ವಿಜೃಂಭಣೆಯಿಂದ ನಡೆದ 2025ರ ಸಂತ ಜೋಸೆಫರ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ವಿಜೃಂಭಣೆಯಿಂದ ನಡೆದ 2025ರ ಸಂತ ಜೋಸೆಫರ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ
ನಾಗರಾಜ್ ದಂಡಾವತಿ ವರದಿ
ಕಲ್ಬುರ್ಗಿ: ಪ್ರಾಥಮಿಕ ಮತ್ತು ಪೌಢ ಕ್ರೀಡಾಕೂಟ 2025-26 ಬುಧವಾರ ಸಂತ ಜೋಸೆಫರ ಶಾಲೆಯಲ್ಲಿ ನಡೆಯಿತು.
ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಬಸವರಾಜ್ ರಟ್ಗಲ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದರು ಕ್ರೀಡೆ ಎಂಬುದು ಸೋಲು ಗೆಲುವಿನ ವಿಷಯವಲ್ಲ, ಶಿಸ್ತಿನ ಸಹಕಾರದ ದೃಢ ನಿಶ್ಚಲವಾದ ಪಾಠವನ್ನು ಕಲಿಸುವ ಪಾಠ ಎಂದು ಮಾತನಾಡಿ ಮಕ್ಕಳಿಗೆ ಪರರ ಯಶಸ್ಸಿನಲ್ಲಿ ಸಂತೋಷಪಡುವುದನ್ನು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವುದು ಎಂದು ಹೇಳಿದರು.
ಸಿಸ್ಟರ್ ಶೃತಿ ಶಾಲೆಯ ವ್ಯವಸ್ಥಾಪಕರು. ಸಿಸ್ಟರ್ ಶರಣಲತಾ ( ಮುಖ್ಯೋಪಾಧ್ಯಾಯರು ಸಂತ ಜೋಸೆಫರ ಕಾನ್ವೆಂಟ್ ಕನ್ಯಾ ಪ್ರೌಢಶಾಲೆ )ಕಲಬುರಗಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹೇಳಿದರು, ವಿದ್ಯಾರ್ಥಿನಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು ಇದ್ದರು
