ಪ್ರಶಸ್ತಿಗಿಂತ ಸಾಹಿತಿ, ಸಾಧಕರನ್ನು ಪ್ರೀತಿ, ಗೌರವ ದೊಡ್ಡದು : ನಿಂಗನಗೌಡ ದೇಸಾಯಿ

ಪ್ರಶಸ್ತಿಗಿಂತ ಸಾಹಿತಿ, ಸಾಧಕರನ್ನು ಪ್ರೀತಿ, ಗೌರವ  ದೊಡ್ಡದು : ನಿಂಗನಗೌಡ ದೇಸಾಯಿ

ಪ್ರಶಸ್ತಿಗಿಂತ ಸಾಹಿತಿ, ಸಾಧಕರನ್ನು ಪ್ರೀತಿ, ಗೌರವ ದೊಡ್ಡದು : ನಿಂಗನಗೌಡ ದೇಸಾಯಿ 

ಯಾದಗಿರಿ: ಪ್ರಶಸ್ತಿಗಿಂತಲೂ ತಮ್ಮೆಲ್ಲರ ಪ್ರೀತಿ , ಗೌರವ ಅಭಿಮಾನ ಎನಗೆ ದೊಡ್ಡದಾಗಿದೆ ಎಂದು ಸಾಹಿತಿ ಸಂಶೋಧಕ ನಿಂಗನಗೌಡ ದೇಸಾಯಿ ಪರಸನಹಳ್ಳಿ ಹೇಳಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕಡ್ಲೆಪ್ಪನವರ ನಿಷ್ಕ್ರಿ ವಿರಕ್ತ ಮಠದ ಪ್ರಭುಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿವರ್ಷ ಕೊಡಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಂದು ಸಾಹಿತ್ಯ ಎನ್ನುವುದು ಗಾಂಭೀರ್ಯತೆ ಇಲ್ಲದ್ದಾಗಿದೆ.ಸಾಹಿತ್ಯ ಮತ್ತು ಕೃತಿಗಳು ವಿಮರ್ಶೆಗೊಳ್ಳಬೇಕು, ಅಲ್ಲದೆ ನಮ್ಮ ಭಾಗದಲ್ಲಿ 1054 ಶಾಸನಗಳು ದೊರೆತಿದ್ದು ಅವುಗಳ ಸಂಗ್ರಹಣೆ ಮುಖ್ಯವಾಗಿದೆ, ಅದಕ್ಕಾಗಿ ಸುರಪುರ ಅಥವಾ ಕೆಂಭಾವಿಯಲ್ಲಿ ಒಂದು ಸಂಗ್ರಹಾಲಯ ಮಾಡಬೇಕು ಎಂದರು. 

ಅಲ್ಲದೆ ಇಂದು ಮದನಗೋಪಾಲ ನಾಯಕರು ಇಲ್ಲದ ನೋವು ಕಾಡುತ್ತಿದೆ, ಅವರು ಇದ್ದಾಗ ನನಗೆ ಪ್ರಶಸ್ತಿ ದೊರೆಯಬೇಕಿತ್ತು ಎಂದರು.ಕೊನೆಯದಾಗಿ ನಮ್ಮೂರ ದೆವ್ವಗಳು ಎನ್ನುವ ಕವನ ವಾಚನ ಮಾಡಿ ಸಮಾಜದಲ್ಲಿ ಕೆಡಕು ಹಾಗೂ ಅಶಾಂತಿ ಉಂಟುಮಾಡುವವರ ಕುರಿತು ವಿಡಂಬನೆಯನ್ನು ವ್ಯಕ್ತಪಡಿಸಿದರು.

ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು, ಕಸಾಪ ತಾಲೂಕ ಅಧ್ಯಕ್ಷ ಶರಣಬಸಪ್ಪ ಯಾಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಕಟ ಪೂರ್ವ ಕಸಾಪ ತಾಲೂಕ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ನಮ್ಮ ಭಾಗ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದೆ. ಆದರೆ ಇಂದು ನಿರಾಸಕ್ತಿ ಹೆಚ್ಚು ಕಂಡು ಬರುತ್ತಿದೆ. ನಮ್ಮವನೆ ಆದ ದೇವಾಪುರದ ಲಕ್ಷ್ಮೀಶನನ್ನು ಚಿಕ್ಕಮಗಳೂರಿನ ದೇವನೂರಿಗೆ ಹೊತ್ತೊಯ್ದಿದ್ದಾರೆ. ಇದನ್ನು ತನ್ನು ಕುರಿತು ಹಿರೇಮಗಳೂರ ತಿ ಕಣ್ಣನ್ ಅವರೊಂದಿಗೆ ಮಾತನಾಡುವಾಗ ನಾವು ನಿಮ್ಮ ಒಬ್ಬ ಲಕ್ಷ್ಮೀಶನನ್ನು ತಂದರೇನು, ನಿಮ್ಮಲ್ಲಿ ಸಾವಿರಾರು ಜನಲಕ್ಷ್ಮೀಶ

ಇದ್ದಾರೆ ಎನ್ನುತ್ತಾರೆ ಅಂತಹ ನೆಲ ನಮ್ಮದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಅವಲೋಕನ ಎನ್ನುವ ವಿಷಯದ ಕುರಿತು ಶಿಕ್ಷಕ ಶ್ರೀನಿವಾಸ ಕುಲಕರ್ಣಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಉಪಸ್ಥಿತರಿದ್ದರು.ದೇವು ಹೆಬ್ಬಾಳ ನಿರೂಪಿಸಿದರು, ವೆಂಕಟೇಶಗೌಡ ಪಾಟೀಲ್ ಸ್ವಾಗತಿಸಿದರು. ಸಾಹಿತಿ ಹೆಚ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಪ.ಮಾನು ಸಗರ,ಬಸವರಾಜ ಜಮದ್ರಖಾನಿ, ನಬಿಲಾಲ್ ಮಕಾಂದಾರ, ಎಂ.ಎಸ್. ಹಿರೇಮಠ,ವೀರಣ್ಣ ಕಲಕೇರಿ, ದೇವಿಂದ್ರಪ್ಪ ಕರಡಕಲ್, ಮಡಿವಾಳಪ್ಪ ಪಾಟೀಲ್, ಶ್ರೀಶೈಲ್ ಯಂಕಂಚಿ ,ಪಾರ್ವತಿ ದೇಸಾಯಿ, ಗೋಪಣ್ಣ ಯಾದವ್, ಈರಮ್ಮ ಬಸವಣ್ಣೆಪ್ಪ ಹಂಗರಗಿ, ಬಣಗಾರ, ಗಂಗಾಧರ ರುಮಾಲ್, ಸೇರಿ ಉಪಸ್ಥಿತರಿದ್ದರು.

ನಿಂಗನಗೌಡ ದೇಸಾಯಿಯವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ಸೂಲಗಿತ್ತಿ ಚನ್ನಬಸಮ್ಮ, ಡಾ.ಎಸ್.ಎಸ್.ಗುಬ್ಬಿ, ಶಿಲ್ಪಿಗಳಾದ ಶಕುಂತಲಾ ಎಮ್.ಬಡಿಗೇರ, ಅಮ್ಮಯ್ಯ ಲಿಂಗಯ್ಯ ಹಿರೇಮಠ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನೀಲಪ್ಪ ತೆಗ್ಗಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವರದಿಗಾರ ಬಸವಂತರಾಯಗೌಡ ಪಾಟೀಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶರಣಕುಮಾರ ಯಾಳಗಿ, ಕ್ರೀಡಾಪಟು ಮುತ್ತಮ್ಮ ಭೀಮಣ್ಣ ದೇವರಗೋನಾಲ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನೀಲಮ್ಮ ಹಾವೇರಿ,ಸುಜಾತಾ ನಾಯಕ, ತಿಪ್ಪೇಸ್ವಾಮಿ ಎಮ್.ಆರ್. ಗೀತಾ ಸಜ್ಜನ್, ಗೃಹ ರಕ್ಷಕ ದಳದ ಸಿನಿಯರ್ ಫ್ರಾಟೂನ್ ಕಮಾಂಡರ್ ವೆಂಕಟೇಶ್ವರ ಸುರಪುರ, ಶಿಲ್ಪಿ ಮಾನಯ್ಯ ಬಡಿಗೇರ ಇವರುಗಳಿಗೆಸನ್ಮಾನಿಸಲಾಯಿತು