ಸಾಯಿಬಾಬಾ ಅಣಬಿಗೆ "ಸಾಹಿತ್ಯ ಸಿರಿ" ಪ್ರಶಸ್ತಿ

ಸಾಯಿಬಾಬಾ ಅಣಬಿಗೆ "ಸಾಹಿತ್ಯ ಸಿರಿ" ಪ್ರಶಸ್ತಿ

ಸಾಯಿಬಾಬಾ ಅಣಬಿಗೆ "ಸಾಹಿತ್ಯ ಸಿರಿ" ಪ್ರಶಸ್ತಿ

ಶಹಾಪುರ : ತಾಲೂಕಿನ ಅಣಬಿ ಗ್ರಾಮದ ಸಾಹಿತಿ,ಯುವ ಸಂಶೋಧಕ ಸಾಯಿಬಾಬಾ ಅಣಬಿ ಅವರಿಗೆ ರಾಜ್ಯಮಟ್ಟದ "ಸಾಹಿತ್ಯ ಸಿರಿ" ಪ್ರಶಸ್ತಿ ಲಭಿಸಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೊಳ - ಸಸ್ತಾಪುರ ಗ್ರಾಮದ ಶ್ರೀ ಸದ್ಗುರು ಯಲ್ಲಾ ಲಿಂಗೇಶ್ವರ ಆನಂದಾಶ್ರಮದಲ್ಲಿ ಪೂಜ್ಯ ಲಿಂಗೈಕ್ಯ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರರ 40ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಾಗೂ ಪೂಜ್ಯ ಶ್ರೀ ಮಹಾದೇವಿ ತಾಯಿವರ 61ನೇ ಹುಟ್ಟುಹಬ್ಬದ ನಿಮಿತ್ಯ ಪ್ರಥಮ ಶಿಕ್ಷಕ ಕವಿ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ. ಜನವರಿ 16ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಯಿಬಾಬಾ ಅಣಬಿ ಯವರ ಸಾಹಿತ್ಯ ಕೃಷಿ ಹಾಗೂ ಸಂಶೋಧನಾ ಕಾರ್ಯವನ್ನು ಪರಿಗಣಿಸಿ 2026 ನೇ ಸಾಲಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಣೆಗೆ ತಿಳಿಸಲಾಗಿದೆ.