ಸಮ್ಮೇಳನದ ಭವ್ಯ ಮೆರವಣಿಗೆ:

ಸಮ್ಮೇಳನದ ಭವ್ಯ ಮೆರವಣಿಗೆ:

ಸಾಹಿತ್ಯಕ್ಕೆ ಮನುಷ್ಯರಾಗುವ ಗುಣವಿದೆ- ಡಾ.ಶ್ರೀಶೈಲ ನಾಗರಾಳ

ಬಸವಕಲ್ಯಾಣ: ಸಾಹಿತ್ಯಕ್ಕೆ ಮನುಷ್ಯರನ್ನಾಗುವ‌ ಗುಣ ಮನುಷ್ಯ ಲೋಕದ ಸೃಷ್ಟಿ ಮಾಡಿ ಜನರಿಗೆ ನಿರಂತರ ಮಾಡುತ್ತಾ ಬಂದಿದ್ದಾರೆ. 

ತಾಮಸಿ ಗುಣ ಹೊಡೆದಾಕಿ ಬುದ್ಧ,ಬಸವ,ಮಡಿವಾಳಪ್ಪ ಹೇಳಿದ ಮಾತು ಇಂದಿಗೂ ಸತ್ಯ ಅವರು ದೇವರಾಗುವುದು ಬೇಡ ಮನುಷ್ಯರಾಗಲು ಕಲಿಸಿದರು. ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಶಿಕ್ಷಕರ ಪಾತ್ರ ಗಣನೀಯವಾಗಿದೆ ಎಂದು ಕಲಬುರಗಿ ಹಿರಿಯ ವಿಮರ್ಶಕ ಡಾ.ಶ್ರೀಶೈಲ ನಾಗರಾಳ ನುಡಿದರು.

ಯಾವ ವ್ಯಕ್ತಿ ಸಂವೇದನೆ ಇಲ್ಲವೋ ಅವನು ಸಾಹಿತಿ ಆಗಲಾರ ಆತನ ಸಂಕಟ,ನೋವುಗಳಿಗೆ ಸ್ಪಂದನೆ ಮಾಡುವವನು ಸಾಹಿತ್ಯಕ್ಕೆ ಮಾನವೀಯ ಗುಣವಿದೆ ಎಂದು ನಿಕಟಪೂರ್ವ ಸರ್ವಾಧ್ಯಕ್ಷರಾದ ಸಾಹಿತಿ ಡಾ.ಜಯದೇವಿ ಗಾಯಕವಾಡ ನುಡಿದರು.

ಸರ್ವಾಧ್ಯಕ್ಷರಾದ ಶಿವರಾಜ ಡಿ. ಮೇತ್ರೆ ಅವರು ಶಿಕ್ಷಣ ಮಹತ್ವ ಮತ್ತು ಬೀದರ ಜಿಲ್ಲೆಯ ಕಾವ್ಯ ಪರಂಪರೆಯನ್ನು

ಮಹತ್ವ ಹೇಳಿ,ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ದಿನಾಚರಣೆ ಆಚರಿಸಲು ಸರರ್ಕಾರಕ್ಕೆ ಒತ್ತಾಯಿಸಿದರು.ಶಿಕ್ಷಕರ ಸಮಸ್ಯೆ ಸವಾಲುಗಳು ಬಗ್ಗೆ ತಿಳಿಸಿದ್ದಾರೆ.

ಪೂಜ್ಯ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ರು ಗವಿಮಠ ತ್ರಿಪುರಾಂತ, ಅವರು ಕವಿಗಳಲ್ಲಿ ದೊಡ್ಡ ಶಕ್ತಿಯಿದೆ,ಶಿಕ್ಷಕರು ಸಹ ಕವಿಗಳಾಗಿ ವಿದ್ಯಾರ್ಥಿಗಳ ಮನಸ್ಸಿಗೆ ಚಿಂತನೆ ನೀಡುತ್ತಾರೆ.ಮರಣವಿಲ್ಲದ ಸಾಹಿತ್ಯ ಕವಿ ಸಮ್ಮೇಳನವಾಗಿದೆ ಎಂದರು.

ಉರಿಲಿಂಗಪೆದ್ದಿ ಮಠದ ಬೇಲೂರು ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಅವರು ಇಂದು ಶಿಕ್ಷಕ- ಕವಿಗಳು ಸಮಾಜದ ಮುಖವಾಣಿಯಾಗಿದ್ದಾರೆ ಇದು ನಿಜವಾದ ಸಮ್ಮೇಳನವೆಂದರು ಯಲ್ಲಾಲಿಂಗೇಶ್ವರ ಮಠದ ಪೂಜ್ಯ ಮಹಾದೇವಿ ತಾಯಿ ಶರಣೆ,ವೇದಿಕೆಯಲ್ಲಿ ಉಪಸ್ಥಿತಿ ಇದ್ದರು.

ಗಜೇಂದ್ರ ಕನಕಟ್ಕರ ಮಾಜಿ ತಾ.ಪಂ.ಅಧ್ಯಕ್ಷ ಶಾಲಿವಾಹನ ರೂಗನ್,ಗ್ರಾ.ಪಂ.ಅಧ್ಯಕ್ಷರು ರವಿ ಹೊಸಹಳ್ಳಿ, ಶಿವಕುಮಾರ ಬಿರಾದಾರ, ಸಿದ್ರಾಮ ವಾಘಮಾರೆ,ಡಾ.ಶೀಲಾದೇವಿ ಬಿರಾದಾರ, ಸಂತೋಷ ನಾಯಿಕೊಡೆ,ಕಾಶಪ್ಪ ಹೊಳಕುಂದೆ,ಪಂಡಿತರೆಡ್ಡಿ, ಗೋವಿಂದ ಮೆಕಾಲೆ, ಪ್ರೀತಮ್ ಸಿಂಗ್ ಜಾಧವ, ಬಾಲಾಜಿರೆಡ್ಡಿ ತೇಕಲೆ,

ಸಂಯೋಜಕ ಡಾ‌.ಗವಿಸಿದ್ಧಪ್ಪ ಎ‌ಚ್.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು.ಆಕಾಶ ದಶರಥ ತೆಗನೂರು ವಂದಿಸಿದರು.

ಡಾ.ಪೀರಪ್ಪ ಸಜ್ಜನ,ಡಾ.ರಾಜಕುಮಾರ ಮಾಳಗೆ,ವಿಜಯ ಕುಮಾರ ರಡಜೆ,ನಿರೂಪಿಸಿದರು.

ಭವ್ಯ ಮೆರವಣಿಗೆ:

ಮೆರವಣಿಗೆ: ಯಲ್ಲಾಲಿಂಗೇಶ್ವರ ಆನಾಂದಾಶ್ರಮದಿಂದ ಲಿಂ.ಪೂಜ್ಯ ಶ್ರೀ ಯಲ್ಲಾಲಿಂಗೇಶ್ವರ ಮೂರ್ತಿಯೊಂದಿಗೆ ಸಮ್ಮೇಳನಾಧ್ಯಕ್ಷರಾದ ಶಿಕ್ಷಕ ಕವಿ ಶಿವರಾಜ ಡಿ ಮೇತ್ರೆ ಮತ್ತು ಶ್ರೀಮತಿ ಶಕುಂತಲಾ ಮೇತ್ರೆ ದಂಪತಿಗಳೊಂದಿಗೆ ಮೆರವಣಿಗೆಯ ಚಾಲನೆಯನ್ನು ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀ ಸಿದ್ರಾಮಪ್ಪ ಗುದಗೆ ನೀಡಿದರು. ಗೌಡಪ್ಪ ಪಾಟೀಲ,ಸಾಹಿತಿ ಡಾ.ಜಯದೇವಿಗಾಯಕವಾಡ,ಡಾ.ಶೀಲಾದೇವಿ ಬಿರಾದಾರ, ಡಾ.ಗವಿಸಿದ್ಧಪ್ಪ ಪಾಟೀಲ,ಡಾ.ರಾಜಕುಮಾರ ಮಾಳಗೆ,ಆಕಾಶ ತೆಗನೂರು ಭಕ್ತಾದಿಗಳು ಬಾಜಾ ಭಜಂತ್ರಿಯೊಂದಿಗೆ ನೆರವೇರಿತು