ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರಿಗೆ ಗೌರವ ಸನ್ಮಾನ
ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರಿಗೆ ಗೌರವ ಸನ್ಮಾನ
ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ- ಸಿದ್ಧಾಂತಗಳಿಗಾಗಿ ಬದುಕುವುದು ನಮ್ಮ ಧೈಯವಾಗ ಬೇಕು. ಅಂಥವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸರ್ವೇಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು' ಎಂದು ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ನಗುನಗುತ್ತಾ ಹೇಳಿದರು
ಕಾರ್ಯಕ್ರಮ ನಿಮಿತ್ತ ಕಲಬುರಗಿ ನಗರಕ್ಕೆ ಆಗಮಿಸಿದ್ದು, ಅವರಿಗೆ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು, ಡಾ. ವೀರಶೆಟ್ಟಿ ಗಾರಂಪಳ್ಳಿ ,ಡಾ. ಆನಂದ ಸಿದ್ದಾಮಣಿ, ಪತ್ರಕರ್ತ, ಸಾಹಿತಿ ಶರಣಗೌಡ ಪಾಟೀಲ ಪಾಳಾ, ಸಾಹಿತಿ ವಿಶ್ವನಾಥ್ ಬಕರೆ, ಕಲಾವಿದ ಶಂಕರ ಹೂಗಾರ ಉಪಸ್ಥಿತರಿದ್ದರು.