ವಾಡಿ ಬಿಜೆಪಿ ಕಛೇರಿಯಲ್ಲಿ ನೇತಾಜಿಗೆ ನಮನ
ವಾಡಿ ಬಿಜೆಪಿ ಕಛೇರಿಯಲ್ಲಿ ನೇತಾಜಿಗೆ ನಮನ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜಯಂತಿ ಪ್ರಯುಕ್ತ,ಮುಖಂಡರು ನೇತಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಪರಾಕ್ರಮ ದಿನದ ಘೋಷ ವಾಕ್ಯ ಮೊಳಗಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಬೋಸ್ ಅವರ ಕ್ರಾಂತಿಕಾರಿ ವಿಚಾರಗಳು ಕೋಟ್ಯಂತರ ಯುವ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿ ಯಾಗಿದ್ದವು ಎಂದರು.
"ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ"ಇದು ನೇತಾಜಿ ಅವರ ಪ್ರಮುಖ ಸಂದೇಶವಾಗಿತ್ತು.
ಇದು ಅನೇಕ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ನೆರವಾಯಿತು.
ದೇಶಕ್ಕೆ ಬಹುಬೇಗ ಸ್ವಾತಂತ್ರ್ಯ ತರಲು ಬೋಸ್ ಕ್ರಾಂತಿಯ ಹಾದಿ ಹಿಡಿದಿದ್ದರು. ಆದರೆ ಕೆಲ ಹೋರಾಟಗಾರರಿಗೆ ಇಷ್ಟವಾಗುತ್ತಿರಲಿಲ್ಲ. ಸುಭಾಷ್ ಚಂದ್ರ ಬೋಸ್ ಅವರ ಚಿಂತನೆಗಳನ್ನು ಗಾಂಧೀಜಿ ಕೂಡ ವಿರೋಧಿಸಿದ್ದರು. ಆದರೂ ಬೋಸ್ ತಮ್ಮ ದಾರಿಯನ್ನು ಬದಲಿಸಲಿಲ್ಲ.
ಬ್ರಿಟಿಷ್ ರಿಗೆ ಸಿಂಹಸ್ವಪ್ನ ಸದಾ ಕಾಡುತ್ತಿದ್ದ ನೇತಾಜಿ ನಮಗೆ ಸ್ವಾತಂತ್ರ್ಯ ದೊರಕುವ ಎರಡು ವರ್ಷ ಮೊದಲು,
1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದರು ಎಂದು ವರದಿಯಾಯಿತು.
ಅವರ ಸಾವಿನ ಬಗ್ಗೆ ಈಗಲೂ ಸಾಕಷ್ಟು ಅನುಮಾನಗಳಿದೆ. ಅವರು ಅದರಲ್ಲಿ ಸಾಯಲಿಲ್ಲ, ನಂತರ ಹಲವು ವರ್ಷಗಳ ಕಾಲ ಬದುಕಿದ್ದರೂ ಎಂದು ಹೇಳಲಾಗಿದೆ. ಹೋಮಿ ಬಾಬಾ ಹೆಸರಿನಲ್ಲಿ ಅವರು ಬದುಕಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದು ಅಧಿಕೃತ ಎಂದು ಎಲ್ಲೂ ದಾಖಲಾಗಿಲ್ಲ.
ಇಂದಿಗೂ ಕೋಟ್ಯಂತರ ಭಾರತೀಯರಿಗೆ ಬೋಸ್ ಅವರ ಜೀವನ,ಹೋರಾಟ ಆದರ್ಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ,ಪ್ರೇಮ ರಾಠೋಡ,ಕುಮಾರ ಜಾಧವ,ಸತೀಶ ಸಾವಳಗಿ,ವಿಶ್ವನಾಥ ಬಳವಡಗಿ,ಅಣ್ಣರಾವ ಪಾಟೀಲ,ಸಿದ್ದುಗೌಡ ಹಲಕರ್ಟಿ,ಸೇವಲಾಲ ಚವ್ಹಾಣ,ಆಕಾಶ ಜಾಧವ,ಮಹೇಶ ಕರದಳ್ಳಿ,ಸಂಜಯ ಪವಾರ,ತೇಜು ಪವಾರ,ಬಸವರಾಜ ಭದ್ರೆ ಸೇರಿದಂತೆ ಇತರರು ಇದ್ದರು.
