ಇಂಚರ ಜ್ಯುವೆಲ್ಲರಿ ಶೋರೂಮ್ ಶುಭಾರಂಭ ಉದ್ಯಮಿ ಸತೀಶ್ ವಿ ಗುತ್ತೇದಾರ್ ಜ್ಯೋತಿ ಬೆಳಗಿಸಿ ಉದ್ಘಾಟನೆ

ಇಂಚರ ಜ್ಯುವೆಲ್ಲರಿ ಶೋರೂಮ್ ಶುಭಾರಂಭ  ಉದ್ಯಮಿ ಸತೀಶ್ ವಿ ಗುತ್ತೇದಾರ್ ಜ್ಯೋತಿ ಬೆಳಗಿಸಿ ಉದ್ಘಾಟನೆ

ಇಂಚರ ಜ್ಯುವೆಲ್ಲರಿ ಶೋರೂಮ್ ಶುಭಾರಂಭ

ಉದ್ಯಮಿ ಸತೀಶ್ ವಿ ಗುತ್ತೇದಾರ್ ಜ್ಯೋತಿ ಬೆಳಗಿಸಿ ಉದ್ಘಾಟನೆ

ಕಲಬುರಗಿ: ನಗರದ ಖ್ಯಾತ ಸ್ವರ್ಣ ಉದ್ಯಮಿ ಚಂದ್ರಕಾಂತ್ ಶಿವಯ್ಯ ಗುತ್ತೇದಾರ್ ಅವರು ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಿಸಿದ ಇಂಚರ ಜ್ಯುವೆಲ್ಲರ್ಸ್ ಶೋರೂಮ್ ನ್ನು ಖ್ಯಾತ ಉದ್ಯಮಿಗಳಾದ ಸತೀಶ್ ವಿ ಗುತ್ತೇದಾರ್ ಜ್ಯೋತಿ ಬೆಳಗಿಸಿ ಶುಭಾರಂಭಗೊಳಿಸಿದರು

    ಕಲಬುರಗಿಯ ಗೋಲ್ಡ್ ಹಬ್ ನಲ್ಲಿ ಆಗಸ್ಟ್ 11 ರಂದು ನೂತನ ಚಿನ್ನದ ಮಳಿಗೆಗೆ ಚಾಲನೆ ನೀಡಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಮಹತ್ವದ ಸ್ಥಾನವಿದ್ದು ಆಭರಣ ತೊಡುಗೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಅತ್ಯಾಧುನಿಕ ಮಾದರಿಯ ಚಿನ್ನಾಭರಣಗಳಿಗೆ ವಿಶೇಷ ಬೇಡಿಕೆ ಇರುವುದರಿಂದ ಶೋ ರೂಮ್ ಚಿನ್ನದ ಗ್ರಾಹಕರನ್ನು ಆಕರ್ಷಿಸಲಿದೆ. ವಿನೂತನ ವಿನ್ಯಾಸಗಳ ಆಭರಣಗಳನ್ನು ಹೊಂದಿದ ಇಂಚರ ಷೋರೂಮ್ ಗ್ರಾಹಕರ ಬೇಡಿಕೆಗಳನ್ನು ಪೂರೈಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಕಲಬುರಗಿ ರಾಜ್ಯದ ಎರಡನೇ ಹಂತದ ಮಹಾನಗರವಾಗಿದ್ದು ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಿದಂತೆ ಚಿನ್ನಾಭರಣ ಮಳಿಗೆಗಳು ನೂತನವಾಗಿ ತೆರೆಯುತ್ತಿರುವುದರಿಂದ ಈ ಭಾಗದಲ್ಲೂ ಕೂಡ ಸೌಂದರ್ಯ ಪ್ರಜ್ಞೆ ಹೆಚ್ಚಾಗಿದೆ. ಚಿನ್ನಾಭರಣದ ಬೆಲೆ ದುಬಾರಿ ಯಾಗುತ್ತಿದ್ದರೂ ಬೇಡಿಕೆ ಕುಗ್ಗದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು. 

ಸಂಸ್ಥೆಯ ಮಾಲಕರಾದ ಚಂದ್ರಕಾಂತ ಶಿವಯ್ಯ ಗುತ್ತೇದಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಎನ್ ವಿಶ್ವನಾಥ್, ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ, ಕುನಾಲ್ ಮೈಲಾಪುರ್, ಡಾ. ರವೀಂದ್ರ ಮಲ್ಲಿಕಾರ್ಜುನ ಮೈಲಾಪುರ್, ಉದ್ಯಮಿಗಳಾದ ವೆಂಕಟೇಶ ಕಡೇಚೂರ್, ಅಶೋಕ್ ಗುತ್ತೇದಾರ್ ಬಡದಾಳ, ಸಂತೋಷ್ ವಿ. ಗುತ್ತೇದಾರ್, ಶರಣಯ್ಯ ಗುತ್ತೇದಾರ್ ಕೊಂಚೂರ್, ರಾಜೇಶ್ ದತ್ತು ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರ್ , ಕುಪೇಂದ್ರ ಗುತ್ತೇದಾರ್ ತಡಕಲ್, ಶ್ರೀಮತಿ ಇಂದಿರಾ ಚಂದ್ರಕಾಂತ್ ಗುತ್ತೇದಾರ್, ಶೋಭಾ ಅಶೋಕ್ ಗುತ್ತೇದಾರ್, ಸವಿತಾ ಸತೀಶ್ ಗುತ್ತೇದಾರ್, ಶ್ರದ್ಧಾ, ಸಾಯಿ ಮಹಾದೇವ ಗುತ್ತೇದಾರ್, ಜಮುನಾ ಅಶೋಕ್ ಗುತ್ತೇದಾರ್, ಮಂಜುಳ ಅಶೋಕ್ ಗುತ್ತೇದಾರ್, ಸೋಮಶೇಖರ ಶಿಲ್ಪಿ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.f