ್ಲಿ, ಮಹೇಶ ಪಾಣೇಗಾಂವ ವಿದ್ಯಾಸಾಗರ ಹಾಬಾಳ ಸೂರ್ಯಕಾಂತ ಬೆಣ್ಣೂರ ನರಸಿಂಹಲು ಅಡಕಿ ಕಿರಣ್ ಕುಮಾರ್ ಚಿಕಲಿಕರ ಬಸವರಾಜ ಕನವಳ್ಳಿ ಅಶೋಕ ಮಾನೆ, ಮೌನೇಶ್ ಅನವಾರ ಸೇರಿದಂತೆ ಕಲಬುರಗಿ ನಗರ ತಾಲೂಕು, ಬಾಗಲಕೋಟೆ, ದೇವದುರ್ಗ, ಯಾದಗಿರಿ ಸುರಪುರ ಶಹಾಪುರ ದ ಅನೇಕ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.