ವಿದ್ಯಾರ್ಥಿಗಳು ಆಲೋಚನಾಶಕ್ತಿ ಹೆಚ್ಚಿಸಿಕೊಳ್ಳಲು-ಹನುಮೇಗೌಡ ಕರೆ
ವಿದ್ಯಾರ್ಥಿಗಳು ಆಲೋಚನಾಶಕ್ತಿ ಹೆಚ್ಚಿಸಿಕೊಳ್ಳಲು-ಹನುಮೇಗೌಡ ಕರೆ
ಆಳಂದ: ನಮ್ಮ ಸುತ್ತಲಿನ ಘಟನೆ, ಆಗುಹೋಗುಗಳ ಕುರಿತು ಸಹಜ ಕುತೂಹಲ, ಜಿಜ್ಞಾಸೆ ಪ್ರವೃತ್ತಿಯುಳ್ಳ ವಿದ್ಯಾರ್ಥಿಗಳು ಅವುಗಳ ಕಾರ್ಯ, ಕಾರಣ ಸಂಬಂಧಗಳ ಕುರಿತು ಸ್ವಯಂ ಆಲೋಚನೆ ಮೂಲಕ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು ಯತ್ನಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಕೆ.ಹನುಮೇಗೌಡ ತಿಳಿಸಿದರು.
ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳಿಗಾಗಿ ವಿಜ್ಞಾನ ಮತ್ತು ವಿಕಸಿತ ಭಾರತ ಹಾಗೂ ವೈಜ್ಞಾನಿಕ ಮನೋಭಾವ ಇದು ಈ ಬಾರಿ ವಿಜ್ಞಾನ ದಿನಾಚರಣೆಯ ಘೋಷವಾಕ್ಯವಾಗಿದೆ. ಹೀಗಾಗಿ ಹೆಣ್ಣುಮಕ್ಕಳು ಮುಖ್ಯವಾಗಿ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕು. ಸಿ.ವಿ.ರಾಮನ್, ಸಿ.ಎನ್. ಆರ್ .ರಾವ, ಕಿರಣ ಮಂಜುಮದಾರ್, ಮೇರಿಕ್ಯೂರಿ ಅಂತಹ ವಿಜ್ಞಾನಿಗಳ ಸಾಧನೆಯಿಂದ ಪ್ರೇರಣೆ ಪಡೆದುಕೊಳ್ಳಲು ತಿಳಿಸಿದರು.
ವಿವೇಕ ವರ್ಧನಿ ಪಬ್ಲಿಕ್ ಶಾಲೆ ಪ್ರಾಚಾರ್ಯ ಸಂತೋಷ ಪಾಟೀಲ ಮಾತನಾಡಿ ವಿಜ್ಞಾನವು ನಮ್ಮ ಜೀವನದ ಭಾಗವಾಗಿದೆ. ಮನುಷ್ಯನ ಬೆಳವಣಿಗೆಗೆ ವಿಜ್ಞಾನವು ನೀಡಿದ ಕೊಡುಗೆ ಅವಿಸ್ಮರಣೀಯವಾದದು, ಶಿಸ್ತು, ಸಮರ್ಪಣೆ, ಅನ್ವೇಷಣಾ ಗುಣ ಹಾಗೂ ಸತತ ಅಧ್ಯಯನವು ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಅತ್ಯಗತ್ಯವಾಗಿದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಮಹಾದೇವಪ್ಪಾ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಭೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಹುದುಗಿರುವದು, ಕ್ರಿಯಾಶೀಲತೆ, ಪ್ರಯೋಗಗಳ ಮೂಲಕ ಹೊರಹೊಮ್ಮುವದು ಎಂದರು.
ಜೆಪಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಲ್ .ಎಸ್.ಬೀದಿ ಅವರು ವಿಜ್ಞಾನ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಚಾರ್ಯ ಸಂಜಯ ಪಾಟೀಲ ಅಧ್ಯಕ್ಷತೆವಹಿಸಿದರು.
ಉಪನ್ಯಾಸಕಿ ಶಹಗುಫ್ತಾ ನಾಜ್, ಮಹಾದೇವಿ ಮುನ್ನೋಳ್ಳಿ, ಆಯೇಷಾ ಸಿದ್ಧಕ್ಕಿ, ರೋಹಿಣಿ ತಾಟಿ, ಭಾಗ್ಯಶ್ರೀ ಫುಲಾರೆ ಮಾಣಿಕೇಶ್ವರಿ ಜಮಾದಾರ, ಸಚಿನ ಮೋರೆ, ವೈಜುನಾಥ ಜಿಡಗೆ, ಸಿದ್ದಾರ್ಥ ಹಸೂರೆ, ದೇವರಾಯ ನಾಯಕ ಉಪಸ್ಥಿತರಿದ್ದರು.
ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿಜ್ಞಾನ ರಂಗೋಲಿ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಮತ್ತು ವಿಜ್ಞಾನ ಮಹೆಂದಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಷಾ ಹಿರೇಮಠ ನಿರೂಪಿಸಿದರು. ಭಾಗ್ಯಶ್ರೀ ಫುಲಾರೆ ಸ್ವಾಗತಿಸಿದರು ಅಲ್ಫೀಯಾ ಬೇಗಂ ವಂದಿಸಿದರು.
ವರದಿ ಡಾ. ಅವಿನಾಶ.S ದೇವನೂರ
