ಡಾ.ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರ ಹುಟ್ಟುರಿನಲ್ಲಿ,, 135 ನೇ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ಕನ್ನಡ ರಥೋತ್ಸವ ಮೆರವಣಿಗೆ
ಡಾ.ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರ ಹುಟ್ಟುರಿನಲ್ಲಿ,, 135 ನೇ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ಕನ್ನಡ ರಥೋತ್ಸವ ಮೆರವಣಿಗೆ
ತಾಲೂಕಿನ ಕಮಲನಗರ ಗ್ರಾಮದಲ್ಲಿ ಗಡಿನಾಡಿನಲ್ಲಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಸ್ವಾಗತ ಸಮಿತಿ ಮತ್ತು ಕಮಲನಗರದ ಸಮಸ್ತ ಸದ್ಭಕ್ತ ಮಂಡಳಿ ವತಿಯಿಂದ ಆಯೋಜಿಸಿದ್ದ ಪೂಜ್ಯ ಶ್ರೀ ಮ.ಘ.ಚ.ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತ್ಯುತ್ಸವ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಕನ್ನಡ ರಥೋತ್ಸವ ಕಾರ್ಯಕ್ರಮ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಅಲಂಕೃತ ಸಾರೋಟಿನಲ್ಲಿ ಪೂಜ್ಯ ಶ್ರೀ ನಾಡೋಜ ಡಾಕ್ಟರ್ ಬಸವಲಿಂಗ ಪಟ್ಟದ್ದೇವರು ಮತ್ತು ಪೂಜ್ಯ ಶ್ರೀ ಮ.ಘ.ಚ.ಗುರುಬಸವ ಪಟ್ಟದ್ದೇವರನ್ನು ಕೂರಿಸಿ ಮುಂಜಾನೆ 11ಗಂಟೆಗೆ ಚನ್ನಬಸವೇಶ್ವರ ಕಾಲೋನಿಯಿಂದ ಪ್ರಮುಖ ಬೀದಿಗಳ ಮೂಲಕ ವೇದಿಕೆವರೆಗೆ ಭವ್ಯ ಮೆರವಣಿಗೆ ಮಾಡಲಾಯಿತು. ಶ್ರೀ ಮಠದಲ್ಲಿ ವೇದಿಕೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಜರುಗಿತು.
ಬೀದರ- ನಾಂದೇಡ್ ರಾಷ್ಟ್ರೀಯ ಹೆದ್ದಾರಿ ಹಾಗೂ ವಿವಿಧ ಬಡಾವಣೆಯಲ್ಲಿರುವ ಮಹಿಳೆಯರು ತಮ್ಮ ಮನೆಯ ಮುಂಭಾಗದಲ್ಲಿ ರಂಗೋಲಿಯನ್ನು ಹಾಕಿ ಲಿಂ.ಡಾ. ಚೆನ್ನಬಸವ ಪಟ್ಟದ್ದೇವರ ಭಾವಚಿತ್ರವನ್ನು ಇಟ್ಟು ಪೂಜಿಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಮೆರವಣಿಗೆಯುದ್ದಕ್ಕೂ ಪಟ್ಟದ್ದೇವರಿಗೆ ಜಯವಾಗಲಿ ಎನ್ನುವ ಜೈಘೋಷಗಳು ಮುಳಗಿದವು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಬಾರಶಿ ಪಟ್ಟಣದ ಅಂಬ್ರೆಲಾ ಗ್ರೂಪಿನವರಿಂದ ಬ್ಯಾಂಡ್ ಛತ್ರಿ ಪ್ರದರ್ಶನ ವಿವಿಧ ಮಹಿಳಾ ಸಂಘಟಕರಿಂದ ಹಾಗೂ ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದರೆ,ಡೋಳು ಕುಣಿತ ಮುತ್ತೈದೆಯರು ಕಳಸ ಹೊತ್ತಿದರು.ಶಾಲಾ ಮಕ್ಕಳಿಂದ ಲೇಜಿಮ್ ಹಾಗೂ ಭಕ್ತರು ಭಜನೆ ಪದಗಳನ್ನು ಹಾಡುತ್ತಾ ಕೋಲಾಟವನ್ನು ಆಡುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಗ್ರಾಮದಲ್ಲೇಡೆ ಹಬ್ಬದ ವಾತಾವರಣ ನಿರ್ಮಾಣವಾಯಿತು.
ವೇದಿಕೆಯಲ್ಲಿ ಉಪಸ್ಥಿತಿಯಲ್ಲಿರುವ
ಡಾ ನೀಲಾಂಬಿಕಾ ಪೊಲೀಸ್ ಪಾಟೀಲ್ ಸಾಹಿತಿಗಳು ಕಲಬುರ್ಗಿ ಇವರು
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಕಿಕೊಟ್ಟ ಶರಣ ಮಾರ್ಗದಲ್ಲಿ ನಡೆಯುತ್ತಾ ದಾಸೋಹ ಮತ್ತು ಕಾಯಕವೇ ಕೈಲಾಸ ವನ್ನು ತಮ್ಮ ಮೈಯೆಲ್ಲಾ ಗುಡಿಸಿಕೊಂಡು ಪೂಜ್ಯ ಮ.ಘ.ಚ .ಡಾಕ್ಟರ್ ಚನ್ನಬಸವ ಪಟ್ಟದ್ದೇವರು ನಡೆದಾಡುವ ದೇವರೆಂದೇ ನಮ್ಮ ಈ ಭಾಗದಲ್ಲಿ ಗುರ್ತಿಸಿಕೊಂಡವರು ಎಂದು ನುಡಿದರು.
ಅವರು ನುಡಿದಂತೆ ನಡೆದು ನಮ್ಮೆಲ್ಲರ ಅಹೋ ಭಾಗ್ಯಗಳಿಂದ ಪೂರ್ವ ಜನ್ಮದ
ನಮ್ಮೆಲ್ಲರ ಭಾಗ್ಯ ಇದೆ .ನಾವು ಕೂಡ ಕಮಲನಗರದಲ್ಲಿ ಚನ್ನಬಸವ ಪಟ್ಟದ್ದೇವರ ಕಾರ್ಯಕ್ರಮಗಳು ಮುಂದೆ ಎರಡು ಮೂರು ದಿನಗಳ ಕಾರ್ಯಕ್ರಮ ಮಾಡೋಣ ಮತ್ತು ಒಂದು ದೊಡ್ಡ ಜಾತ್ರೆ ಸೌರಭದಲ್ಲಿ ಕಾರ್ಯಕ್ರಮವನ್ನು ಮತ್ತೆ ಇದರಕ್ಕಿಂತ ಜಾಸ್ತಿ ಮಾಡ್ತಾ ಹೋಗೋಣ ಮತ್ತು ಇದರಲ್ಲಿ ಒಳ್ಳೆ ಸಾಹಿತಿಗಳು ಒಳ್ಳೆ ಮಾತಾಡೋರು ಮತ್ತು ನಿಮಗೆ ಬೇರೆ ಬೇರೆ ಕಾರ್ಯಕ್ರಮದಲ್ಲಿ ಮಾಡುವಂತೆ ಇನ್ನೂ ಹೆಚ್ಚಿನ ಒಂದು ಕಾರ್ಯಕ್ರಮವನ್ನು ತರೋಣ ಅಂತ ಹೇಳಿ ಈ ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಇಷ್ಟು ಸಂಖ್ಯೆಯಲ್ಲಿ ಜನ ಬಂದು ಈ ಮೆರವಣಿಗೆ ಪಾಲ್ಗೊಂಡಿರುವದು ಸಂತಸವಾಗಿದೆ ಎಂದು ವ್ಯಕ್ತಪಡಿಸುತ್ತಾ,ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹರಿಕಾರಾಗಿ ಶಿಕ್ಷಣ ರಂಗದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಪ್ರಕಾಶ್ ಟೋಣ್ಣೆಯರು
ವಿಶೇಷವಾಗಿ ಎಲ್ಲಾ ಗ್ರಾಮಗಳಿಂದ ಆಗಮಿಸಿರುವ ಕಮಲನಗರದ ಎಲ್ಲಾ ಅಕ್ಕನ ಬಳಗದವರು ಅಣ್ಣನ ಬಳಗದವರು ಎಲ್ಲ ಗ್ರಾಮದ ಮಹಿಳೆಯರಿಗೆ ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾದ ಸ್ವಾಗತವನ್ನು ಬಯಸುತ್ತೇನೆಂದು ಎಲ್ಲರಿಗೂ ಶರಣು ಶರಣಾರ್ಥಿ ಕೊರಿದರು.
ವಿಜೃಂಭಣೆಯಿಂದ ನೂತನ ರಥ ಲೋಕಾರ್ಪಣೆಕಾರ್ಯಕ್ರಮ ಜರಗಿತ್ತು
ಈ ಕಾರ್ಯಕ್ರಮವು ಭವ್ಯ ಮತ್ತು ದಿವ್ಯವಾಗಿ ನಡೆಯಿತು. ಮಹಾಮಂಗಲ ಕಾರ್ಯಕ್ರಮವು ವೈಭವದಿಂದ ನೇರವೇರಿತು.
ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಮ.ಘ.ಚ. ನಾಡೋಜ ಡಾ.ಬಸವಲಿಂಗ ಪಟ್ಟ ದ್ದೇವರು ಅಧ್ಯಕ್ಷರು ಅನುವ ಮಂಟಪ ಬಸವಕಲ್ಯಾಣ, ರಥಚಾಲನೆ ಪೂಜ್ಯಶ್ರೀ ಜಗದ್ಗುರು ಮ. ನಿ. ಪ್ರ.ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಜಗದ್ಗುರು ಸಾರಂಗಧರ ಮಹಾ ಸಂಸ್ಥಾನ ಮಠ, ಶ್ರೀಶೈಲ ಸುಲಫಲ ಇವರ ಹಸ್ತದಿಂದ ನೂತನ ರಥವನ್ನು ಲೋಕಾರ್ಪಣೆಗೊಳಿಸಿ ವಿವಿಧ ವೈಭವಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಮೆರವಣಿಗೆ ಉದ್ದಕ್ಕೂ ನೂರಾರು ಜನ ಭಕ್ತರ ಮಧ್ಯ ಸುಮಂಗಲಿಯರು ಕುಂಭ ಮೇಳ,ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಜನರ ಕಣ್ಮನ ಸೆಳೆದರು.
ಭಜಂತ್ರಿ ಡೋಳು ಕುಣಿತದಿಂದ ಇಡಿ ಗ್ರಾಮವೇ ಉತ್ಸವ ಉಲ್ಲಾಸದಿಂದ ಕುಣಿದು ಕುಪ್ಪಳಿಸಿದರು ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ನೇರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಇಂಥ ಅಪರೂಪದ ಗಡಿ ಭಾಗದಲ್ಲಿ ಎಲ್ಲಿಯು ಇಲ್ಲದ ವೈಭವದ ರಥವು ನೋಡಲು ಈ ಸುತ್ತಲಿನ ನಾಡಿನ ಭಕ್ತರಾದ ಸೋನಾಳ ,ಲಖನಗಾಂವ, ಚಂದನವಾಡಿ,ಹೊರಂಡಿ,ಖೇಡ, ಚಾಡೇಶ್ವರ, ಡಿಗ್ಗಿ, ಕಮಲನಗರ ,ಬಾಲೂರ, ಹೊಳಸಮುದ್ರ,ಸಂಗಮ,ಹುಲಸುರ, ಉದಗೀರ,ಮದನೂರ, ಹೂವಿನ ಶಿಗ್ಲಿ, ನಾಗುರ, ಮುಂತಾದ ಕಡೆಗಳಿಂದ ಭಕ್ತರು ಪಾಲ್ಗೊಂಡಿದರು.
ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿಸಿರುವರು.
ಈ ಮಧ್ಯ ಯಾವುದೇ ಅಹಿತರ ಘಟನೆ ಯಾಗದಂತೆ ಪೋಲಿಸರ ಬೀಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.