ಭಜಂತ್ರಿ, ರಾಜೇಶ್ವರಿ,ಪದ್ಮಶ್ರೀ'ಗೆ- ಉರಿಲಿಂಗಪೆದ್ದಿ ಮಠದ ಪ್ರಶಸ್ತಿ

ಭಜಂತ್ರಿ, ರಾಜೇಶ್ವರಿ,ಪದ್ಮಶ್ರೀ'ಗೆ- ಉರಿಲಿಂಗಪೆದ್ದಿ ಮಠದ ಪ್ರಶಸ್ತಿ

ಭಜಂತ್ರಿ, ರಾಜೇಶ್ವರಿ,ಪದ್ಮಶ್ರೀ'ಗೆ- ಉರಿಲಿಂಗಪೆದ್ದಿ ಮಠದ ಪ್ರಶಸ್ತಿ

ಹುಲಸೂರು: ಪ್ರತಿ ವರ್ಷದಂತೆ ಈವರ್ಷವೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಶರಣ ಉರಿಲಿಂಗಪೆದ್ದಿ ಮತ್ತು ಶರಣೆ ಕಾಳವ್ವೆ ಉತ್ಸವ,ಲಿಂ.ಪೂಜ್ಯಶ್ರೀ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೆ ಅಂಗವಾಗಿ ಜರುಗುವ ಪ್ರಥಮ ಪ್ರಕಾಶಕರ ಸಮ್ಮೇಳನವು ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ ಸರ್ವಾಧ್ಯಕ್ಷತೆಯಲ್ಲಿ ಫೆಬ್ರುವರಿ 7 ಮತ್ತು 8 ರಂದು ಜರುಗಲಿದೆ.ಮಠದ ಪ್ರತಿಷ್ಠಿತ ಉರಿಲಿಂಗಪೆದ್ದಿ ಪ್ರಶಸ್ತಿಗೆ ಧಾರವಾಡದ ಹಿರಿಯ ಸಾಹಿತಿ,ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ.ವೈ.ಎಚ್.ಭಜಂತ್ರಿ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದ ಪಲ್ಲವ ಪ್ರಕಾಶನದ ಪ್ರಕಾಶಕಿ ಎಂ.ರಾಜೇಶ್ವರಿ ವೆಂಕಟೇಶ ಅವರಿಗೆ ಮತ್ತು ಬೆಂಗಳೂರಿನ ಸಾಹಿತಿ ಚಿಂತಕಿ ಶ್ರೀಮತಿ ಪದ್ಮಶ್ರೀ ರಾಗಂ ಅವರಿಗೆ ಕಾಳವ್ವೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಪೀಠಾಧಿಪತಿ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಮತ್ತು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉರಿಲಿಂಗಪೆದ್ದಿ ಪ್ರಶಸ್ತಿ ಪುರಸ್ಕೃತರು:

ಡಾ.ವೈ.ಎಚ್.ಭಜಂತ್ರಿ:ಇವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ೧೯೬೫ ರಲ್ಲಿ ಜನನ.ಎಂ.ಎ.ಪಿಎಚ್.ಡಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪಡೆದು ಐದು ವರ್ಷ ಖಾಸಗಿಯಾಗಿ ಉಪನ್ಯಾಸಕರಾಗಿ ಸೇವೆ. ೧೯೯೬ ರಿಂದ ೨೦೨೫ ರವರೆಗೆ ಇಪ್ಪತ್ತೊಂಬತ್ತು ವರ್ಷ ಸರಕಾರಿ ಪ್ರಥಮ ದರ್ಜೆ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.ಶೈಕ್ಷಣಿಕ ಅನುಭವ ಹೊಂದಿದವರು.ಎನ್.ಎಸ್.ಎಸ್.ಅಧಿಕಾರಿ ಗಳಾಗಿ,ರಾಯಚೂರು ಮತ್ತು ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ,ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿ,ಧಾರವಾಡ ಜಿಲ್ಲೆಯ ಕಸಾಪ ಗೌ.ಕಾರ್ಯದರ್ಶಿಯಾಗಿ ಅನೇಕ ಸಂಘಟನೆಯ ಸಂಘಟಕರು.ಉತ್ತಮ ಭಾಷಣಕಾರರು,ಕವಿಯಾಗಿ,ಕಥೆ ಗಾರರಾಗಿ,ಲೇಖಕರಾಗಿ,ವಿದ್ವಾಂಸರಾಗಿ, ಸಂಪಾದಕರಾಗಿ ಮೂವತ್ತೈದಕ್ಕೂ ಹೆಚ್ಚು ಪುಸ್ತಕ ಪ್ರಕಡಿಸಿದ್ದಾರೆ.ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾದವರು.ವೈಚಾರಿಕ ಚಿಂತಕರು.ಇವರ ಸಾಹಿತ್ಯ- ಸಂಘಟನೆ ಸೇವೆ ಪರಿಗಣಿಸಿ ಉರಿಲಿಂಗಪೆದ್ದಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶ್ರೀಮತಿ ಎಂ.ರಾಜೇಶ್ವರಿ: ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣ ಗ್ರಾಮದವರು.ಪದವಿ ಹೊಂದಿ ಬಾಳ ಸಂಗಾತಿ ಡಾ‌ಕೆ.ವೆಂಕಟೇಶ ಅವರನ್ನು ವಿವಾಹವಾಗಿ

ಪಲ್ಲವ ಪ್ರಕಾಶನವನ್ನು ಕಳೆದ ಒಂದುವರೆ ದಶಕಗಳಿಂದಲೇ ಪ್ರಾರಂಭಿಸಿ ಸುಮಾರ ಎರಡನೂರಕ್ಕೂ ಹೆಚ್ಚು ಮೌಲಿಕ ಮತ್ತು ಅಂದ ಚಂದದ ಗುಣಮಟ್ಟದ ಪುಸ್ತಕ ಪ್ರಕಟಿಸುತ್ತಾ ಬಂದಿದ್ದಾರೆ.ಈಗಾಗಲೇ ಪುಸ್ತಕ ಪ್ತಕಾಶನದಲ್ಲಿ ಒಂದು ಯುಗವನ್ನೇ ನಿರ್ಮಿಸಿ ಸಾಹಿತ್ಯ ಪ್ರಿಯರಿಗೆ,ಓದುಗರಿಗೆ ಮನೆಮಾತಾದ ಪ್ರಕಾಶಕಿ.ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾದವರು.ಇವರ ಗುಣ ಮಟ್ಟದ ಪುಸ್ತಕ ಪ್ರಕಾಶನದ ಕಾರ್ಯಕ್ಕೆ ಉರಿಲಿಂಗಪೆದ್ದಿ ಪ್ರಶಸ್ತಿ ನೀಡಲಾಗುವುದು.

ಕಾಳವ್ವೆ ಪ್ರಶಸ್ತಿ ಪುರಸ್ಕೃತರು:

ಶ್ರೀಮತಿ ಪದ್ಮ ಶ್ರೀ ರಾಗಂ: ಎಂ.ಸಿ.ಎ ಪದವೀಧರೆ.ಹಲವು ಕಡೆ ಉಪನ್ಯಾಸಕರಾಗಿ ಸೇವೆ.ಇವರು ಪ್ರಸ್ತುತ ಬೆಂಗಳೂರಿನ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 "ಜಾಣ ಜಾಣೆಯರ ಜನಪದ ಕಥೆಗಳು" ಕಥಾ ಸಂಕಲನ 2012,,"ಇಂತಿ ನಿನ್ನ ಬಾಪು" ಗಾಂಧೀಜಿಯವರ ಪತ್ರಗಳ ಸಂಗ್ರಹ 2013, "ಪ್ರೀತಿ ನಲವತ್ತು ರೀತಿ' ರಾಗಂ ಅವರು ಬರೆದ ಪ್ರೀತಿ ಕುರಿತಾದ ಲೇಖನಗಳ ಸಂಗ್ರಹ 2015 ಹೊರ ತಂದಿದ್ದಾರೆ.

"ಕಂಪ್ಯೂಟರ್ ಭಾಷೆ ಮತ್ತು ಜಾಗತೀಕರಣ" ವಿಷಯದ ಪ್ರಬಂಧವನ್ನು CIIL ಮೈಸೂರು ರಾಷ್ಟ್ರೀಯ ಸೆಮಿನಾರ್‌ನಲ್ಲಿ ಪ್ರಸ್ತುತಪಡಿಸಿದ್ದು, ಸಮಕಾಲೀನ ಸಮಾಜ ಮತ್ತು ತಂತ್ರಜ್ಞಾನ ಸಂವೇದನೆಯನ್ನು ಸಾಹಿತ್ಯದ ನೆಲೆಯಲ್ಲಿ ವಿಶ್ಲೇಷಿಸಿದ ಪ್ರಯತ್ನ.ವಿವಿಧ ಸಾಹಿತ್ಯಕ ಹಾಗೂ ಶೈಕ್ಷಣಿಕ ವೇದಿಕೆಗಳಲ್ಲಿ ಭಾಗವಹಿಸಿ ಪ್ರಬಂಧ ವಿಮರ್ಶೆ ಮತ್ತು ಚಿಂತನಾತ್ಮಕ ಬರಹಗಳ ಮೂಲಕ ಕನ್ನಡ ಭಾಷೆ-ಸಂಸ್ಕೃತಿಗೆ ಕೊಡುಗೆ. ಜೋಳಿಗೆ ಪ್ರತಿಷ್ಠಾನವನ್ನು 2013 ರಲ್ಲಿ ಸ್ಥಾಪಿಸಿ, ಅದರ ಅಡಿಯಲ್ಲಿ ಅನೇಕ ಸಾಹಿತ್ಯಕ ಜಾನಪದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡುಬಂದಿದ್ದಾರೆ.

ಪಿ.ಆರ್. ಪಬ್ಲಿಕೇಶನ್ ಬೆಂಗಳೂರು 2021 ರಲ್ಲಿ ಪ್ರಾರಂಭಿಸಿ, ಅನೇಕ ಯುವ ಮತ್ತು ಹಿರಿಯ ಸಾಹಿತಿಗಳ ಕೃತಿಗಳನ್ನು ಹೊರತರುವಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.ವಿಶೇಷ ಆಸಕ್ತಿ ಕ್ಷೇತ್ರಗಳು: ಕನ್ನಡ ಕಥಾ ಸಾಹಿತ್ಯ, ಜಾನಪದ ಅಧ್ಯಯನ ಮಹಿಳಾ ಸಂವೇದನೆ, ಸಮಕಾಲೀನ ಸಾಮಾಜಿಕ ಚಿಂತನೆ, ಸಾಂಸ್ಕೃತಿಕ ವಿಮರ್ಶೆ.ಇವರ ಮಹಿಳಾ ಪರ ಸೇವೆ ಪರಿಗಣಿಸಿ ಶರಣೆ ಕಾಳವ್ವೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.