ದುಂಡಪ್ಪ ಗುಡ್ಲ ಇವರಿಗೆ 2021ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

ದುಂಡಪ್ಪ ಗುಡ್ಲ ಇವರಿಗೆ 2021ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ
ಚಿತ್ತಾಪೂರ : ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟ ಇವರು ಕೊಡುವ 2021/22/23/ ಹಾಗೂ 2024 ನೇ ಸಾಲಿನ ನಾಲ್ಕು ವರ್ಷಗಳ ಪ್ರಶಸ್ತಿಯನ್ನು
ಬಯಲಾಟ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿಗಳು ನೀಡಿ ಗೌರವಿಸಿದೆ
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಕೊಲ್ಲೂರು ಗ್ರಾಮದ ಬಯಲಾಟ ಕಲಾವಿದರಾದ ದುಂಡಪ್ಪ ಗುಡ್ಲ ಇವರನ್ನು 2021ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ .
ದುಂಡಪ್ಪ ಗುಡ್ಲ ಇವರು ಐದು ದಶಕಗಳ ಕಾಲಗಳಿಂದಲೂ ಹಳ್ಳಿ-ಹಳ್ಳಿಗಳಲ್ಲಿ ಬಯಲಾಟದ ಮಾಡುವ ಯುವಕರಿಗೆ ನಿರ್ದೇಶನ ನೀಡಿ ಕಲೆ ಬೆಳೆಸಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಕಲಾವಿದನಾಗಿ, ಮಾಸ್ತರನಾಗಿ ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶಗಳ ಹೊರ ರಾಜ್ಯಗಳಲ್ಲಿಯೂ ಕೂಡ ತಮ್ಮ ಕಲಾ ಪ್ರದರ್ಶನ ನೀಡಿ ಒಬ್ಬ ಉತ್ತಮ ಕಲಾವಿದನಾಗಿ ಬೆಳೆದು ಬಂದಿದ್ದಾರೆ. ಇವರು ಮಾಡುವ ಕಲೆಗೆ ಯಾವುದೇ ಫಲಾಪೇಕ್ಷೆ ಪಡೆಯದೆ ಕಲೆ ಉಳಿಸಿ ಬೆಳೆಸುವಂತಹ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಕಲೆಗೆ ಬಾಗಲಕೋಟೆ ಕರ್ನಾಟಕ ಬಯಲಾಟ ಅಕಾಡೆಮಿ ಅವರು ಪ್ರಥಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರ ಕಲೆಗೆ ಕಲಬುರಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಿ.ಎಸ್ ಮಾಲಿ ಪಾಟೀಲ ಸಹಕಾರ ಕೂಡ ನೀಡಿದ್ದಾರೆ. ಒಬ್ಬ ಪ್ರತಿಭಾವಂತ ಕಲಾವಿದನಿಗೆ ನೀಡಿದ ಗೌರವವಾಗಿದೆ ಎಂದರು
ದುಂಡಪ್ಪ ಗುಡ್ಲ ಅವರಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ ಅಕಾಡೆಮಿಯವರಿಗು, ಆಯ್ಕೆ ಸಮಿತಿಯವರಿಗೂ ಕರ್ನಾಟಕ ಜಾನಪದ ಪರಿಚಯ ಕಲಬುರ್ಗಿ ಜಿಲ್ಲಾ ಘಟಕ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಅಭಿನಂದನೆಗಳು ತಿಳಿಸಿದ್ದಾರೆ.