ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಜ್, ಚಿಂಚೋಳಿ ತಾಲೂಕ ವೀಶೈವ ಲಿಂಗಾಯತ ಸಮಾಜ ಖಂಡನೆ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಜ್, ಚಿಂಚೋಳಿ ತಾಲೂಕ ವೀಶೈವ ಲಿಂಗಾಯತ ಸಮಾಜ ಖಂಡನೆ  ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಜ್,ಚಿಂಚೋಳಿ ತಾಲೂಕ ವೀಶೈವ ಲಿಂಗಾಯತ ಸಮಾಜ ಖಂಡನೆ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಚಿಂಚೋಳಿ : ಬೆಳಗಾವಿ ಸುವರ್ಣ ಸೌಧದ ಎದುರುಗಡೆ ಪ್ರತಿಭಟನೆ ನಡೆಸುತ್ತಿದ ಪಂಚಮಸಾಲಿ ಮಿಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ, ಚಿಂಚೋಳಿ ತಾಲೂಕ ವೀರಶೈವ ಸಮಾಜ ಪ್ರತಿಭಟನೆ ನಡೆಸಿತು. 

ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಸಲು ಕೈಗೊಂಡ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಶಾಮತಿಯುತ ಹೋರಾಟ ಮಾಡುತ್ತಿದ್ದರು, ಪೊಲೀಸರು ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಮನಸೋ ಇಚ್ಛೆ ಲಾಠಿ ಚಾರ್ಜ್ ಮಾಡಲಾಗಿದನ್ನು ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ ಸಮಾಜ ಖಂಡುಸುತ್ತದೆ. ಈ ಘಟನೆಯ ಬಗ್ಗೆ ನಿಖರ ಮಾಹಿತಿಯನ್ನು ಪಡೆದುಕೊಂಡು ಸರಕಾರ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಅವರು ಗ್ರೇಡ್-1 ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಬಸಯ್ಯಾಸ್ವಾಮಿ, ರವಿ ಐನೋಳಿ, ಉಮೇಶ ಪಾಟೀಲ, ಸಂಪತ್ ಕುಮಾರ ಮುಸ್ತರಿ, ಶರಣು ಪಾಟೀಲ ದೇಗಲ್ಮಡಿ, ರಾಜು ಪೊಲೀಸ್ ಪಾಟೀಲ ಸೇರಿ ಪ್ರತಿಭಟನೆಯಲ್ಲಿ ಹಲವರು ಉಪಸ್ಥಿತರಿದರು.