ಕರ್ನಾಟಕ ರಕ್ಷಣಾ ವೇದಿಕೆ ಆಳಂದ್ ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ
ಕರ್ನಾಟಕ ರಕ್ಷಣಾ ವೇದಿಕೆ ಆಳಂದ್ ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ
ಕಲ್ಯಾಣ ಕಹಳೆ ವಾರ್ತೆ ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಆಳಂದ್ ಘಟಕ ವತಿಯಿಂದ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ಸಚಿನ ಜಿ ಲೋಕಾಣಿ ಅವರು 70ನೆಯ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮ ತಹಶೀಲ್ದಾರ್ ಅಣ್ಣಾರಾಯ ಪಾಟೀಲ್ ಹಾಗೂ ತಾಲೂಕ್ ಪಂಚಾಯಿತಿ ಇ.ಓ ಮಾನಪ್ಪ ಕಟ್ಟಿಮನಿ ತಾಯಿ ಭುವನೇಶ್ವರ ಫೋಟೋ ಪೂಜಾ ನೆರವೇರಿಸಿದರು.
ಅಧ್ಯಕ್ಷರು ಸಚಿನ ಜಿ ಲೋಕಾಣಿ ಮಾತನಾಡಿ ನಮ್ಮ ಭಾಷಾ ಜಲ ನೆಲಕ್ಕಾಗಿ ಹಗಲು ಶ್ರಮಿಸಲು ನಾನು ಸಿದ್ದನಾಗಿದ್ದೇನೆ ಎಂದರು. ಇದರ ತಂಟೆಗೆ ಯಾರಾದರೂ ಬಂದರೆ ನಮ್ಮ ಕನ್ನಡ ಸೇನೆ ಸುಮ್ಮನಿರುವುದಿಲ್ಲ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಬಿಲಗುಂದಿ, ತಾಲೂಕು ಯುವ ಘಟಕ ಅರಣಕುಮಾರ್ ಸಂಗೋಳಗಿ, ಪ್ರಭುಲಿಂಗ ಪೊಲೀಸ್ ಪಾಟೀಲ್, ಕಂತು ರಾಥೋಡ್, ಸದರೋದಿನ್ ಅನ್ಸಾರಿ, ಬಾಬುರಾವ್ ಸುಳ್ಳಾದ, ಶ್ರೀಶೈಲ್ ಬಿರಾದರ್, ಮಲ್ಲು ಬಿರಾದರ್, ಆರೀಫ್ ಆನಂದರಾವ್, ಎಲ್ ಶೆಟ್ಟಿ, ಲೈಕ್ ಪಟೇಲ್, ಗುರು ವಣದೆ, ವಂದನಾ ಮೇಡಂ, ಶಾಂತು ಸುಲ್ತಾನಪುರ್, ಶೇಖರ್ ಬಿರಾದಾರ್, ಮಹದೇವ್ ಬಿರಾದಾರ್, ಚನ್ನು ಬಿರಾದಾರ್, ವಿಲಾಸ್ ರಾಥೋಡ್, ಶರಣಬಸಪ್ಪ ಬಿರಾದಾರ್, ಅಭಿಷೇಕ್ ಕೋಲ್ಡಂಗರಗಿ, ಆದಿತ್ಯ ಪಟ್ಟಣಕರ್, ಸೈಯದ್ ಸಫಿ, ಅವಿನಾಶ್ ನವ್ಲಿ ಸೇರಿದಂತೆ ತಾಲೂಕು ಎಲ್ಲ ಪದಾಧಿಕಾರಿಗಳು, ಕನ್ನಡದ ಸ್ವಾಭಿಮಾನ ಬಳಗ ಅಭಿಮಾನದವರು ಉಪಸಿತರಿದ್ದರು.
