ಬಳತ (ಬಿ) ಮತ್ತು ಬಳತ( ಕೇ) ಗಳಲ್ಲಿ ಗ್ರಾಮ ಸಭೆ ನಡೆಸಲಾಯಿತು
ಬಳತ (ಬಿ) ಮತ್ತು ಬಳತ( ಕೇ) ಗಳಲ್ಲಿ ಗ್ರಾಮ ಸಭೆ ನಡೆಸಲಾಯಿತು
ಕಮಲನಗರ: ಅ.23.ತಾಲೂಕಿನ ಬಳತ(ಬಿ) ಮತ್ತು ಬಳತ (ಕೆ)ಗ್ರಾಮದ ಸರಕಾರಿ ಕಿರಿಯ, ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಮತ್ತು ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದಲ್ಲಿ ಗ್ರಾಮ ಪಂಚಾಯತ ಬಳತ(ಬಿ) ಸಮಗ್ರ ಶಿಕ್ಷಣ ಅಡಿಯಲ್ಲಿ ಶಾಲಾ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಕಿತ್ತೂರು ಚೆನ್ನಮ್ಮ ಅವರ ಜಯಂತಿಯ ಪ್ರಯುಕ್ತ ಮೊಟ್ಟ ಮೊದಲಿಗೆ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಬದುಕಿ ಪ್ರೇರಣೆಗೆ ಸಾಕ್ಷಿಯಾಗಿರುವ ಚೆನ್ನಮ್ಮನವರ ಬದುಕಿನ ಜೀವನ ಚರಿತ್ರೆ ಹೇಳಿದರು.ಜೋತೆಗೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ದೇವದಾಸ ಮುಸ್ಕೆ ಈ ಸದರಿ ಸಭೆಗೆ ಅದ್ಯಕ್ಷ ಸ್ಥಾನ ವನ್ನು ವಹಿಸಿದ ಹಿರಿಯ ನಾಗರಿಕರಾದ ಶ್ರೀ ರಾಮಚಂದ್ ಬಿರಾದಾರ ಇವರ ಅಧ್ಯಕ್ಷ ತೆಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಶ್ರೀ ನಿಲಕಂಠಪ್ಪಾ ಚವಳಿ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಶ್ರೀಮತಿ ಆರತಿ ಸಂತೋಷ ಸದಸ್ಯರು 18 ಇನ್ನೋರ್ವ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಗಳಾದ ಶ್ರೀ ಬಸವರಾಜ ಜಾಗವೆ ಎಸ್ ಡಿ ಎಮ್ ಸಿ ಅದ್ಯಕ್ಷ ರಾದ ಶ್ರೀಮತಿ ಜ್ಯೋತಿ ಸಂಜುಕುಮಾರ ಈ ಸಭೆಗೆ ಹಾಜರಿದ್ದರು. ಮತ್ತು ಶಾಲೆಯ ಎಲ್ಲಾ ಶ್ರೀ ಬಾಬುರಾವ ಸಿಂಧೆ ಸಹ ಶಿಕ್ಷಕರು ಮತ್ತು ರಾಜೇಂದ್ರ ಸರ ಮತ್ತು ಶ್ರೀ ಸುರೇಖಾ .ಫರಾಹಾ ಮೇಡಂ ಮತ್ತು ಧಶರತ ಔರಾದೆ ಪೋಷಕರು.ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್ ಶೇಷರಾವ್ ಮೇತ್ರೆ. .ರಂಜನಾ ಬೀರಾದಾರ ಈ ಶಾಲಾ ಸಭೆಗೆ ಇತರರು.ಉಪಸ್ಥಿತಿ ಯಲ್ಲಿದ್ದರು
. ಈ ಸಂದರ್ಭದಲ್ಲಿ ಸಮಗ್ರ ಶಿಕ್ಷಣ ಶಾಲಾ ಶಿಕ್ಷಣವು ಕರ್ನಾಟಕ ಶಾಲೆಯಲ್ಲಿ ಶಿಕ್ಷಣ ವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು.ಈ ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಸವಿಸ್ತಾರವಾಗಿ ಹೇಳಿದರು.ಮತ್ತು ಮೇಳು ಕೀಳು ಎಂಬ ಭಾವನೆಗಳನ್ನು ಇರಬಾರದು. ಎಲ್ಲರು ಸಮಾನರು ಸಹ ಬಾಳ್ವೆ ಯಿಂದ ಶಿಕ್ಷಣ ವನ್ನು ಪಡೆಯಬೇಕು ಮಧ್ಯಾಹ್ನದ ಬಿಸಿ ಊಟದ ಬಗ್ಗೆ ಸಹ ಮಾತನಾಡಿದರು.ಅಡುಗೆ ಸರಿಯಾಗಿ ಮಾಡಿ ,01 ಜನ ಮಾಡುವ ಅಡುಗೆ 61 ಜನ ಊಟ ಮಾಡುತ್ತಾರೆ. ಎಲ್ಲಾ ತಮಕ್ಕಳಿಗೆ ಗುಣಾತ್ಮಕ ಶಿಕ್ಷಣ ವನ್ನು ನೀಡಿರುತ್ತಾರೆ. ಸಹ ಪಠ್ಯ ಚಟುವಟಿಗೆಗಳ ಜೊತೆಗೆ ಒಳ್ಳೆಯ ಶಿಕ್ಷಣ ನೀಡಿರುತ್ತಾರೆ. ಶಾಲೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಬಹುಮಾನವನ್ನು ಸಹ ನೀಡಲಾಗುತ್ತದೆ.ಶಾಲೆಯ ವಾತಾವರಣ ಶುದ್ಧ ರೀತಿಯಲ್ಲಿ ಕೂಡಿದ್ದಾಗಿದೆ ಎಲ್ಲಾ ಶಿಕ್ಷಕರು ಎಲ್ಲಾ ದಾಖಲಾತಿಗಳು ಸಮರ್ಪಕವಾಗಿ ನಿರ್ವಹಿಸಿರುತ್ತಾರೆ.ಶಾಲೆಗೆ ಮೂಲಭೂತ ಸೌಕರ್ಯಗಳಿಂದಕೂಡಿದೆ. ಕಲರಿಂಗ . ಶಾಚಾಲಯ ಬಗ್ಗೆ ಎಂದು ಹೇಳುತ್ತಾ ತಮ್ಮ ಮಾತುಗಳಿಗೆ ವಿರಾಮ ಹಾಕಿದರು.
.ಈ ಶಾಲಾ ಸಭೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು.ಹಾಗೂ ಈ ಕಾರ್ಯಕ್ರಮದಲ್ಲಿ ಶಾಲೆ ಸಿಬ್ಬಂದಿಯವರು ಮತ್ತು ಗ್ರಾಮದ ಗಣ್ಯ ವ್ಯಕ್ತಿಗಳು ನಾಗರಿಕರು ಶಾಲೆಯ ಪಾಲಕರು ಉಪಸ್ಥಿತಿಯಲ್ಲಿದ್ದರು.