ಏಡ್ಸ್ ರೋಗಿಗಳು ಅಸ್ಪೃಶ್ಯರಲ್ಲ
ಏಡ್ಸ್ ರೋಗಿಗಳು ಅಸ್ಪೃಶ್ಯರಲ್ಲ
ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ದೊಡ್ಡಪ್ಪ ಅಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಬುರ್ಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಮಲ್ಲಿಕಾರ್ಜುನ್ ಜಿ ಬಿರಾದಾರ್ ಅವರು ಮಾತನಾಡಿ ವಿಶ್ವದಲ್ಲಿಯೇ ದಕ್ಷಿಣ ಆಫ್ರಿಕವು ಅತಿ ಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿರುವ ದೇಶವಾಗಿದೆ. ಏಡ್ಸ್ ನಿಂದ ರೋಗನಿರೋಧಕ ಶಕ್ತಿ ಕ್ಷೀಣಿಸಿ ಹೋಗುತ್ತದೆ .ಏಡ್ಸ್ ರೋಗಿಗಳು ಅಸ್ಪೃಶ್ಯರಲ್ಲ ಅವರನ್ನು ಗೌರವದಿಂದ ಕಾಣಬೇಕು ಎಂದು ನುಡಿದರು .
ಏಡ್ಸ್ ರೋಗಿಗಳನ್ನು ಮುಟ್ಟುವುದರಿಂದ, ಅವರೊಂದಿಗೆ ಊಟ ಮಾಡುವುದರಿಂದ, ಅವರು ಸೀನಿದಾಗ ಕೆಮ್ಮಿದಾಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಲೇ ಹೆಚ್ಚಾಗಿ ಏಡ್ಸ್ ಬರುತ್ತದೆ .ಏಡ್ಸ್ ಬರುವುದಕ್ಕೆ ನಾಲ್ಕು ಕಾರಣಗಳಿವೆ .ಅಸುರಕ್ಷಿತ ಲೈಂಗಿಕ ಕ್ರಿಯೆ ,ತಂದೆ ತಾಯಿಗೆ ಇದ್ದರೆ ಜನಿಸುವ ಮಗುವಿಗೆ ,
ಏಡ್ಸ್ ರೋಗ ಇರುವ ವ್ಯಕ್ತಿಗೆ ಬಳಸಿದ ಸಿರಿಂಜ್ ಇನ್ನೊಬ್ಬರಿಗೆ ಬಳಸಿದರೆ ,ರೋಗ ಇರುವ ವ್ಯಕ್ತಿಯ ರಕ್ತ ಇನ್ನೊಬ್ಬರಿಗೆ ವರ್ಗಾವಣೆ ಮಾಡಿದರೆ ಏಡ್ಸ್ ರೋಗ ಬರುತ್ತದೆ .
ಏಡ್ಸ್ ರೋಗದ ಬಗ್ಗೆ ಭಯಪಡಬಾರದು . ಏಡ್ಸ್ ರೋಗದ ಲಕ್ಷಣಗಳೆಂದರೆ ನಿರಂತರವಾಗಿ ಪದೇ ಪದೇ ಜ್ವರ ಬರುವುದು ,ಹೆಚ್ಚು ನೆಗಡಿ ಕೆಮ್ಮು ಬರುವುದು ,ನಿರಂತರವಾಗಿ ಭೇದಿಯಾಗುವುದು ,ಪ್ರತಿಶತ ಹತ್ತರಷ್ಟು ತೂಕ ಕಡಿಮೆಯಾಗುವುದು ಇದರ ಲಕ್ಷಣಗಳಾಗಿವೆ. ಏಡ್ಸ್ ಇದ್ದವರಿಗೆ ಸಮಯ ಸಾಧಕ ರೋಗಗಳು ಬರುತ್ತವೆ .ಈ ಎಲ್ಲಾ ಲಕ್ಷಣಗಳಿದ್ದರೂ ಕೂಡ ರಕ್ತ ಪರೀಕ್ಷೆ ಮಾಡಿದಾಗ ಮಾತ್ರ ರೋಗ ಇದೆ ಎಂದು ಖಚಿತವಾಗುತ್ತದೆ .ಸರಕಾರಿ ಐಸಿಟಿಸಿ ಸೆಂಟರ್ ಗಳಲ್ಲಿ ಎಚ್ಐವಿ ಉಚಿತ ಪರೀಕ್ಷೆ ಮಾಡಿ ಗೌಪ್ಯವಾಗಿಡುತ್ತಾರೆ .2004ರಲ್ಲಿ ಏಡ್ಸ್ ಗೆ ನಿಯಂತ್ರಿಸಬಲ್ಲ ಎ.ಆರ್. ಟಿ ಚಿಕಿತ್ಸೆ ಔಷಧ ಕಂಡು ಹಿಡಿಯಲಾಗಿದೆ .ಇದರಿಂದ ವ್ಯಕ್ತಿಗೆ ರೋಗ ಸಂಪೂರ್ಣ ಗುಣಮುಖವಾಗದೆ ಇದ್ದರೂ ರೋಗಾಣುಗಳು ದ್ವಿಗುಣ ವಾಗದಂತೆ ತಡೆಗಟ್ಟಿ ರೋಗಿಯ ಸಾವನ್ನು ಮುಂದೂಡುತ್ತಾ ಹೋಗುತ್ತದೆ . 14 ರಿಂದ 20ರ ಒಳಗಿನ ಹದಿಹರೆಯದ ಯುವಕರಲ್ಲಿ ಎಚ್ಐವಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ .ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಿರಬೇಕು ಮನಸ್ಸು ಗುರಿಯ ಕಡೆಗೆ ಇದ್ದಾಗ ವಿದ್ಯಾರ್ಥಿಗೆ ದುರ್ಗುಣಗಳು ಬರುವುದಿಲ್ಲ .
ಎಚ್ಐವಿ ಆದವರಿಗೆ ಕುಟುಂಬದವರು, ಗೆಳೆಯರು, ಜೊತೆಗಾರರು ಅಸ್ಪೃಶ್ಯತೆಯಿಂದ ಕಾಣಬಾರದು .ಅದರಿಂದ ಅವರ ಮಾನಸಿಕ ಅವಸ್ತೆ ಕ್ಷೀಣಿಸುತ್ತದೆ ಹೆಚ್ಐವಿ ವ್ಯಕ್ತಿಗೆ ಅವಹೇಳನ ಮಾಡಿದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಸಂವಿಧಾನದ 21ನೇ ವಿಧಿಯ ಪ್ರಕಾರ ವ್ಯಕ್ತಿಗೆ ಜೀವಿಸುವ ಹಕ್ಕಿದೆ. ಎಚ್ಐವಿ ಆದವರಿಗೆ ಸರ್ಕಾರದ ಸವಲತ್ತುಗಳಿವೆ. ಅವರು ಆತ್ಮಹತ್ಯೆಗೆ ಯೋಚಿಸಬಾರದು 2030ಕ್ಕೆ ಭಾರತವು ಏಡ್ಸ್ ಮುಕ್ತ ಭಾರತವಾಗಿಸುವ ಗುರಿ ಹೊಂದಿದೆ. ಏಡ್ಸ್ ತರಿಸಿಕೊಳ್ಳುವುದು ಬಿಡುವುದು ವ್ಯಕ್ತಿ ಕೈಯಲ್ಲಿದೆ . 1097 ಏಡ್ಸ್ ಸಹಾಯವಾಣಿಯಾಗಿದೆ .
ಭಾಗ್ಯವಂತಿ ಪಾಟೀಲ್ ಮೇಡಂ ಅವರು ಅಧ್ಯಕ್ಷೀಯ ನುಡಿಗಳ ನಾಡುತ್ತಾ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು .
ವಿದ್ಯಾರ್ಥಿಗಳಾದ ಕುಮಾರಿ ಮಿಸ್ಬಾ ಕುಮಾರ್ ಆದಿತ್ಯರಾಜ್ ಅವರು ಏಡ್ಸ್ ಕುರಿತಾದ ಮಾತನಾಡಿದರು.ಉಪನ್ಯಾಸಕರಾದ ಸಿದ್ದರಾಮ್ ಅಮರೇ ಅವರು ಸ್ವಾಗತಿಸಿದರು .ಡಾ ಆನಂದ ಸಿದ್ದಾಮಣಿ ನಿರೂಪಿಸಿದರು