ತೋರ್ಣಾ ಪಶು ಅಸ್ಪತ್ರೆ ಪರಿಸೀಲಿಸಿದ ಶಾಸಕ ಪ್ರಭು ಚವ್ಹಾಣ

 ತೋರ್ಣಾ ಪಶು ಅಸ್ಪತ್ರೆ ಪರಿಸೀಲಿಸಿದ ಶಾಸಕ ಪ್ರಭು ಚವ್ಹಾಣ

 ಪಶು ಆಸ್ಪತ್ರೆ ರೈತ ಸ್ನೇಹಿಯಾಗಿ ಕೆಲಸ ಮಾಡಲಿ

ಗ್ರಾಮ ಸಂಚಾರದ ನಿಮಿತ್ತ ಕ್ಷೇತ್ರದ ಪ್ರವಾಸದಲ್ಲಿರುವ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜ.16ರಂದು ಕಮಲನಗರ ತಾಲ್ಲೂಕಿನ ತೋರ್ಣಾ ಸರ್ಕಾರಿ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯೆಲ್ಲ ಸುತ್ತಾಡಿ, ಕಚೇರಿ, ಔಷದ ಸಂಗ್ರಹ ಸ್ಥಳವನ್ನು ವೀಕ್ಷಿಸಿದರು. ಕೆಲಸ ಮಾಡುತ್ತಿರುವ ಸಿಬ್ಬಂದಿ ಎಷ್ಟು ?, ಡಿ ಗ್ರೂಪ್ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದಾರೆಯೇ ?, ಎಷ್ಟು ಔಷಧಿ ಬಂದಿದೆ ?, ಪ್ರತಿದಿನ ಎಷ್ಟು ಜನವಾರುಗಳಿಗೆ ಚಿಕಿತ್ಸೆ ಕೊಟ್ಟಿದ್ದೀರಿ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ವಿವರಣೆ ಪಡೆದರು

ವೈದ್ಯರು ಪ್ರತಿದಿನ ಸಮಯಕ್ಕೆ ಆಸ್ಪತ್ರೆಗೆ ಬರಬೇಕು, ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಆಸ್ಪತ್ರೆಗೆ ಜಾನುವಾರುಗಳನ್ನು ತರುವ ರೈತರೊಂದಿಗೆ ಸರಿಯಾಗಿ ವ್ಯವಹರಿಸಬೇಕು. ಪಶು ಆಸ್ಪತ್ರೆ ರೈತ ಸ್ನೇಹಿಯಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಪಶುವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಾನುವಾರುಗಳ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕಾಲಕಾಲಕ್ಕೆ ಲಸಿಕಾ ಕಾರ್ಯಕ್ರಮಗಳು ನಡೆಯುತ್ತವೆ. ಈ ಕಾರ್ಯಕ್ರಮಗಳು ಆಸ್ಪತ್ರೆ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳಲ್ಲಿ ಅಚ್ಚುಕಟ್ಟಾಗಿ ಮಾಡಬೇಕು. ರೈತರಿಂದ ಯಾವುದೇ ರೀತಿಯ ದೂರುಗಳೂ ಬಾರದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು.

ಆಸ್ಪತ್ರೆ ಆವರಣದಲ್ಲಿ ಅಶುಚಿತ್ವವನ್ನು ಕಂಡು ತೀವ್ರ ಕೋಪಗೊಂಡ ಶಾಸಕರು ಆಸ್ಪತ್ರೆಯ ಆವರಣವನ್ನು ಏಕೆ ಶುಚಿಯಾಗಿ ಇಟ್ಟುಕೊಂಡಿಲ್ಲವೆಂದು ಪ್ರಶ್ನಿಸಿದರು. ಅಸ್ಪತ್ರೆಯ ಸಿಬ್ಬಂದಿ ಸಮಜಾಯಿಸಿ ನೀಡಲು ಬಂದಾಗ ನನಗೆ ಯಾವುದೇ ರೀತಿಯ ಸಮಜಾಯಿಸಿ ಭೇಡ. ಆಸ್ಪತ್ರೆಯಲ್ಲಿ ಸ್ವಚ್ಛತೆ ಬೇಕು ಎಂದು ತಿಳಿಸಿದರು.

 ಖಾಯಂ ವೈದ್ಯರನ್ನು ನಿಯೋಜಿಸಿ ಬಳಿಕ ತೋರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೇ ಸಾರ್ವಜನಿಕರು ಇಲ್ಲಿ ಖಾಯಂ ವೈದ್ಯರು ಇಲ್ಲದಿರುವುದರಿಂದ ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆ ವೈದ್ಯರೊಬ್ಬರನ್ನು ನಿಯೋಜಿಸಲಾಗಿದೆ. ಆದರೆ ಅವರಿಗೆ ಎರಡು ಆಸ್ಪತ್ರೆಗಳ ಜವಾಬ್ದಾರಿ ನೀಡಿರುವುದರಿಂದ ರೋಗಿಗಳಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಊರಲ್ಲಿ ಆಸ್ಪತ್ರೆಯಿದ್ದರೂ ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಖಾಯಂ ವೈದ್ಯರನ್ನು ಒದಗಿಸಬೇಕೆಂದು ಪಟ್ಟು ಹಿಡಿದರು. ಕೂಡಲೇ ವೈದ್ಯರ ವ್ಯವಸ್ಥೆ ಮಾಡಿಕೊಡುವಂತೆ ಶಾಸಕರು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

 *ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:* ಮುಧೋಳ(ಬಿ), ತೋರ್ಣಾ, ಸಾವಳಿ, ಕರ‍್ಯಾಳ, ತಪಸ್ಯಾಳ, ಮುಧೋಳ(ಕೆ) ಸರ್ಕಾರಿ ಶಾಲೆಯಲ್ಲಿ ಉನ್ನತೀಕರಣ, ದುರಸ್ತಿ, ಶುದ್ದ ನೀರಿನ ಘಟಕ, ಒಹೆಚ್ಟಿ, ಸೋಲಾರ್ ಪೆನಲ್ ಅಳವಡಿಸುವ 14 ಲಕ್ಷದ ಕಾಮಗಾರಿ, ಮುಧೋಳ(ಬಿ)ನಲ್ಲಿ 22.50 ಲಕ್ಷದ ಎರಡು ಅಂಗನವಾಡಿ ಕೇಂದ್ರಗಳು, ತೋರ್ಣಾ ವಾಡಿಯಲ್ಲಿ 22.50 ಲಕ್ಷದ ಅಂಗನವಾಡಿ ಕಟ್ಟಡ, ತೋರ್ಣಾದಲ್ಲಿ 4.50 ಲಕ್ಷದ ಬಸ್ ಶೆಲ್ಟರ್, 5 ಲಕ್ಷದ ಹೈ ಮಾಸ್ಟ್ ವಿದ್ಯುತ್ ದೀಪ, ಹೊಳಸಮುದ್ರದಲ್ಲಿ 5.50 ಲಕ್ಷದ ಸಿಸಿ ಚರಂಡಿ, ಸಾವಳಿಯಲ್ಲಿ 4.50 ಲಕ್ಷದ ಸಮುದಾಯ ಭವನ, ಬಸನಾಳದಲ್ಲಿ 11 ಲಕ್ಷದ ಅಂಗನವಾಡಿ ಕೇಂದ್ರ, ತಪಸ್ಯಾಳದಲ್ಲಿ 22.50 ಲಕ್ಷದ ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ತಹಸೀಲ್ದಾರರಾದ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಜೆಸ್ಕಾಂ ಎಇಇ ರವಿ ಕಾರಬಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕೃಷಿ ಇಲಾಖೆಯ ಧೂಳಪ್ಪ, ಪಂಚಾಯತ್ ರಾಜ್ ಇಂಜಿನೀಯರಿAಗ್ ಇಲಾಖೆಯ ವೆಂಕಟರಾವ ಶಿಂಧೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ರವೀಂದ್ರ ಕಲ್ಯಾಣ, ಪಶು ಸಂಗೋಪನೆ ಇಲಾಖೆಯ ಸರೇಶ ದಿನಕರ್, ಸಿಡಿಪಿಓ ಇಮಲಪ್ಪಾ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಕಿರಣ ಪಾಟೀಲ, ಶಿವರಾಜ ಅಲ್ಮಾಜೆ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಪೆ, ಮೃತ್ಯುಂಜಯ ಬಿರಾದಾರ, ನಾಗೇಶ ಪತ್ರೆ, ರಂಗರಾವ ಜಾಧವ, ಪ್ರವೀಣ ಕಾರಬಾರಿ, ಮಲ್ಲಪ್ಪ ದಾನಾ, ಗಿರೀಶ ವಡೆಯರ್, ಪ್ರವೀಣ ಕಾರಬಾರಿ, ರಾಹುಲ ಪಾಟೀಲ, ಭರತ ಕದಮ್, ವಿಷ್ಣು ರುದ್ನೂರೆ, ವಿಷ್ಣು ಹಂಡೆ, ಮಾರುತಿ ಅಳಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.