ಪರೋಪಕಾರವೆ ಮನುಷ್ಯ ಜನ್ಮದ ಗುರಿಯಾಗಬೇಕು ; ಪೂಜ್ಯ ಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಜಿಗಳು

ಪರೋಪಕಾರವೆ ಮನುಷ್ಯ ಜನ್ಮದ ಗುರಿಯಾಗಬೇಕು ; ಪೂಜ್ಯ ಶ್ರೀ ಡಾ.  ಮಲ್ಲಣಪ್ಪ ಮಹಾಸ್ವಾಮಿಜಿಗಳು

ಪರೋಪಕಾರವೆ ಮನುಷ್ಯ ಜನ್ಮದ ಗುರಿಯಾಗಬೇಕು ; ಪೂಜ್ಯ ಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಜಿಗಳು

ಕಲಬುರಗಿ: ಶಹಾಬಾದನಲ್ಲಿರುವ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿಯಲ್ಲಿ ಶ್ರಾವಣ ಮಾಸದ ಮಂಗಲೋತ್ಸವದ ಧರ್ಮಸಭೆ ಹಾಗೂ ಶ್ರೀಮಾಣಿಕೇಶ್ವರಿ ಅಮ್ಮನವರ ಮನೆಮನದಲ್ಲಿ ಮತ್ತು ಧರ್ಮಸಂದೇಶ ಕಾರ್ಯಕ್ರಮವನ್ನು ಪೇಠಸಿರೂರ್ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳು ಉದ್ಘಾಟಿಸಿದರು.

ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಧರ್ಮರತ್ನ ಪೂಜ್ಯ ಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಜಿಗಳು ಮಾತನಾಡಿ, ಅಧ್ಯಾತ್ಮಿಕ ಚಿಂತನೆಗಳಿAದ ಮತ್ತು ಸಂತರ ವಿಚಾರ ಆಚಾರಗಳಿಂದ ಮನುಷ್ಯ ಜನ್ಮದ ಉದ್ದಾರ ಸಾಧ್ಯವಾಗುವುದು, ನಾನು ಯಾರು ಎಂದು ಅರಿವುದೆ ನಿಜವಾದ ಜ್ಞಾನ, ಪರೋಪಕಾರವೆ ಮನುಷ್ಯ ಜನ್ಮದ ಗುರಿಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಲಭೀಮೇಶ್ವ ದೇವಸ್ಥಾನ ದಂಡೋತಿಯ ಪೂಜ್ಯ ಶ್ರೀ ಜಯಶ್ರೀ ಮಾತಾ, ಹಿರೋಡೇಶ್ವರ ದೇವಸ್ಥಾನ ಮಾಲಗತ್ತಿಯ ಪೂಜ್ಯ ಶ್ರೀ ಚನ್ನಬಸವ ಸ್ವಾಮಿಜಿಗಳು, ಗವಿಸಿದ್ದೇಶ್ವರ ಮಠ ಯರಗೋಳದ ಪೂಜ್ಯ ಶ್ರೀ ಸಂಗಮನಾಥ ದೇವರು, ಹಡಪದ ಅಪ್ಪಣ್ಣ ಪೀಠ ಶಹಾಬಾದದ ಪೂಜ್ಯ ಶ್ರೀ ರಾಜಶಿವಯೊಗಿ ಸ್ವಾಮಿಜಿಗಳು, ಪೂಜ್ಯ ಶ್ರೀ ಡಾ.ಸೌರಭ ಸ್ವಾಮಿಜಿಗಳು ತೊನಸನಹಳ್ಳಿ ಎಸ್, ಪೂಜ್ಯ ಶ್ರೀ ಇಕ್ಬಾಲ್ ಸಾಹೇಬರು ಬೆಣ್ಣೂರ್, ಪೂಜ್ಯ ಶ್ರೀ ದಸ್ತಗೀರ ಮುತ್ಯಾ ತೊನಸನಹಳ್ಳಿ ಟಿ ಭಾಗವಹಿಸಿದರು, ಅಥಿತಿಗಳಾಗಿ ಸುನೀತಾ ತಳವಾರ, ಶಂಕರ ತಳವಾರ ಬೆಣ್ಣೂರ್, ಮಲ್ಲಿಕಾರ್ಜುನ ಇಟಗಿ ಮಾಲಗತ್ತಿ, ಶಿವಕುಮಾರ ಸಂಗಾವಿ, ಮಲ್ಲಿಕಾರ್ಜುಕ ಕೊಡ್ಲಿ, ಧಶರಥ ತೆಗನೂರ್, ಶಿವಯೋಗಿ ನಾಟೀಕಾರ್, ಮಲ್ಲಿಕಾರ್ಜುನ ಗೋಳೆದ, ಎಸ್., ವಿರೇಶ ಜಿ ಗೋಳೇದ, ಮಹಾಲಿಂಗ ಮದ್ದರಕಿ, ನಾಗೇಂದ್ರ ನಾಟೀಕಾರ್, ರಾಮಣ್ಣ ಮಂಗಳೂರ, ಮಲ್ಲಣ್ಣ ಬುಟನಾಳ, ವೀರಣ್ಣ ಮುದಿಗೌಡ, ಶಿವಶರಣಪ್ಪ, ಪೋ.ಪಾಟೀಲ್, ಬಸವರಾಜ ಗೋಳೇದ, ಬಸವರಾಜ ಭಮ್ಮಶೆಟ್ಟಿ, ಐಯ್ಯಣ್ಣ ಬಂದಳ್ಳಿ, ಬಸವರಾಜ ಮದ್ದರಕಿ, ಹಣಮಂತರಾಯ ಯಾಕಾಪುರ, ಬಸಣ್ಣ ಎಲೇರಿ ಇತರರು ಗಣ್ಯರು ಭಾಗವಹಿಸಿರು. ಅಶೋಕ ಎಂ ನಾಟೀಕಾರ್ ನಿರೂಪಿಸಿದರು. ಭರತ ನಾಟ್ಯವನ್ನು ಸಾಕ್ಷಿ ತಳವಾರ ಮಾಡಿದರು, ಸಂಗೀತವನ್ನು ಮಹೇಶ ನರಬೋಳಿ, ಮಹಾಂತೇಶ ನರಿಬೊಳಿ ನಡೆಸಿಕೊಟ್ಟರು, ಶ್ರೀ ಮಾಣಿಕೇಶ್ವರಿ ಟ್ರಸ್ಟದವರಿಂದ ಭಜನೆ ಹಾಗೂ ಶ್ರೀ ಮಾತೋಶ್ರೀ ಸಾತಮ್ಮತಾಯಿ ಭಜನಾಮಂಡಳಿ, ಶ್ರೀ ಭೀರಲಿಂಗೇಶ್ವರ ಭಜನಾಮಂಡಳಿ ಹೊನಗುಂಟಾ ದವರಿಂದ ಭಜನೆ ನಡೆದವು. ಈ ಕಾರ್ಯಕ್ರಮಕ್ಕೆ ಭಕ್ತಾಧಿಗಳು, ಸುತ್ತಮುತ್ತಾ ಗ್ರಾಮಸ್ಥರು ಆಗಮಿಸಿದರು